

ಕೆಲವೊಮ್ಮೆ ನಂಬಲಸಾಧ್ಯವಾದ ಘಟನೆಗಳು ನಡೆಯುತ್ತವೆ. ಹಾಗೇ ಇದೀಗ ವೈದ್ಯಲೋಕವೂ ಅಚ್ಚರಿಗೊಳಗಾಗುವ ರೀತಿಯಲ್ಲಿ ಮಗುವೊಂದು ಜನಿಸಿದೆ. ಹಾಗಂತ ಮಗುವಿಗೆ ಏನೂ ಸಮಸ್ಯೆಯಿಲ್ಲ..ಆದರೆ ಅದು ಜನಿಸುವಾಗ ಅದರ ಕೈಯಲ್ಲಿದ್ದ ವಸ್ತುವೊಂದು ತೀರ ಅಚ್ಚರಿಮೂಡಿಸಿದೆ.
ವಿಯೆಟ್ನಾಂನ ಹಾಯ್ ಪಾಂಗ್ ಅಂತಾರಾಷ್ಟ್ರೀಯ ಆಸ್ಪತ್ರೆಯಲ್ಲಿ ಜನಿಸಿದ ಮಗುವೊಂದು ಸದ್ಯ ಸುದ್ದಿಯ ಕೇಂದ್ರಬಿಂದು. ಇದರ ಅಮ್ಮ ಧರಿಸಿದ್ದ ಕಾಪರ್ ಟಿ ಐಯುಡಿಯನ್ನು ಕೈಯಲ್ಲಿ ಹಿಡಿದುಕೊಂಡೇ ಹುಟ್ಟಿದೆ. ನಿಮಗೂ ಅಚ್ಚರಿಯಾಗಿರಬೇಕಲ್ಲ..ಇದೆಲ್ಲ ಹೇಗೆ ಸಾಧ್ಯವೆಂದು..ಇಲ್ಲಿದೆ ನೋಡಿ ಘಟನೆಯ ಸಂಪೂರ್ಣ ವಿವರಣೆ..
ಈ ಮಹಿಳೆಗೆ 34ವರ್ಷ. ಈಗಾಗಲೇ ಎರಡು ಮಕ್ಕಳು ಇದ್ದ ಕಾರಣ ಮತ್ತೆ ಮಗು ಬೇಡ ಎಂದು ನಿರ್ಧರಿಸಿ, ವೈದ್ಯರ ಬಳಿ ತೆರಳಿ ಗರ್ಭನಿರೋಧಕ, ಕಾಪರ್ ಟಿ ಸಾಧನವನ್ನು ಗರ್ಭಕೋಶಕ್ಕೆ ಅಳವಡಿಸಿಕೊಂಡಿದ್ದರು. ಎರಡು ವರ್ಷಗಳ ಹಿಂದೆಯೇ ಕಾಪರ್ ಟಿ ಧರಿಸಿದ್ದ ಮಹಿಳೆಗೆ ಮತ್ತೆ ಒಂದು ವರ್ಷದ ಬಳಿಕ ತಾನು ಗರ್ಭಿಣಿ ಎಂಬುದು ಗೊತ್ತಾಯಿತು. ತಾವು ಧರಿಸಿದ್ದ ಗರ್ಭಾಶಯದ ಸಾಧನ ಕೆಲಸ ಮಾಡಲಿಲ್ಲ ಎಂಬುದು ಅರಿವಿಗೆ ಬಂದಿತ್ತು. ಇನ್ನೇನು ಮಾಡುವುದು ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ ಎಂದಾದ ಮೇಲೆ ಮಹಿಳೆಯೂ ಸುಮ್ಮನಾಗಿಬಿಟ್ಟಿದ್ದರು. ಇದನ್ನೂ ಓದಿ: ಸ್ವಯಂಪ್ರೇರಿತ ಲಾಕ್ನಿಂದ ಹಿಂದೆ ಸರಿದ ವರ್ತಕರು ; ಆರ್ಥಿಕ ಬಿಕ್ಕಟ್ಟಿಗೆ ನಲುಗಿದ ತಿಪಟೂರಿನ ವ್ಯಾಪಾರಿಗಳು
ಇತ್ತೀಚೆಗೆ ಹಾಯ್ ಪಾಂಗ್ ಆಸ್ಪತ್ರೆಯಲ್ಲಿ ಅವರಿಗೆ ಹೆರಿಗೆಯಾಗಿದೆ. ಹೊಟ್ಟೆಯಿಂದ ಹೊರಬಂದ ಮಗು, ತನ್ನ ಅಮ್ಮನ ಕಾಪರ್ ಟಿ ಐಯುಡಿಯನ್ನು ಭದ್ರವಾಗಿ ಕೈಯಲ್ಲಿ ಹಿಡಿದುಕೊಂಡಿದೆ.
