More

  ‘ಬ್ರಹ್ಮಾಸ್ತ್ರ’ 2 ಮತ್ತು 3 ಬಿಡುಗಡೆ ಯಾವಾಗ? ಕೊನೆಗೂ ಸಿಕ್ಕಿತು ಉತ್ತರ …

  ಮುಂಬೈ: ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅಭಿನಯದ ‘ಬ್ರಹ್ಮಾಸ್ತ್ರ’ ಬಿಡುಗಡೆ ಆದಾಗಿನಿಂದಲೂ ಕೇಳಿ ಬರುತ್ತಿದ್ದ ಒಂದು ಪ್ರಮುಖ ಪ್ರಶ್ನೆಯೆಂದರೆ, ಆ ಚಿತ್ರದ ಮುಂದುವರೆದ ಭಾಗಗಳ ಬಿಡುಗಡೆ ಯಾವಾಗ ಎಂದು? ಆದರೆ, ನಿರ್ದೇಶಕ ಅಯಾನ್​ ಮುಖರ್ಜಿಯಾಗಲೀ, ನಿರ್ಮಾಪಕ ಕರಣ್ ಜೋಹರ್​ ಆಗಲೀ ಆ ಚಿತ್ರಗಳ ಬಗ್ಗೆ ಯಾವೊಂದು ಮಾಹಿತಿಯನ್ನೂ ಬಿಟ್ಟುಕೊಟ್ಟಿರಲಿಲ್ಲ.

  ಇದನ್ನೂ ಓದಿ: VIDEO: ನಟಿ ನಯನತಾರಾ ಮಕ್ಕಳ ಪೂರ್ಣ ಹೆಸರೇನು ಗೊತ್ತಾ?

  ಈಗ ಕೊನೆಗೂ ‘ಬ್ರಹ್ಮಾಸ್ತ್ರ’ದ ಮುಂದುವರೆದ ಭಾಗಗಳ ಬಗ್ಗೆ ಸ್ಪಷ್ಟತೆ ಸಿಕ್ಕಿದ್ದು, ಎರಡನೇ ಭಾಗ 2026ರ ಕೊನೆಯಲ್ಲಿ ಬಿಡುಗಡೆಯಾದರೆ, ಮೂರನೇ ಭಾಗವು 2027ನೇ ಡಿಸೆಂಬರ್​ನಲ್ಲಿ ಬಿಡುಗಡೆಯಾಗಲಿದೆಯಂತೆ. ಅಷ್ಟೇ ಅಲ್ಲ, ಈ ಎರಡೂ ಭಾಗಗಳನ್ನು ಒಟ್ಟಿಗೇ ಚಿತ್ರೀಕರಣ ಮಾಡಿ, ಒಂದು ವರ್ಷದ ಗ್ಯಾಪ್​ನಲ್ಲಿ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಅಯಾನ್​ ಮುಖರ್ಜಿ ಹೇಳಿಕೊಂಡಿದ್ದಾರೆ.

  ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಅಯಾನ್​, ”ಬ್ರಹ್ಮಾಸ್ತ್ರ’ ಚಿತ್ರದ ಮುಂದುವರೆದ ಭಾಗಗಳ ಅಪಡೇಟ್ಸ್​ ಕೊಡಿ ಎಂದು ಎಲ್ಲರೂ ಕೇಳುತ್ತಲೇ ಇದ್ದರು. ಆದರೆ, ಅದಕ್ಕೆ ಸಮಯ ಬಂದಿರಲಿಲ್ಲ. ಈಗ ಕೊನೆಗೂ ಸಮಯ ಬಂದಿದ್ದು, ಎರಡನೆಯ ಭಾಗ 2026ಕ್ಕೆ ಮತ್ತು ಮೂರನೆಯ ಭಾಗವು 2027ರಲ್ಲಿ ಬಿಡುಗಡೆಯಾಗಲಿದೆ. ಈ ಎರಡೂ ಭಾಗಗಳು ‘ಬ್ರಹ್ಮಾಸ್ತ್ರ’ಕ್ಕಿಂತ ಬಹಳ ದೊಡ್ಡದಾಗಿ ಮೂಡಿಬರಲಿದ್ದು, ಈ ಚಿತ್ರದ ಸ್ಕ್ರಿಪ್ಟ್​ ಕೆಲಸಗಳಿಗೆ ಸಾಕಷ್ಟು ಸಮಯ ಹಿಡಿಯಲಿದೆ. ಎರಡೂ ಭಾಗಗಳ ಕಥೆ-ಚಿತ್ರಕಥೆಯನ್ನು ಒಟ್ಟಿಗೆ ಸಿದ್ಧಪಡಿಸಿಟ್ಟುಕೊಂಡು, ಒಟ್ಟಿಗೇ ಚಿತ್ರೀಕರಣ ಮಾಡುವ ಯೋಚನೆ ಇದೆ’ ಎಂದು ಹೇಳಿಕೊಂಡಿದ್ದಾರೆ.

  ಇದನ್ನೂ ಓದಿ: ಮಾಯಾವಿ ಯಾರು? ‘ಶಿವಾಜಿ ಸುರತ್ಕಲ್ 2’ ಟ್ರೇಲರ್ ಬಿಡುಗಡೆ …

  ಇವೆರಡೂ ಚಿತ್ರಗಳಿಗಿಂಥ ಮುನ್ನ ಅವರು ಇನ್ನೂ ಒಂದು ಬೇರೆ ಚಿತ್ರವನ್ನು ನಿರ್ದೇಶಿಸಲಿದ್ದಾರಂತೆ. ಆ ಚಿತ್ರ ಯಾವುದು ಎಂದು ಅವರು ಹೇಳಿಕೊಳ್ಳದಿದ್ದರೂ, ಮೂಲಗಳ ಪ್ರಕಾರ ಹೃತಿಕ್​ ರೋಶನ್​ ಅಭಿನಯದ ‘ವಾರ್​ 2’ ಚಿತ್ರವನ್ನು ಅಯಾನ್​ ನಿರ್ದೇಶನ ಮಾಡಲಿದ್ದಾರಂತೆ. ಇದಕ್ಕೂ ಮುನ್ನ, ‘ವಾರ್​’ ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದರು. ಎರಡನೆಯ ಭಾಗವನ್ನೂ ಅವರೇ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ಸಿದ್ಧಾರ್ಥ್​ ಇದೀಗ ಹೃತಿಕ್​ ರೋಶನ್​ ಅಭಿನಯದಲ್ಲಿ ‘ಫೈಟರ್​’ ಎಂಬ ಇನ್ನೊಂದು ಚಿತ್ರವನ್ನು ನಿರ್ದೇಶಿಸುತ್ತಿರುವ ಕಾರಣ, ‘ವಾರ್​ 2’ ಚಿತ್ರದ ಜವಾಬ್ದಾರಿಯನ್ನು ಅಯಾನ್​ಗೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

  ಬಾಯ್‌ಫ್ರೆಂಡ್ ಜತೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ನಟಿ ಜಾನ್ವಿ ಕಪೂರ್!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts