

ಪುತ್ತೂರು ಗ್ರಾಮಾಂತರ: ಶಿಕ್ಷಕ ವೃತ್ತಿಗೆ ದೊರೆಯುವ ಗೌರವ ಅಧಿಕಾರಿಗಳಿಗೂ ದೊರೆಯುವುದಿಲ್ಲ. ಸರ್ಕಾರಿ ಸೇವೆಯಲ್ಲಿರುವಾಗ ಮಾಡಿದ ಸಾಧನೆಯೇ ಜನರ ಗೌರವಕ್ಕೆ ಪಾತ್ರವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕಿ ಹರಿಣಾಕ್ಷಿ ಸರ್ವರ ಅಭಿಮಾನ ಪಡೆದಿದ್ದಾರೆ ಎಂದು ಪುತ್ತೂರು ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಹೇಳಿದರು.
ಬಡಗನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂವತ್ತು ವರ್ಷಗಳ ಕಾಲ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹರಿಣಾಕ್ಷಿ ಅವರಿಗೆ ಎಸ್ಡಿಎಂಸಿ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ದರ್ಬೆತ್ತಡ್ಕ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿರುವ ಶಿಕ್ಷಕಿ ರಮ್ಯಾ ಅವರನ್ನು ಸನ್ಮಾನಿಸಲಾಯಿತು. ಶ್ರೀನಿವಾಸ್ ಭಟ್ ಚಂದುಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಜಯಂತ ರೈ, ನಾರಾಯಣ ರೈ, ನಾರಾಯಣ ನಾಯ್ಕ, ಬಾಲಸುಬ್ರಹ್ಮಣ್ಯ, ರಾಮಣ್ಣ ಗೌಡ, ಶಂಕರಿ ಪಟ್ಟೆ , ಕೃಷ್ಣ ರೈ ಕುದ್ಕಾಡಿ, ಜಯಲತಾ, ಜನಾರ್ದನ್ ಡಿ., ಲಹರಿ, ಲಕ್ಷೀತಾ, ಸುಶೀಲಾ ಪಕ್ಯೋಡ್, ಸುಜಾತಾ ಮೈಂದನಡ್ಕ, ಗಿರೀಶ್ ಗೌಡ, ಸುಮನ್ ಶೆಟ್ಟಿ, ತ್ಯಾಂಪಣ್ಣ ಸಿ.ಎಚ್., ಬಾಬು ಮೂಲ್ಯ, ಮಹಾಲಿಂಗ ಪಾಟಾಳಿ, ವಿಜಯಲಕ್ಷ್ಮೀ, ಸುಲೋಚನಾ, ಹರಿಣಾಕ್ಷಿ ಅವರ ಪತಿ ಲಂಬೋದರ ರೈ ಹಾಗೂ ತಾಯಿ ಲಕ್ಷ್ಮೀ ಮತ್ತಿತರರಿದ್ದರು. ಸುರೇಶ್ ರೈ ವಂದಿಸಿದರು. ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.