ಸ್ವಚ್ಛತೆ ಪಾಲನೆ, ಪರಿಸರ ಸಂರಕ್ಷಣೆಗೆ ಜಾಗೃತಿ ಅಗತ್ಯ

29.ಪಿವೈಪಿ.01 (1)
ಬೆಟ್ಟದತುಂಗ ಗ್ರಾಮದಲ್ಲಿ ಆಯೋಜಿಸಿದ್ದ ಶಿಬಿರವನ್ನು ಜೆ.ಎಸ್.ನಾಗರಾಜ್ ಉದ್ಘಾಟಿಸಿದರು. ಡಾ.ಚನ್ನಬಸವ, ಡಾ.ಅದ್ವೈತ್, ಸಿ.ಎನ್.ವಿಜಯ್, ಡಾ.ಶ್ರೀಜಿಷಾ, ವೈ.ಕೆ.ಸಿಂಗ್ರಿಸ್, ದಿವ್ಯಾ, ರಾಜು ಇದ್ದರು.
Published on

ಪಿರಿಯಾಪಟ್ಟಣ: ಸ್ವಚ್ಛತೆ ಪಾಲನೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸಗಳು ಎನ್ನೆಸ್ಸೆಸ್ ಶಿಬಿರಗಳಿಂದ ಆಗಬೇಕಿದೆ ಎಂದು ಪಿರಿಯಾಪಟ್ಟಣ ರೋಟರಿ ಐಕಾನ್ಸ್‌ನ ನಿಯೋಜಿತ ಅಧ್ಯಕ್ಷ ಜೆ.ಎಸ್.ನಾಗರಾಜ್ ಅಭಿಪ್ರಾಯಪಟ್ಟರು.

ವಿರಾಜಪೇಟೆಯ ಕೊಡಗು ದಂತ ಮಹಾವಿದ್ಯಾಲಯ ಮತ್ತು ಪಿರಿಯಾಪಟ್ಟಣ ರೋಟರಿ ಐಕಾನ್ಸ್, ಬೆಟ್ಟದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ತಾಲೂಕಿನ ಬೆಟ್ಟದತುಂಗ ಗ್ರಾಮದಲ್ಲಿ ಬುಧವಾರ ಆಯೋಜಿಸಿರುವ ಎನ್ನೆಸ್ಸೆಸ್ ಶಿಬಿರದಲ್ಲಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಶಿಬಿರಾರ್ಥಿಗಳು ಶ್ರಮದಾನ ಮಾಡಬೇಕು. ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಶಿಸ್ತಿನ ಪಾಠವನ್ನು ಕಲಿಯುವುದರ ಜತೆಗೆ ಸಭೆ ಸಮಾರಂಭಗಳಲ್ಲಿ ನಿರ್ಭಯವಾಗಿ ಮಾತನಾಡುವಂತಹ ವಾಕ್ಚಾತುರ್ಯವನ್ನು ಪಡೆಯಲಿದ್ದಾರೆ ಎಂದರು.

ವರದಕ್ಷಿಣೆ ಪಡೆಯುವುದು ಮತ್ತು ನೀಡುವುದು ಕಾನೂನಿನ ಪ್ರಕಾರ ಅಪರಾಧ. ಇತ್ತೀಚಿನ ದಿನಗಳಲ್ಲಿ ಜನನ ಪ್ರಮಾಣ ಪತ್ರ ಕಡ್ಡಾಯವಾಗಿದ್ದು ಈವರೆಗೂ ಜನನ ಪ್ರಮಾಣ ಪತ್ರ ಪಡೆಯದೆ ಇರುವವರು ತಮ್ಮ ಶಾಲಾ ದಾಖಲಾತಿಗಳನ್ನು ಪಡೆದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ. ಚಾಲನಾ ಪರವಾನಗಿ ಮತ್ತು ವಿಮೆ ಇಲ್ಲದೆ ವಾಹನ ಚಲಾಯಿಸುವುದು ಕಾನೂನಿನ ಉಲ್ಲಂಘನೆ ಆಗಲಿದ್ದು ಅಪಘಾತ ಸಂದರ್ಭಗಳಲ್ಲಿ ದುಬಾರಿ ದಂಡ ತೆರಬೇಕಾಗುತ್ತದೆ ಎಂದರು.

ವಿರಾಜಪೇಟೆಯ ಕೊಡಗು ದಂತ ಮಹಾ ವಿದ್ಯಾಲಯದ ವೈದ್ಯ ಡಾ.ಚನ್ನಬಸವ ಮಾತನಾಡಿದರು. ರೋಟರಿ ಐಕಾನ್ಸ್ ನಿರ್ದೇಶಕ ಸಿ.ಎನ್.ವಿಜಯ್, ಬೆಟ್ಟದತುಂಗ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ವೈ.ಕೆ.ಸಿಂಗ್ರಿಸ್, ಎನ್ನೆಸ್ಸೆಸ್ ಶಿಬಿರಾಧಿಕಾರಿಗಳಾದ ದಿವ್ಯಾ, ರಾಜು, ಕಾಲೇಜಿನ ಸಿಡಿಸಿ ಸದಸ್ಯ ಸಣ್ಣಸ್ವಾಮಿ, ವೈದ್ಯರಾದ ಡಾ.ಶ್ರೀಜಿಷಾ, ಡಾ.ಅದ್ವೈತ್, ಡಾ.ಭಾಗ್ಯಾ, ಡಾ.ಸಹನಾ, ಡಾ.ದಿವ್ಯಾ, ಡಾ.ಕಾವ್ಯಾ, ಡಾ.ಆದಿರಾ, ಡಾ.ಚೇತನಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net