ಬಬಿತಾ ಸೂರಜ್ ಅವರಿಗೆ ಅವಾರ್ಡ್

mng-22jan-babita shakti
Published on


ಮಂಗಳೂರು : ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲ ಬಬಿತಾ ಸೂರಜ್ ಮುಂಬೈನಲ್ಲಿ ಇಂಡಿಯನ್ ಸ್ಕೂಲ್ ಅವಾರ್ಡ್ಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಒಲಿಂಪಿಕ್ಸ್ ಕುಸ್ತಿಪಟು ಗೀತಾ ಫೊಗಾಟ್ ಅವರಿಂದ ಯಂಗ್ ಇನ್‌ಸ್ಪೈಯರಿಂಗ್ ಪ್ರಿನ್ಸಿಪಲ್ ಆಫ್ ದಿ
ಇಯರ್ ಪ್ರಶಸ್ತಿ ಪಡೆದರು.
ಬಬಿತಾ ಸೂರಜ್ ಅವರು ತಮ್ಮ ಶಾಲೆಯಲ್ಲಿ ಸಮಗ್ರ ಕಲಿಕೆಯ ವಾತಾವರಣದ ಪ್ರೋತ್ಸಾಹಕ್ಕಾಗಿ ತಮ್ಮ ಶಿಕ್ಷಕರ ತಂಡ ಮತ್ತು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಅವರ ಗಮನಾರ್ಹ ಸಾಧನೆಗಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗದ ಮುನ್ನೂರಕ್ಕೂ ಹೆಚ್ಚು ಪ್ರಾಂಶುಪಾಲರು, ನಿರ್ದೇಶಕರು ಹಾಗೂ ಶಿಕ್ಷಣ ತಜ್ಞರು ಭಾಗವಹಿಸಿದ್ದರು. ಬಬಿತಾ ಸೂರಜ್ ಅವರು ಶಿಕ್ಷಣ ತಜ್ಞರನ್ನೊಳಗೊಂಡ ಪ್ಯಾನೆಲ್ ಚರ್ಚೆಗಳಲ್ಲಿ ಭಾಗವಹಿಸಿದರು. ಬಬಿತಾ ಸೂರಜ್ ಅವರನ್ನು ಸಂಸ್ಥೆಯ ಸಂಸ್ಥಾಪಕ ಡಾ. ಕೆ. ಸಿ. ನಾಕ್,
ಕಾರ್ಯದರ್ಶಿ ಸಂಜಿತ್ ನಾಕ್, ಪ್ರಧಾನ ಸಲಹೆಗಾರ ರಮೇಶ್ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಎಚ್.ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net