ಇಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ, ನೀರಜ್ ಚೋಪ್ರಾ ಸಹಿತ 12 ಸಾಧಕರಿಗೆ ಖೇಲ್‌ರತ್ನ

khelratna web
Published on

ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ಸಂಜೆ 4.30ರಿಂದ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಸ್ವರ್ಣ ವಿಜೇತ ನೀರಜ್ ಚೋಪ್ರಾ ಸಹಿತ 12 ಕ್ರೀಡಾಪಟುಗಳು ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್ ರಜತ ವಿಜೇತ ಕನ್ನಡಿಗ ಸುಹಾಸ್ ಯತಿರಾಜ್ ಸಹಿತ 35 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿ ಪಡೆಯಲಿದ್ದಾರೆ. 10 ಕೋಚ್‌ಗಳು ದ್ರೋಣಾಚಾರ್ಯ ಮತ್ತು ಐವರು ಮಾಜಿ ಕ್ರೀಡಾಪಟುಗಳು ಧ್ಯಾನ್‌ಚಂದ್ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಸಾಂಪ್ರದಾಯಿಕವಾಗಿ ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದು ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಆದರೆ ಈ ಬಾರಿ ಒಲಿಂಪಿಕ್ಸ್-ಪ್ಯಾರಾಲಿಂಪಿಕ್ಸ್ ಸಾಧಕರನ್ನೂ ಪ್ರಶಸ್ತಿಗೆ ಪರಿಗಣಿಸುವ ಸಲುವಾಗಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ವಿಳಂಬಗೊಳಿಸಲಾಗಿತ್ತು. ಕಳೆದ ವರ್ಷ ಕರೊನಾ ಹಾವಳಿಯಿಂದಾಗಿ ವರ್ಚುವಲ್ ಸಮಾರಂಭದ ಮೂಲಕ ಕ್ರೀಡಾ ಪ್ರಶಸ್ತಿಗಳನ್ನು ವಿತರಿಸಲಾಗಿತ್ತು.

ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್, ುಟ್‌ಬಾಲ್ ತಂಡದ ನಾಯಕ ಸುನೀಲ್ ಛೇಟ್ರಿ, ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್, ಗೋಲು ಕೀಪರ್ ಪಿಆರ್ ಶ್ರೀಜೇಶ್ ಖೇಲ್‌ರತ್ನ ಪ್ರಶಸ್ತಿ ಸ್ವೀಕರಿಸಲಿರುವ ಇತರ ಪ್ರಮುಖರು. ಕ್ರಿಕೆಟಿಗ ಶಿಖರ್ ಧವನ್, ಟೆನಿಸ್ ತಾರೆ ಅಂಕಿತಾ ರೈನಾ, ಕಬಡ್ಡಿ ಆಟಗಾರ ಸಂದೀಪ್ ನರ್ವಾಲ್ ಮತ್ತು ಒಲಿಂಪಿಕ್ಸ್ ಕಂಚು ವಿಜೇತ ಹಾಕಿ ತಂಡದ ಸದಸ್ಯರು ಅರ್ಜುನ ಪ್ರಶಸ್ತಿ ಸ್ವೀಕರಿಸಲಿರುವ ಇತರ ಪ್ರಮುಖರು.

ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿಯು ಪದಕ, ಪ್ರಶಸ್ತಿ ಪತ್ರ ಮತ್ತು 25 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ. ಅರ್ಜುನ ಪ್ರಶಸ್ತಿಯು ಅರ್ಜುನ ಪ್ರತಿಮೆ, ಪ್ರಶಸ್ತಿ ಪತ್ರ ಮತ್ತು 15 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ. ದ್ರೋಣಾಚಾರ್ಯ ಪ್ರಶಸ್ತಿಯೂ ಪ್ರತಿಮೆ, ಪ್ರಶಸ್ತಿ ಪತ್ರ ಮತ್ತು 15 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ. ಧ್ಯಾನ್‌ಚಂದ್ ಜೀವಮಾನ ಸಾಧನೆ ಪ್ರಶಸ್ತಿಯೂ ಪ್ರತಿಮೆ, ಪ್ರಶಸ್ತಿ ಪತ್ರ ಮತ್ತು 10 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ.

