ದಾಖಲೆಯತ್ತ ಸಾಗುತ್ತಿದೆ 'ಬೇಬಿ'; 10 ದಿನದ ಒಟ್ಟು ಕಲೆಕ್ಷನ್​ ಎಷ್ಟು? ಇಲ್ಲಿದೆ ಮಾಹಿತಿ

Untitled design - 2023-07-24T183027.502
Published on

ಆಂಧ್ರಪ್ರದೇಶ: ವಿಜಯ್​ ದೇವರಕೊಂಡ ಸಹೋದರ ಆನಂದ್​ ದೇವರಕೊಂಡ ನಟನೆಯ 'ಬೇಬಿ' ಚಿತ್ರ ಬಿಡುಗಡೆಯಾಗಿ ಇಂದಿಗೆ 10 ದಿನಗಳು ಕಳೆದಿವೆ. ಜಾಗತಿಕವಾಗಿ ಉತ್ತಮ ಕಲೆಕ್ಷನ್ ಮಾಡುವ ಮುಖೇನ ಚಿತ್ರ ಇದೀಗ ಹೊಸ ದಾಖಲೆಯನ್ನು ಬರೆದಿದೆ.

ಆನಂದ್ ದೇವರಕೊಂಡ, ವೈಷ್ಣವಿ ಚೈತನ್ಯ ಮತ್ತು ವಿರಾಜ್ ಅಶ್ವಿನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬೇಬಿ, ರೋಮ್ಯಾಂಟಿಕ್ ಬ್ಲಾಕ್​ಬಸ್ಟರ್ ಚಿತ್ರವಾ​​ಗಿ ಹೊರಹೊಮ್ಮಿದೆ. ಸಿನಿಮಾ ಜಾಗತಿಕವಾಗಿ 66.60 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ಸಂಗ್ರಹಿಸುವ ಮೂಲಕ ಚಿತ್ರತಂಡಕ್ಕೆ ಮತ್ತು ಸಿನಿಪ್ರೇಕ್ಷಕರಿಗೆ ಸಂತಸವನ್ನು ನೀಡಿದೆ.

ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆ ನಿರ್ಮಿಸಿರುವ ಬೇಬಿ, 10ನೇ ದಿನದಂದು ಸಾರ್ವಕಾಲಿಕ ಟಾಪ್ 10 ಗಳಿಕೆಯ ತೆಲುಗು ಚಲನಚಿತ್ರಗಳ ಪಟ್ಟಿಯಲ್ಲಿ 9ನೇ ಸ್ಥಾನವನ್ನು ಪಡೆದುಕೊಂಡಿದೆ. ಚಿತ್ರವನ್ನು ಸಾಯಿ ರಾಜೇಶ್ ನೀಲಂ ನಿರ್ದೇಶನ ಮಾಡಿದ್ದು, ಎಸ್. ಕೆ.ಎನ್ ನಿರ್ಮಾಣ ಮಾಡಿದ್ದಾರೆ. ವಿಜಯ್ ಬಲ್ಗಾನಿನ್ ಅವರ ಸಂಗೀತ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net