ಆಸ್ಪತ್ರೆ ಪ್ರಸೂತಿ ತಜ್ಞರಾದ ಟ್ರಾನ್ ವಿಯೆಟ್ ಫುವಾಂಗ್ ಅವರೇ ಮಗುವಿನ ಬಗ್ಗೆ ಹೇಳಿದ್ದಾರೆ. ಅಷ್ಟೇ ಅಲ್ಲ, ಕಾಪರ್ ಟಿ ಹಿಡಿದುಕೊಂಡು ಹುಟ್ಟಿದ ಮಗುವಿನ ಫೋಟೋ ಕೂಡ ತಾವೇ ತೆಗೆದಿದ್ದಾಗಿ ಹೇಳಿಕೊಂಡಿದ್ದಾರೆ. ಇದೊಂದು ಆಸಕ್ತಿದಾಯಕ ಮತ್ತು ತೀರ ಅಪರೂಪದ ಘಟನೆ ಎಂದೂ ವೈದ್ಯರು ತಿಳಿಸಿದ್ದಾರೆ.
ಹಳದಿ, ಕಪ್ಪು ಬಣ್ಣದ ಕಾಪರ್ ಟಿಯನ್ನು ಕೈಯಲ್ಲಿ ಹಿಡಿದಿರುವ ನವಜಾತ ಶಿಶುವಿನ ಫೋಟೋ ಸಿಕ್ಕಾಪಟೆ ವೈರಲ್ ಆಗಿದೆ. ಇದನ್ನು ನಂಬಬಹುದಾ ಎಂದು ಹಲವರು ಪ್ರಶ್ನಿಸಿದ್ದಾರೆ.
ಗರ್ಭಾಶಯದ ಸಾಧನ ಅದರ ಸ್ಥಳದಿಂದ ಜಾರಿದ ಪರಿಣಾಮ ಮಹಿಳೆ ಮತ್ತೆ ಗರ್ಭಧರಿಸಿದ್ದರು. ಅಳವಡಿಕೆ ಸರಿಯಾಗಿ ಆಗದೆ ಇದ್ದಾಗ ಇಂಥ ಪ್ರಮಾದ ಆಗುವ ಸಾಧ್ಯತೆ ಇರುತ್ತದೆ. ಆದರೆ ಆ ವಸ್ತುವನ್ನು ಮಗು ಹಿಡಿದುಕೊಂಡು ಹುಟ್ಟಿದ್ದು ಸಿಕ್ಕಾಪಟೆ ಅಪರೂಪ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ನಟಿ ಶ್ರುತಿ ಹಾಸನ್ಗೆ ಬಂದಿರೋ ಈ ಕಾಯಿಲೆಯೇ ವಿಚಿತ್ರ!!
ಮಗು ತುಂಬ ಆರೋಗ್ಯವಂತವಾಗಿದೆ. ತಾಯಿ-ಮಗುವನ್ನು ಅಬ್ಸರ್ವೇಶನ್ನಲ್ಲಿ ಇಡಲಾಗಿದೆ ಎಂದು ಆಸ್ಪತ್ರೆ ವರದಿ ಮಾಡಿದೆ.
ಕಾಪರ್ ಟಿ ಒಂದು ಉತ್ತಮ ಗರ್ಭನಿರೋಧಕ. ಮಿಲನದ ಸಂದರ್ಭದಲ್ಲಿ ವೀರ್ಯ ಗರ್ಭಾಶಯವನ್ನು ಪ್ರವೇಶಿಸಿ, ಮಹಿಳೆಯರ ಅಂಡಾಣುಗಳೊಂದಿಗೆ ಸೇರಿ ಫಲವತ್ತಾಗುವುದನ್ನು ತಪ್ಪಿಸಿ, ಗರ್ಭವನ್ನು ತಡೆಗಟ್ಟುತ್ತದೆ. (ಏಜೆನ್ಸೀಸ್)