

ಬೈಂದೂರು: ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್, ಉಪ್ಪುಂದ ಗ್ರಾಮ ಪಂಚಾಯಿತಿ, ಅರಿವು ಕೇಂದ್ರ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಪಂಚಾಯಿತಿ ಸಭಾಭವನದಲ್ಲಿ ಒಂದು ವಾರ ನಡೆದ ಅರಿವು ಶಿಬಿರದ ಸಮಾರೋಪ ಸಮಾರಂಭ ಗ್ರಾಪಂ ಅಧ್ಯಕ್ಷ ಮೋಹನ್‌ಚಂದ್ರ ಅಧ್ಯಕ್ಷತೆಯಲ್ಲಿ ಸಂಪನ್ನಗೊಂಡಿತು.
ಶಿಬಿರದಲ್ಲಿ ಒಟ್ಟು 40 ಮಕ್ಕಳು ಭಾಗವಹಿಸಿದ್ದರು. ಉಪ್ಪುಂದ ಫಿಷರಿಶ್ ಕಾಲನಿ ಶ್ರೀ ನಾಗಜಟ್ಟಿಗೇಶ್ವರ ಭಜನಾ ತಂಡದ ಸದಸ್ಯರು ಮಕ್ಕಳಿಗೆ ಭಜನಾ ತರಬೇತಿ ನೀಡಿದರು. ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಶ್ವೇತಾ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಯೋಗ ಶಿಕ್ಷಕಿ ಭಾರತಿ ಮಂಜುನಾಥ ಯೋಗ ತರಬೇತಿ ನೀಡಿದರು. ಕಿರಿಮಂಜೇಶ್ವರ ಗ್ರಾಪಂ ಗ್ರಂಥಪಾಲಕಿ ಶ್ರೀಮತಿ ಆಚಾರ್, ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಯಕ್ಷಕಲಾ ಟ್ರಸ್ಟ್ ಸದಸ್ಯರು ತರಬೇತಿ ನೀಡಿದರು.
ಗ್ರಾಪಂ ಸದಸ್ಯರಾದ ಶೇಖರ ಪೂಜಾರಿ, ಲಕ್ಷ್ಮೀ ಖಾರ್ವಿ, ಗಿರಿಜಾ, ಗ್ರಂಥಾಲಯ ಮೇಲ್ವಿಚಾರಕಿ ಮುಕಾಂಬು, ಪಂಚಾಯಿತಿ ಸಿಬ್ಬಂದಿ ಮತ್ತು ಸಂಜೀವಿನಿ ಒಕ್ಕೂಟದವರು ಉಪಸ್ಥಿತರಿದ್ದರು.