ವಿರಾಟ್​ ಕೊಹ್ಲಿಯನ್ನು... ಬಾಬರ್ ಜತೆಗಿನ ಹೋಲಿಕೆ ಕುರಿತು ಶಾಕಿಂಗ್ ಹೇಳಿಕೆ ನೀಡಿದ Pak ಮಾಜಿ ಆಟಗಾರ

Virat Babar Azam
Published on

ನವದೆಹಲಿ: ಹಾಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಮುಂದಿನ ವಾರದಿಂದ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಜರುಗಲಿದೆ. ಭಾರೀ ಹೈಪ್​ನೊಂದಿಗೆ ಟೂರ್ನಿಯ ಆತಿಥ್ಯ ವಹಿಸಿದ್ದ ಆತಿಥೇಯ ಪಾಕಿಸ್ತಾನವು (Pakistan) ಒಂದು ಪಂದ್ಯವನ್ನು ಗೆಲ್ಲದೇ ಭಾರೀ ಮುಖಭಂಗವನ್ನು ಅನುಭವಿಸಿದ್ದು, ತಂಡದ ಪ್ರದರ್ಶನವೇ ಇದಕ್ಕೆ ಮುಖ್ಯ ಕಾರಣ ಎಂದು ಆರೋಪಿಸಲಾಗಿದೆ.

ಇದೀಗ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿರುವ ಪಾಕಿಸ್ತಾನದ (Pakistan) ಮಾಜಿ ನಾಯಕ ಸಲ್ಮಾನ್ ಭಟ್​, ಬಾಬರ್ ಅಜಂ ಪ್ರದರ್ಶನದ ಬಗ್ಗೆ ಮಾತನಾಡಿದ್ದು, ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್​ ಕೊಹ್ಲಿ ಅವರೊಂದಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.

Virat Babar

9 ಶತಕಗಳು ಮತ್ತು 26 ಅರ್ಧಶತಕಗಳೊಂದಿಗೆ ಅವರ ಟೆಸ್ಟ್ ಸರಾಸರಿ 44.5 ಆಗಿದೆ. 19 ಶತಕಗಳು ಮತ್ತು 32 ಅರ್ಧ ಶತಕಗಳೊಂದಿಗೆ ಏಕದಿನ ಸರಾಸರಿ 56.72 ಆಗಿದೆ. ಟಿ20ಯಲ್ಲಿ ಅವರ ಸರಾಸರಿ 41, ಸ್ಟ್ರೈಕ್ ರೇಟ್ 129. ಈ ಅಂಕಿಅಂಶಗಳು ಕಳೆದ 20 ವರ್ಷಗಳಿಂದ ಯಾರಿಂದಲೂ ಸಾಧಿಸಲು ಸಾಧ್ಯವಾಗಿಲ್ಲ. ನನ್ನ ಪ್ರಕಾರ ಬಾಬರ್​ರನ್ನು ಕೊಹ್ಲಿಗೆ ಹೋಲಿಸುವ ಅಗತ್ಯವಿಲ್ಲ. ಆತ ಪಾಕಿಸ್ತಾನ ಕಂಡ ಶ್ರೇಷ್ಟ ಆಟಗಾರ ಎಂದು ನಾನು ಹೇಳುತ್ತೇನೆ. 

ಸದ್ಯ ಆತ ರನ್ ಗಳಿಸದಿದ್ದುದ್ದನ್ನು ನೋಡಿದರೆ ಆತನಿಗೆ ಬ್ಯಾಕ್​ಅಪ್​ನ ಅವಶ್ಯಕತೆ ತುಂಬಾ ಇದೆ ನಾನು ಭಾವಿಸುತ್ತೇನೆ. ನೀವು ಅವನನ್ನು ಇಷ್ಟಪಡದಿದ್ದರೂ, ಆತನನ್ನು ಜಗತ್ತಿಗೆ ಹಾಡಿ ಹೊಗಳಬೇಕಾಗುತ್ತದೆ. ಕೊಹ್ಲಿ ಕೂಡ ಫಾರ್ಮ್​ನಲ್ಲಿ ಕುಸಿತ ಕಂಡಿದ್ದರು. ಆಗ ಅವರೊಂದಿಗೆ ಇಡೀ ತಂಡ ಜೊತೆಗೆ ನಿಂತಿತ್ತು. ಆದರೆ, ಬಾಬರ್​ನೊಂದಿಗೆ ಯಾರು ಇಲ್ಲ ಎಂದು ಮಾಜಿ ನಾಯಕ ಸಲ್ಮಾನ್​ ಭಟ್ ಅಭಿಪ್ರಾಯಪಟ್ಟಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net