ಬೆಳ್ತಂಗಡಿ ಲಯನ್ಸ್ ಕ್ಲಬ್‌ಗೆ ಪ್ರಶಸ್ತಿ: 50 ವರ್ಷದ ಇತಿಹಾಸದಲ್ಲಿ ಎರಡನೇ ಬಾರಿ ಪುರಸ್ಕಾರ

lions club
ಲಯನ್ಸ್ ಜಿಲ್ಲಾ ಸಮ್ಮೇಳನದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಪ್ರಥಮ ಪ್ರಶಸ್ತಿ ಸ್ವೀಕರಿಸಿತು. ಉಮೇಶ್ ಶೆಟ್ಟಿ, ಅನಂತಕೃಷ್ಣ, ಸುಭಾಷಿಣಿ ಮೊದಲಾದವರಿದ್ದರು
Published on

ಬೆಳ್ತಂಗಡಿ: ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳನ್ನೊಳಗೊಂಡ 120 ಲಯನ್ಸ್ ಕ್ಲಬ್‌ಗಳಲ್ಲಿ ಸೇವೆ ಮತ್ತು ಇತರ ಎಲ್ಲ ವಿಭಾಗಗಳಲ್ಲಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ ಬೆಳ್ತಂಗಡಿ ಲಯನ್ಸ್ ಕ್ಲಬ್ ಮೂಲ್ಕಿ ಸುಂದರರಾಮ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಥಮ ಪ್ರಶಸ್ತಿ ಸ್ವೀಕರಿಸಿದೆ.

ಸುವರ್ಣ ಸಂಭ್ರಮದಲ್ಲಿರುವ ಬೆಳ್ತಂಗಡಿ ಲಯನ್ಸ್ ಕ್ಲಬ್‌ಗೆ 50 ವರ್ಷದ ಇತಿಹಾಸದಲ್ಲಿ ಇದು ಎರಡನೇ ಬಾರಿ ಜಿಲ್ಲಾ ಪ್ರಥಮ ಪ್ರಶಸ್ತಿಯ ಗರಿಯಾಗಿದೆ. ಗವರ್ನರ್ ಸಂಪುಟದ ಅಂತಿಮ ತೀರ್ಮಾನದಂತೆ ಅಧ್ಯಕ್ಷ ಉಮೇಶ್ ಶೆಟ್ಟಿ ಅತ್ಯುತ್ತಮ ಅಧ್ಯಕ್ಷರಾಗಿ ಮೂಡಿಬಂದರು. ಅನಂತಕೃಷ್ಣ ಅತ್ಯುತ್ತಮ ಕಾರ್ಯದರ್ಶಿಯಾಗಿ, ಸುಭಾಷಿಣಿ ಅತ್ಯುತ್ತಮ ಕೋಶಾಧಿಕಾರಿಯಾಗಿ ಪ್ರಶಸ್ತಿ ಸ್ವೀಕರಿಸಿದರು.

ವಸಂತ ಶೆಟ್ಟಿ, ಧರಣೇಂದ್ರ ಕೆ ಜೈನ್, ರಾಜು ಶೆಟ್ಟಿ, ನಿತ್ಯಾನಂದ ನಾವರ, ಪ್ರಕಾಶ್ ಶೆಟ್ಟಿ ನೊಚ್ಚ, ಡಾ.ದೇವಿಪ್ರಸಾದ್ ಬೊಲ್ಮ, ಹೇಮಂತ್ ರಾವ್ ಯರ್ಡೂರ್, ವಿಶ್ವನಾಥ್ ಆರ್.ನಾಯಕ್, ಅಶ್ರಫ್ ಆಲಿಕುಞಿ, ವಿನ್ಸೆಂಟ್ ಟಿ.ಡಿಸೋಜ ಗವರ್ನರ್ ಪ್ರಶಂಸನಾ ಪ್ರಶಸ್ತಿ ಸ್ವೀಕರಿಸಿದರು.

ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯ ಎಂ.ಜಿ.ಶೆಟ್ಟಿ, ಸದಸ್ಯರಾದ ರಾಮಕೃಷ್ಣ ಗೌಡ, ಜಯರಾಮ್ ಭಂಡಾರಿ, ಸುಶೀಲ ಎಸ್.ಹೆಗ್ಡೆ, ಮೇದಿನಿ ಡಿ.ಗೌಡ, ಕೃಷ್ಣ ಕೆ.ಆಚಾರ್, ರಘುರಾಮ ಶೆಟ್ಟಿ, ರಮೇಶ್ ಕುಮಾರ್, ದಿನೇಶ್ ಎಂ.ಎಸ್, ದತ್ತಾತ್ರೇಯ ಗೊಲ್ಲ, ಜಗನ್ನಾಥ್ ಶೆಟ್ಟಿ, ಸವಿತಾ ಉಮೇಶ್ ಶೆಟ್ಟಿ, ಪುಷ್ಪಾವತಿ ಎನ್.ನಾವರ, ಮಂಜುನಾಥ್ ಜಿ, ದೇವರಾಜ್, ಹೇಮಲತಾ, ನಾಣ್ಯಪ್ಪ, ಸುಂದರಿ, ಚಂದ್ರಶೇಖರ ಶೆಟ್ಟಿ, ಅಮಿತಾನಂದ ಹೆಗ್ಡೆ, ಕಿರಣ್ ಕುಮಾರ್ ಶೆಟ್ಟಿ, ಪ್ರಭಾಕರ್ ಗೌಡ ಬೊಲ್ಮ, ಕೃಷ್ಣ ಶೆಟ್ಟಿ ಧರ್ಮಸ್ಥಳ, ಪಂಚಾಕ್ಷರಪ್ಪ, ಲಿಯೋ ಕ್ಲಬ್ ಕಾರ್ಯದರ್ಶಿ ನಿರೀಕ್ಷಾ ಎನ್.ನಾವರ, ಲಿಯೋ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net