ಆರಂಭ: ಸಂಜೆ 4.30, ನೇರಪ್ರಸಾರ: ಡಿಡಿ ನ್ಯಾಷನಲ್.

ಖೇಲ್‌ರತ್ನ ಪುರಸ್ಕೃತರು
1. ನೀರಜ್ ಚೋಪ್ರಾ (ಅಥ್ಲೆಟಿಕ್ಸ್), 2. ರವಿ ಕುಮಾರ್ ದಹಿಯಾ (ಕುಸ್ತಿ), 3. ಲವ್ಲಿನಾ ಬೋರ್ಗೋಹೈನ್ (ಬಾಕ್ಸಿಂಗ್), 4. ಪಿಆರ್ ಶ್ರೀಜೇಶ್ (ಹಾಕಿ), 5. ಮನ್‌ಪ್ರೀತ್ ಸಿಂಗ್ (ಹಾಕಿ), 6. ಅವನಿ ಲೇಖರ (ಪ್ಯಾರಾ ಶೂಟಿಂಗ್), 7. ಸುಮಿತ್ ಆಂತಿಲ್ (ಪ್ಯಾರಾ ಅಥ್ಲೆಟಿಕ್ಸ್), 8. ಪ್ರಮೋದ್ ಭಗತ್ (ಪ್ಯಾರಾ ಬ್ಯಾಡ್ಮಿಂಟನ್), 9. ಕೃಷ್ಣ ನಗರ್ (ಪ್ಯಾರಾ ಬ್ಯಾಡ್ಮಿಂಟನ್), 10. ಮನೀಷ್ ನರ್ವಾಲ್ (ಪ್ಯಾರಾ ಶೂಟಿಂಗ್), 11. ಮಿಥಾಲಿ ರಾಜ್ (ಕ್ರಿಕೆಟ್), 12. ಸುನೀಲ್ ಛೇಟ್ರಿ (ಫುಟ್‌ಬಾಲ್).

ಅರ್ಜುನ ಪುರಸ್ಕೃತರು
1. ಅರ್ಪಿಂದರ್ ಸಿಂಗ್ (ಅಥ್ಲೆಟಿಕ್ಸ್), 2. ಶಿಖರ್ ಧವನ್ (ಕ್ರಿಕೆಟ್), 3. ಅಂಕಿತಾ ರೈನಾ (ಟೆನಿಸ್), 4. ಸಿಮ್ರಾನ್‌ಜಿತ್ ಕೌರ್ (ಬಾಕ್ಸಿಂಗ್), 5. ಭವಾನಿ ದೇವಿ (ಫೆನ್ಸಿಂಗ್), 6. ಮೋನಿಕಾ (ಹಾಕಿ), 7. ವಂದನಾ ಕಟಾರಿಯಾ (ಹಾಕಿ), 8. ಸಂದೀಪ್ ನರ್ವಾಲ್ (ಕಬಡ್ಡಿ), 9. ಹಿಮಾನಿ ಉತ್ತಮ್ ಪರಬ್ (ಮಲ್ಲಕಂಬ), 10. ಅಭಿಷೇಕ್ ವರ್ಮ (ಶೂಟಿಂಗ್), 11. ದೀಪಕ್ ಪೂನಿಯಾ (ಹಾಕಿ), 12. ಹರ್ಮಾನ್‌ಪ್ರೀತ್ ಸಿಂಗ್ (ಹಾಕಿ), 13. ರೂಪಿಂದರ್ ಪಾಲ್ ಸಿಂಗ್ (ಹಾಕಿ), 14. ಸುರೇಂದರ್ ಕುಮಾರ್ (ಹಾಕಿ), 15. ಅಮಿತ್ ರೋಹಿದಾಸ್ (ಹಾಕಿ), 16. ಬಿರೇಂದ್ರ ಲಾಕ್ರಾ (ಹಾಕಿ), 17. ಸುಮಿತ್ (ಹಾಕಿ), 18. ನೀಲಕಂಠ ಶರ್ಮ (ಹಾಕಿ), 19. ಹಾರ್ದಿಕ್ ಸಿಂಗ್ (ಹಾಕಿ), 20. ವಿವೇಕ್ ಸಾಗರ್ ಪ್ರಸಾದ್ (ಹಾಕಿ), 21. ಗುಜ್ರಾಂತ್ ಸಿಂಗ್ (ಹಾಕಿ), 22. ಮಂದೀಪ್ ಸಿಂಗ್ (ಹಾಕಿ), 23. ಶಂಶೇರ್ ಸಿಂಗ್ (ಹಾಕಿ), 24. ಲಲಿತ್ ಕುಮಾರ್ ಉಪಾಧ್ಯಾಯ (ಹಾಕಿ), 25. ವರುಣ್ ಕುಮಾರ್ (ಹಾಕಿ), 26. ಸಿಮ್ರಾನ್‌ಜೀತ್ ಸಿಂಗ್ (ಹಾಕಿ), 27. ದಿಲ್‌ಪ್ರೀತ್ ಸಿಂಗ್, 28. ಯೋಗೇಶ್ ಕಥುನಿಯ (ಪ್ಯಾರಾ ಅಥ್ಲೆಟಿಕ್ಸ್), 29. ನಿಶಾದ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), 30. ಪ್ರವೀಣ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), 31. ಸುಹಾಸ್ ಯತಿರಾಜ್ (ಪ್ಯಾರಾ ಬ್ಯಾಡ್ಮಿಂಟನ್), 32. ಸಿಂಗರಾಜ್ ಅಧಾನ (ಪ್ಯಾರಾ ಶೂಟಿಂಗ್), 33. ಭವಿನಾ ಪಟೇಲ್ (ಪ್ಯಾರಾ ಟೇಬಲ್ ಟೆನಿಸ್), 34. ಹರ್ವಿಂದರ್ ಸಿಂಗ್ (ಪ್ಯಾರಾ ಆರ್ಚರಿ), 35. ಶರದ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್).

