ಕಾಸರಗೋಡು: ರಾಷ್ಟ್ರೀಯ ನೇತ್ರದಾನ ಪಕ್ಷಾಚರಣೆಯ ಜಿಲ್ಲಾಮಟ್ಟದ ಉದ್ಘಾಟನೆ ಮತ್ತು ಜಾಗೃತಿ ವಿಚಾರ ಸಂಕಿರಣ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಸಮ್ಮೇಳನ ಸಭಾಂಗಣದಲ್ಲಿ ಜರುಗಿತು.
ಜಿಲ್ಲಾ ವೈದ್ಯಕೀಯ ಕಚೇರಿ(ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿಯ ಜಂಟಿ ಮೇಲ್ವಿಚಾರಣೆಯಲ್ಲಿ ಕಾರ್ಯಕ್ರಮ ನಡೆಯಿತು. ಅಧಿಕಾರಿ(ಆರೋಗ್ಯ) ಡಾ.ಎ.ವಿ.ರಾಮದಾಸ್ ಉದ್ಘಾಟಿಸಿದರು. ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ ಮಠತ್ತಿಲ್, ಅಪರ ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಸಯನಾ ಎಸ್, ಹಿರಿಯ ನೇತ್ರತಜ್ಞ ಸುರೇಶ್ ಕುಮಾರ್, ಉಷಾಕುಮಾರಿ ಮೊದಲಾದವರು ಭಾಗವಹಿಸಿದ್ದರು.
ಜಿಲ್ಲಾ ಆಸ್ಪತ್ರೆ ಕಾಞಂಗಾಡ್ ನೇತ್ರ ತಜ್ಞ ಡಾ.ಎಸ್.ಅಪರ್ಣ್ ಮತ್ತು ನೀಲೇಶ್ವರಂ ತಾಲೂಕು ಆಸ್ಪತ್ರೆ ಒಪ್ಟೋಮೆಟ್ರಿಸ್ಟ್ ಅಜೀಶ್ ಕುಮಾರ್ ವಿಚಾರ ಸಂಕಿರಣ ನಡೆಸಿಕೊಟ್ಟರು. ಆಗಸ್ಟ್ 25ಕ್ಕೆ ಆರಂಭಗೊಂಡಿರುವ ಅಭಿಯಾನ ಸೆಪ್ಟೆಂಬರ್ 8ರವರೆಗೆ ನಡೆಯಲಿದೆ.