

ಬೆಂಗಳೂರು: ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್-2 ಚಿತ್ರ, ವಾರಾಂತ್ಯದಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ 435 ಮಿಲಿಯನ್ ಡಾಲರ್ಗಳನ್ನು ಎಣಿಸಿದೆ. 435 ಮಿಲಿಯನ್ ಎಂದರೆ ಎಷ್ಟು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ರೂಪಾಯಿಯಲ್ಲಿ ಎಣಿಸುವಾಗ ಅದು ಬರೊಬ್ಬರಿ 35,94,85,95,750 ರೂ.!
ಡಾಕ್ಟರ್ ಸ್ಟ್ರೇಂಜ್ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್ ಮತ್ತು ಸ್ಪೈಡರ್ ಮ್ಯಾನ್: ನೋ ವೇ ಹೋಮ್ ಚಿತ್ರಗಳ ನಂತರ ಕರೊನಾ ನಂತರದ ಸಮಯದಲ್ಲಿ ಉತ್ತಮ ಗಳಿಕೆ ಮಾಡುತ್ತಿರುವ ಸಿನಿಮಾ ಆಗಿ ಮೂಡಿಬರುತ್ತಿದೆ. ಆದರೂ ಅವತಾರ್ 1, ತನ್ನ ಮೊದಲ ವಾರದಲ್ಲಿ ಗಳಿಸಿದಷ್ಟು ಈ ಚಿತ್ರ ಗಳಿಸಿಲ್ಲ. ಈ ಸಿನಿಮಾ ಜನರ ಬಾಯಿ ಮಾತಿನಿಂದಲೇ ಪ್ರಚಾರ ಪಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಇನ್ನಷ್ಟು ಗಳಿಕೆ ಮಾಡಲಿದೆ ಎನ್ನುತ್ತಾರೆ ವಿಶ್ಲೇಷಕರು.
ಭಾರತದಲ್ಲೂ ಈ ಚಿತ್ರ ಗೆಲುವು ಸಾಧಿಸುತ್ತಿದ್ದು, ಮೊದಲ ದಿನವೇ 140 ಕೋಟಿ ರೂ.ಗಳನ್ನು ಬಾಚಿಕೊಂಡಿದೆ. ಅವತಾರ್ 2 ಚಿತ್ರದ ಆರಂಭ ಉತ್ತಮವಾಗಿದ್ದು ಮುಂದಿನ ದಿನಗಳಲ್ಲಿ ಎಷ್ಟು ಹಣ ಗಳಿಸಲಿದೆ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸೀಸ್)