ಮೊದಲ ದಿನ 'ಅವತಾರ್ 2​' ಚಿತ್ರ ಭಾರತದಲ್ಲಿ ಗಳಿಸಿದ್ದೆಷ್ಟು ಗೊತ್ತಾ?

Avatar 2A
Published on

ಮುಂಬೈ: ಜೇಮ್ಸ್​ ಕ್ಯಾಮರನ್​ ನಿರ್ದೇಶನದ ಮಹತ್ವಾಕಾಂಕ್ಷೆಯ ಚಿತ್ರ 'ಅವತಾರ್​ - ದಿ ವೇ ಆಫ್​ ವಾಟರ್ಸ್​', ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಭಾರತದಲ್ಲೇ ಸಾವಿರಾರು ಚಿತ್ರಮಂದಿರಗಳಲ್ಲಿ ಈ ಚಿತ್ರವು ಬಿಡುಗಡೆಯಾಗಿದೆ. ಒಟ್ಟಾರೆ, ಈ ಚಿತ್ರವು ಮೊದಲ ದಿನ ಭಾರತದಲ್ಲಿ ಎಷ್ಟು ಗಳಿಕೆ ಮಾಡಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆ ಕುತೂಹಲಕ್ಕೆ ಈಗ ಕೊನೆಊ ಉತ್ತರ ಸಿಕ್ಕಿದೆ.

ಬಾಕ್ಸ್​ ಆಫೀಸ್​ ಪಂಡಿತರ ಲೆಕ್ಕಾಚಾರದ ಪ್ರಕಾರ, 'ಅವತಾರ್​' ಚಿತ್ರವು ಮೊದಲ ದಿನ ಭಾರತದಲ್ಲಿ 40 ಕೋಟಿ ರೂ. ಕಲೆಕ್ಷನ್​ ಮಾಡಿದೆಯಂತೆ. ಈ ಮೂಲಕ 'ಅವೆಂಜರ್ಸ್​ - ಇಣ್​ಫಿನಿಟಿ ವಾರ್​' ಮತ್ತು 'ಸ್ಪೈಡರ್​ ಮ್ಯಾನ್​ - ನೋ ವೇ ಹೋಮ್​' ಚಿತ್ರದ ಭಾರತದ ಮೊದಲ ದಿನಗದ ಕಲೆಕ್ಷನ್​ನ್ನು ಹಿಂದಿಕ್ಕಿದೆ.

ಈ ಪೈಕಿ 'ಅವೆಂಜರ್ಸ್​' ಚಿತ್ರವು ಮೊದಲ ದಿನ 31 ಕೋಟಿ ರೂ. ಸಂಪಾದಿಸಿದರೆ, 'ಸ್ಪೈಡರ್​​ಮ್ಯಾನ್​' ಚಿತ್ರವು 32 ಕೋಟಿ ರೂ. ಹಣ ಗಳಿಕೆ ಮಾಡಿದೆ. ಈಗ ಅವರೆಡೂ ಚಿತ್ರಗಳನ್ನು ಹಿಂದಿಕ್ಕಿ 'ಅವತಾರ್​ 2' ಮೊದಲ ದಿನ 40 ಕೋಟಿ ರೂ.ಗಳಷ್ಟು ಕಲೆಕ್ಷನ್​ ಮಾಡಿ, ಭಾರತದಲ್ಲಿ ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್​ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

'ಅವತಾರ್​ 2' ಚಿತ್ರವನ್ನು ಜೇಮ್ಸ್​ ಕ್ಯಾಮರಾನ್​ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಎಲ್ಲಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಚಿತ್ರವು ಜಗತ್ತಿನಾದ್ಯಂತ 40 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net