ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಗೆ ಪ್ರಶಸ್ತಿ

Kdb_Karate
Published on

ಕಡಬ: ಪುತ್ತೂರಿನಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಷಿಪ್ ಯೆಲ್ಲೋ ಬೆಲ್ಟ್ ವಿಭಾಗದಲ್ಲಿ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಮಾಧ್ಯಮದ 4ನೇ ತರಗತಿ ವಿದ್ಯಾರ್ಥಿಗಳಾದ ಯದ್ವಿತ್ ಕೆ.ಪಿ. ಕಟಾ ವಿಭಾಗದಲ್ಲಿ ದ್ವಿತೀಯ, ಹರ್ಷಿತ್ ಕಟಾ ವಿಭಾಗದಲ್ಲಿ ತೃತೀಯ ಮತ್ತು ಕುಮಿಟೆ ವಿಭಾಗದಲ್ಲಿ ದ್ವಿತೀಯ, ಕೃತಿಕ್ ಕಟಾ ವಿಭಾಗದಲ್ಲಿ ತೃತೀಯ, 3ನೇ ತರಗತಿಯ ಮೋಹಿತ್ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಚಂದ್ರಶೇಖರ ಕನಕಮಜಲು ತರಬೇತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net