

ಕಡಬ: ಯಾವುದೇ ಕೆಲಸದಲ್ಲಿ ಗೆಲ್ಲಲೇಬೇಕು ಎಂದು ಮಹಿಳೆ ಮನಸ್ಸು ಮಾಡಿದರೆ ಗೆಲುವು ಸಾಧಿಸುವ ತನಕ ವಿರಮಿಸುವುದಿಲ್ಲ. ಅಂತಹ ಶಕ್ತಿ ಮಹಿಳೆಯರಲ್ಲಿದೆ. ಆದರೆ ಅದನ್ನು ಸ್ವತಃ ಅರಿತು ಮುನ್ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಪುತ್ತೂರು ತಾ.ಪಂ. ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ ಅಭಿಪ್ರಾಯಪಟ್ಟರು.
ಜೇಸಿಐ ಕಡಬ ಕದಂಬ ಘಟಕದ ಆಶ್ರಯದಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಮತ್ತು ಜೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್ ಸಹಯೋಗದೊಂದಿಗೆ, ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕಡಬದ ಲ್ಲಿ ಭಾನುವಾರ ನಡೆದ ಮೆಗಾರ‌್ಯಾಲಿ ಮತ್ತು ಮಹಿಳಾ ಜಾಗೃತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಯೋಜನೆಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಕಡಬ ತಾಲೂಕು ಸಮನ್ವಯಾಧಿಕಾರಿ ಚೇತನಾ, ಸಂಪನ್ಮೂಲ ವ್ಯಕ್ತಿ ಜೇಸಿ ವಲಯ ತರಬೇತುದಾರೆ ಹೇಮಲತಾ ಪ್ರದೀಪ್ ಮಾತನಾಡಿದರು. ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಡಿ ಪ್ರೇಮಾ ವಿದ್ಯಾನಗರ ಅವರನ್ನು ಸನ್ಮಾನಿಸಲಾಯಿತು. ಜೇಸಿ ಘಟಕಾಧ್ಯಕ್ಷೆ ವಿಶ್ರುತಾ ರಾಜೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೇಸಿ ಸದಸ್ಯೆ ಪ್ರಣೀತಾ ದಿನೇಶ್ ಸ್ವಾಗತಿಸಿದರು. ಕಾರ್ಯದರ್ಶಿ ನವ್ಯಾಕೃಷ್ಣ ವಂದಿಸಿದರು. ವಿದ್ಯಾ ಅಶೋಕ್, ಶ್ರುತಿ ರಾಮಪ್ರಕಾಶ್ ಮತ್ತು ಪಂಚಮಿ ಜೋಶಿ ಅತಿಥಿಗಳನ್ನು ಪರಿಚಯಿಸಿದರು. ಮಹಿಳೆಯರಿಗೆ ವಿವಿಧ ಸ್ಪರ್ಧೆ ನಡೆಸಲಾಯಿತು. ಆರಂಭದಲ್ಲಿ ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಿಂದ ಶ್ರೀ ಶ್ರೀಕಂಠ ಸ್ವಾಮಿ ಮತ್ತು ಮಹಾಗಣಪತಿ ದೇವಸ್ಥಾನದ ತನಕ ಮೆರವಣಿಗೆ ನಡೆಯಿತು.