ಮಕ್ಕಳಲ್ಲಿ ಸಂಪ್ರದಾಯದ ಅರಿವು

paatashale
ಇತ್ತೀಚಿಗೆ ದ್ರಾವಿಡ ಬ್ರಾಹ್ಮಣ ಪರಿಷತ್ ಕುಂಭಾಶಿ ವಲಯದ ಕುಂಭಾಸಿ ಸೋದೆ ಮಠದಲ್ಲಿ ‘ಶ್ರಾವಣಸಂಜೆ’ ಕಾರ್ಯಕ್ರಮದಲ್ಲಿ ಮಂಜುನಾಥ ಭಟ್ ಹರೇಗೋಡು ಧಾರ್ಮಿಕ ಉಪನ್ಯಾಸ ನೀಡಿದರು.
Published on

ಕೋಟ: ಮನೆಯೇ ಮೊದಲ ಪಾಠಶಾಲೆ, ತಾಯಿ ಮಕ್ಕಳಿಗೆ ಸಂಸ್ಕಾರ, ಸಂಪ್ರದಾಯದ ಅರಿವು ನೀಡಿ ಬೆಳೆಸಬೇಕು, ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸುವ ಹೊಣೆಗಾರಿಕೆ ಆಕೆಯದ್ದು ಬದುಕಿನಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷವೆಂಬ ಚತುರ್ವಿಧ ಫಲ ಕೊಡುವಂತಹ ವಿದ್ಯೆ ಕಲಿಯಬೇಕೆಂದು ಎಂದು ವಿದ್ವಾನ್ ಮಂಜುನಾಥ ಭಟ್ ಹರೇಗೋಡು ಹೇಳಿದರು.

ದ್ರಾವಿಡ ಬ್ರಾಹ್ಮಣ ಪರಿಷತ್ ಕುಂಭಾಶಿ ವಲಯದ ಕುಂಭಾಸಿ ಸೋದೆ ಮಠದಲ್ಲಿ ಇತ್ತೀಚೆಗೆ ‘ಶ್ರಾವಣಸಂಜೆ’ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಅಧ್ಯಕ್ಷ ಶುಭಚಂದ್ರ ಹತ್ವಾರ್, ವಾಣಿ ಹತ್ವಾರ್, ಕೋಟೇಶ್ವರ ಬ್ರಾಹ್ಮಣ ಪರಿಷತ್ತಿನ ಮಹಿಳಾ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್, ವಲಯದ ಅಧ್ಯಕ್ಷ ರಮೇಶ್ ಚಾತ್ರ, ಮಾಜಿ ಅಧ್ಯಕ್ಷ ರಾಮಚಂದ್ರ ಹಂದೆ, ಲಕ್ಷ್ಮೀ ನಾರಾಯಣ ವೈದ್ಯ, ರಾಮಚಂದ್ರ ಉಪಾಧ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಧರ್ ಪುರಾಣಿಕ್, ವಿಷ್ಣುಮೂರ್ತಿ ಹೆಬ್ಬಾರ್, ಮಹಿಳಾ ಕಾರ್ಯದರ್ಶಿ ನಾಗರತ್ನ ಆಚಾರ್ಯ ಉಪಸ್ಥಿತರಿದ್ದರು.

ವಿಪ್ರ ಮಹಿಳೆಯರಿಂದ ಲಕ್ಷ್ಮೀಶೋಭಾನೆ, ಲಕ್ಷ್ಮೀ ಸಹಸ್ರನಾಮ ಸಹಿತ ಕುಂಕುಮಾರ್ಚನೆ, ಭಜನೆ ನೆರವೇರಿತು. ಮಹಿಳೆಯರು ಮಹಾಲಕ್ಷ್ಮಿಗೆ ಮಂಗಳಾರತಿ ಬೆಳಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net