ದ್ರೋಣಾಚಾರ್ಯ ಪುರಸ್ಕೃತರು
1. ಟಿಪಿ ಔಸ್ೆ (ಅಥ್ಲೆಟಿಕ್ಸ್), 2. ಸರ್ಕಾರ್ ತಲ್ವಾರ್ (ಕ್ರಿಕೆಟ್), 3. ಸರ್ಪಾಲ್ ಸಿಂಗ್ (ಹಾಕಿ), 4. ಆಶನ್ ಕುಮರ್ (ಕಬಡ್ಡಿ), 5. ತಪನ್ ಕುಮಾರ್ ಪನಿಗ್ರಹಿ (ಈಜು), 6. ರಾಧಾಕೃಷ್ಣನ್ ನಾಯರ್ ಪಿ. (ಅಥ್ಲೆಟಿಕ್ಸ್), 7. ಸಂಧ್ಯಾ ಗುರುಂಗ್ (ಬಾಕ್ಸಿಂಗ್), 8. ಪ್ರೀತಮ್ ಸಿವಚ್ (ಹಾಕಿ), 9. ಜೈ ಪ್ರಕಾಶ್ ನೌಟಯಲ್ (ಪ್ಯಾರಾ ಶೂಟಿಂಗ್), 10. ಸುಬ್ರಮಣ್ಯನ್ ರಾಮನ್ (ಟೇಬಲ್ ಟೆನಿಸ್).

ಧ್ಯಾನ್‌ಚಂದ್ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರು
1. ಲೇಖ ಕೆಸಿ (ಬಾಕ್ಸಿಂಗ್), 2. ಅಭಿಜೀತ್ ಕುಂಟೆ (ಚೆಸ್), 3. ದೇವಿಂದರ್ ಸಿಂಗ್ ಗರ್ಚಾ (ಹಾಕಿ), 4. ವಿಕಾಸ್ ಕುಮಾರ್ (ಕಬಡ್ಡಿ), 5. ಸಜ್ಜನ್ ಸಿಂಗ್ (ಕುಸ್ತಿ).

ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್: ಮಾನವ್ ರಚನಾ ಎಜುಕೇಶನಲ್ ಇನ್‌ಸ್ಟಿಟ್ಯೂಟ್, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್.

ಮೌಲಾನಾ ಅಬುಲ್ ಕಲಾಂ ಆಜಾದ್ ಟ್ರೋಫಿ: ಪಂಜಾಬ್ ವಿಶ್ವವಿದ್ಯಾಲಯ (ಚಂಡೀಗಢ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net