ವಿಜಯೇಂದ್ರ ಉಸ್ತುವಾರಿಗೆ ಹೆಚ್ಚಿದ ಬೇಡಿಕೆ

Vijayendra 12 Jan 20
Published on

ಬೆಂಗಳೂರು: ಬೈಎಲೆಕ್ಷನ್​ಗಳ ಯಶಸ್ಸಿನ ಹಿಂದೆ ಬಿವೈ ವಿಜಯೇಂದ್ರ ಮಾಸ್ಟರ್ ಮೈಂಡ್ ಇರುವುದರಿಂದ ವಿಜಯೇಂದ್ರ ಉಸ್ತುವಾರಿಗೆ ಬೇಡಿಕೆ ಹೆಚ್ಚಾಗಿದೆ.

ಮಸ್ಕಿ ಉಪಚುನಾವಣೆಗೂ ವಿಜಯೇಂದ್ರ ಅವರಿಗೆ ಉಸ್ತುವಾರಿ ಕೊಡಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಬೇಡಿಕೆ ಸಲ್ಲಿಸಿದ್ದಾರೆ.

ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಹೆಚ್ಚು ಲಿಂಗಾಯತರು ಇದ್ದಾರೆ. ಹಾಗಾಗಿ ವಿಜಯೇಂದ್ರ ಅವರಿಗೆ ಉಸ್ತುವಾರಿ ನೀಡಿದರೆ ಉತ್ತಮ ಎಂದು ಸಿಎಂ ಬಳಿ ಕೇಳಿಕೊಂಡಿದ್ದೇವೆ ಎಂದಿದ್ದಾರೆ.

ಸದ್ಯ ಆರ್​ಆರ್​ ನಗರ ಹಾಗೂ ತುಮಕೂರಿನ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು ಗೆಲುವಿನತ್ತ ದಾಪುಗಾಲು ಇಡುತ್ತಿದೆ. ಶಿರಾದಲ್ಲಿ ಕಮಲ ಅರಳಿದ್ದಲ್ಲಿ ಅದರ ಹಿಂದಿನ ಶ್ರಮ ವಿಜಯೇಂದ್ರರಿಗೆ ಸಲ್ಲುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಮಂಡ್ಯದ ಕೆ.ಆರ್​. ಪೇಟೆಯಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಲು ವಿಜಯೇಂದ್ರ ಕಾರಣರಾಗಿದ್ದರು. ಹೀಗಾಗಿ ಅವರಿಗೆ ಬೇಡಿಕೆ ಹೆಚ್ಚಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net