

ಕರಾಚಿ: ಪಾಕಿಸ್ತಾನದ ಮಾಜಿ ನಾಯಕ ಹಾಗೂ ಅನುಭವಿ ಬ್ಯಾಟರ್ ಬಾಬರ್ ಅಜಮ್ (4,234) ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ರನ್ ಗಳಿಕೆಯಲ್ಲಿ ಭಾರತದ ರೋಹಿತ್ ಶರ್ಮ (4,231) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
ದ. ಆಫ್ರಿಕಾ ವಿರುದ್ಧ ಶುಕ್ರವಾರ ರಾತ್ರಿ ನಡೆದ 2ನೇ ಟಿ20 ಪಂದ್ಯದಲ್ಲಿ ಅಜೇಯ 11 ರನ್ ಗಳಿಸುವ ಅವರು ಈ ಸಾಧನೆ ಮಾಡಿದರು. 2024ರ ಡಿಸೆಂಬರ್ ಬಳಿಕ ಪಾಕ್ ಟಿ20 ತಂಡಕ್ಕೆ ಮರಳಿರುವ ಅವರು ಸರಣಿಯ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದರು.