ಪಾತ್ರಕ್ಕಾಗಿ ಪಲ್ಲಂಗಕ್ಕೆ ಕರೆಯುವ ಜನರ ಬಗ್ಗೆ ಬಾಲಿವುಡ್​ ನಟಿ ಹೇಳಿದ ಮಾತಿದು...!

Koena Mitra
Published on

ಮುಂಬೈ: ಬಾಲಿವುಡ್​ನ ಪ್ರಖ್ಯಾತ ನಟಿ ಹಾಗೂ​ ಮಾಡೆಲ್ ಕೊಯೆನಾ ಮಿತ್ರಾ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ. ಐಟಂ ಸಾಂಗ್​ ಹಾಗೂ ಗ್ಲಾಮರಸ್​ ಪಾತ್ರಗಳಿಂದ ಹೆಚ್ಚು ಸುದ್ದಿಯಾದವರು ಕೊಯೆನಾ. ಕೋಲ್ಕತ ಮೂಲದ ಕೊಯೆನಾ ಸಾಂಪ್ರದಾಯಿ ಕುಟುಂಬದಿಂದ ಬಂದರೂ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಕೊಯೆನಾ ಚಿತ್ರರಂಗದ ಪೆಡಂಭೂತ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದರು. ನೀವು ಎಂದಾದರೂ ಕಾಸ್ಟಿಂಗ್​ ಕೌಚ್​ ಸಂತ್ರಸ್ತೆಯಾಗಿದ್ದೀರಾ? ಎಂದು ಸಂದರ್ಶನದಲ್ಲಿ ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು ನಾನು ಸಂಜಯ್​ ದತ್​ ಮತ್ತು ಸಂಜಯ್​ ಗುಪ್ತಾರಿಂದ ಚಿತ್ರರಂಗಕ್ಕೆ ಪರಿಚಯವಾದ್ದರಿಂದ ನಾನು ಈ ವಿಚಾರದಲ್ಲಿ ಲಕ್ಕಿ ಎನ್ನಬಹುದು. ನಾನೆಂದು ಕಾಸ್ಟಿಂಗ್​ ಕೌಚ್​ ಎದುರಿಸಿಲ್ಲ ಮತ್ತು ನನಗೆ ಆ್ಯಟಿಟ್ಯೂಡ್​ ಪ್ರಾಬ್ಲಮ್​ ಇದೆ ಎಂದು ಕೆಲವರು ಭಾವಿಸಿದ್ದಾರೆ.

ಪಲ್ಲಂಗಕ್ಕೆ ಕರೆಯುವಂತಹ ಕೆಲವರು ಸಿನಿಮಾ ರಂಗದಲ್ಲಿ ಇದ್ದಾರೆ. ಕಾಸ್ಟಿಂಗ್​ ಕೌಚ್​ ಅನುಭವಿಸಿದ ಉದಾಹರಣೆಗಳು ಇವೆ. ಆದರೆ, ಕಾಸ್ಟಿಂಗ್​ ಕೌಚ್​ ಬಲೆಯಲ್ಲಿ ಬೀಳುವುದು ಮತ್ತು ಬೀಳದಿರುವುದು ನಮಗೆ ಬಿಟ್ಟಿದ್ದು ಎಂದಿದ್ದಾರೆ. ನನ್ನನ್ನು ಸಹ ಅನೇಕ ಮಂದಿ ಬೆದರಿಸಿದ್ದಾರೆ. ಆದರೆ, ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ಕ್ಷಣದವರೆಗೂ ಕಾಸ್ಟಿಂಗ್​ ಕೌಚ್​ ಎಂಬುದು ಸಿನಿರಂಗದಲ್ಲಿ ಸಾಮಾನ್ಯ ಸಂಗತಿಯಾಗಿದೆ ಎಂದು ಕೊಯೆನಾ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net