ಒಂದು ಪ್ಲೇಟ್​​ ಪಾನಿಪುರಿಗೆ 220 ರೂ.! avocado pani puri ವಿಡಿಯೋ ನೋಡಿ...

avocado pani puri
Published on

 avocado pani puri : ಪಾನಿ ಪೂರಿ ಒಂದು ಜನಪ್ರಿಯ ಹಾಗು ರುಚಿಕರವಾದ ಖಾದ್ಯ. ಭಾರತದಲ್ಲಿ ಪ್ರತಿಯೊಂದು ಊರಲ್ಲೂ ಪಾನಿ ಪೂರಿ ಗಾಡಿಗಳು ಕಾಣಸಿಗುತ್ತವೆ. ಆದರೆ ಇಲ್ಲೊಬ್ಬ ವ್ಯಾಪಾರಿ ಈ ಮಸಾಲಾವನ್ನು ಆರೋಗ್ಯಕರವಾದ ರೀತಿಯಲ್ಲಿ  ಗ್ರಾಹಕರು ಇಷ್ಟಪಡುವ ರೀತಿಯಲ್ಲಿ ಅದನ್ನು ಕಸ್ಟಮೈಸ್ ಮಾಡಲು ಒಂದು ಹೆಜ್ಜೆ ಮುಂದೆ ಇಟ್ಟು ಹೊಸ ರೀತಿ ಯೋಚನೆ ಮಾಡಿದ್ದಾನೆ.

ಗುರುಗ್ರಾಮದ ಗ್ಯಾಲೇರಿಯಾ ಮಾರುಕಟ್ಟೆಯಲ್ಲಿರುವ ವ್ಯಾಪಾರಿಯೊಬ್ಬ ಆವಕಾಡೊ  ಪಾನಿ ಪುರಿಯನ್ನು (  avocado pani puri ) ಪರಿಚಯಿಸಿದ್ದಾರೆ. ಇದನ್ನು ಆಲೂಗಡ್ಡೆ ಮಸಾಲಾ ಬದಲಿಗೆ ಆವಕಾಡೊ, ಈರುಳ್ಳಿ ಮತ್ತು ಟೊಮೆಟೊದೊಂದಿಗೆ ಬಡಿಸಲಾಗುತ್ತದೆ.   ಒಂದು ಪ್ಲೇಟ್​ಗೆ ಆರು ಪೂರಿಗಳು ಬರುತ್ತವೆ. ಇದರ ಬೆಲೆ ಬರೋಬ್ಬರಿ 220 ರೂಪಾಯಿ ಆಗಿದೆ.

ಈ ಅಸಾಮಾನ್ಯ ಸಂಯೋಜನೆಗಿಂತ ಆಶ್ಚರ್ಯಕರವೆಂದರೆ ಈ ವಿಶಿಷ್ಟ ಪಾನಿ ಪುರಿಯ ಬೆಲೆ. ಮಾರಾಟಗಾರರು 6 ಪಾನಿ ಪುರಿಗಳಿಗೆ ಜನರಿಗೆ 220 ರೂ. ವಿಧಿಸುತ್ತಿದ್ದಾರೆ. ಬಹುಶಃ ಇಡೀ ಕುಟುಂಬವು ಈ ಮೊತ್ತದಲ್ಲಿ ಪಾನಿ ಪುರಿಯನ್ನು ಆನಂದಿಸಬಹುದು. ಮಾರಾಟಗಾರರು ಇದನ್ನು 'ಆವಕಾಡೊ ಪಾನಿ ಪುರಿ' ಎಂದು ಕರೆಯುವ ಮೂಲಕ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದಾರೆ.

ಆಹಾರ ಬ್ಲಾಗರ್ ಕರಣ್ ಮಾರ್ವಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಇದರ ವಿಮರ್ಶೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆದರೆ ಪಾನಿಪುರಿ ಪ್ರಿಯರಿಗೆ  ಇದು ಇಷ್ಟವಾಗಲಿಲ್ಲ. ಜನರು ಕಾಮೆಂಟ್ ವಿಭಾಗದಲ್ಲಿ ಅಂಗಡಿಯವರನ್ನು ಟೀಕಿಸುತ್ತಿದ್ದಾರೆ. "220 ರೂ. ಬೆಲೆಯ ಪಾನಿಪುರಿಯನ್ನು ಯಾರು ತಿನ್ನುತ್ತಾರೆ ಭೈಯಾ" ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net