VIDEO: ಆಶಿಕಾ ರಂಗನಾಥ್​ ಜನ್ಮದಿನಕ್ಕೆ ಟೀಸರ್ ಗಿಫ್ಟ್​ ನೀಡಿದ 'ಅವತಾರ್​ ಪುರುಷ'

dsrfsr
Published on

ಇಂದು (ಆ. 05) ಆಶಿಕಾ ರಂಗನಾಥ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿರುವ ಆಶಿಕಾ, ತಮ್ಮ ಹುಟ್ಟುಹಬ್ಬಕ್ಕೆ ಮನೆಯ ಹತ್ತಿರ ಬಂದು ವಿಶ್ ಮಾಡುವ ಬದಲು, ಎಲ್ಲರೂ ಒಂದೊಂದು ಗಿಡ ನೆಟ್ಟರೆ, ಅದೇ ನೀವು ನನಗೆ ಕೊಡುವ ಅತ್ಯಮೂಲ್ಯ ಉಡುಗೊರೆ ಎಂದು ಭಾವಿಸುತ್ತೇನೆ ಎಂದು ಆಶಿಕಾ ಹೇಳಿದ್ದರು. ಅದರಂತೆ ಸೋಷಿಯಲ್​ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೂ ಸುರಿದಿದೆ. ಚಿತ್ರತಂಡದವರೂ ಬಗೆಬಗೆ ರೀತಿಯಲ್ಲಿ ವಿಶ್​ ಮಾಡಿದ್ದಾರೆ.

ಆ ಪೈಕಿ ಸಿಂಪಲ್​ ಸುನಿ ನಿರ್ದೇಶನದಲ್ಲಿ ಸಿದ್ಧವಾಗಿರುವ ಅವತಾರ್ ಪುರುಷ ಚಿತ್ರದಿಂದ ಆಶಿಕಾ ಜನ್ಮದಿನದ ನಿಮಿತ್ತ ವಿಶೇಷ ಟೀಸರ್​ ಬಿಡುಗಡೆ ಮಾಡಿದೆ ಚಿತ್ರತಂಡ. ಕಾಗದದ ದೋಣಿಯಲ್ಲಿ ಹುಟ್ಟು ಹಬ್ಬದ ಶುಭಾಶಯಗಳು ಎಂದು ಬರೆದು ನೀರಿನಲ್ಲಿ ತೇಲಿಬಿಡುತ್ತಾನೆ ಕಥಾನಾಯಕ ಶರಣ್​. ಹಿನ್ನೆಲೆ ಸಂಗೀತದ ಮೂಲಕ ಕಿರಿದಾದ ಬರ್ತ್​ಡೇ ಟೀಸರ್​ ಗಮನ ಸೆಳೆಯುತ್ತದೆ.

ಪುಷ್ಕರ್​ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿರುವ ಈ ಸಿನಿಮಾ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿದೆ. ಇನ್ನೇನು ಕೊನೇ ಹಂತದ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಆಗಸ್ಟ್ ತಿಂಗಳಲ್ಲಿ ಬಿಡುಗಡೆಯ ಮಾಡುವ ಯೋಜನೆ ಹಾಕಿತ್ತು ಚಿತ್ರತಂಡ. ಆದರೆ, ಕರೊನಾದಿಂದಾಗಿ ಎಲ್ಲ ಸಿನಿಮಾ ರಿಲೀಸ್​ ಮುಂದೋಗಿದೆ.

ಅವತಾರ್ ಪುರುಷ, ಮದಗಜ ಚಿತ್ರತಂಡಗಳಷ್ಟೇ ಅಲ್ಲ, ನಿರ್ದೇಶಕ ಶಶಾಂಕ್​, ನಿರ್ಮಾಪಕರಾದ ಪುಷ್ಕರ್​ ಮಲ್ಲಿಕಾರ್ಜುನಯ್ಯ, ಉಮಾಪತಿ ಶ್ರೀನಿವಾಸ್​ ಸಹ ಆಶಿಕಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net