More

  ರಾತ್ರಿಯಿಡೀ ರೈಲ್ವೆ ಪ್ಲ್ಯಾಟ್​ಫಾರ್ಮ್‌ನಲ್ಲಿಯೇ ನಿಂತಿದ್ದ ಆಟೋ: ಕೆಲಹೊತ್ತು ಸಂಚಲನ, ಆದರೆ ನಡೆದಿದ್ದೇ ಬೇರೆ..

  ಥಾಣೆ: ರೈಲು ನಿಲ್ದಾಣದೊಳಗಿನ ಪ್ಲ್ಯಾಟ್​ಫಾರ್ಮ್‌ನಲ್ಲಿ ರಿಕ್ಷಾ ಚಾಲಕನೊಬ್ಬ ರಾತ್ರಿಯಿಡೀ ವಾಹನವನ್ನು ನಿಲ್ಲಿಸಿದ್ದು. ಇದು ಕೊಂಚ ಹೊತ್ತು ಸಂಚಲನ ಮೂಡಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಮೀರಾರೋಡ್ ನಿಲ್ದಾಣದಲ್ಲಿ ನಡೆದಿದೆ.

  ಇದನ್ನೂ ಓದಿ: ಪ್ಲಾಸ್ಟಿಕ್​ನಲ್ಲಿ ಸುತ್ತಿ ಮಗನ ಮೃತದೇಹವನ್ನು ಬೈಕ್​ನಲ್ಲೇ ಕೊಂಡೊಯ್ದ ತಂದೆ..!

  ಟಿಕೆಟ್ ಕಿಟಕಿಯ ಎದುರಿನ ಬಯಲಿನಲ್ಲಿಯೇ ರಿಕ್ಷಾವನ್ನು ನಿಲ್ಲಿಸಿರುವ ವ್ಯಕ್ತಿಯನ್ನು ಜೈರಾಜ್ ಚೌಹಾಣ್ (48) ಎಂದು ಗುರುತಿಸಲಾಗಿದ್ದು, ರೈಲ್ವೇ ಭದ್ರತಾ ಪಡೆ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದೆ. ನೈಗಾಂವ್‌ನ ನಿವಾಸಿಯಾಗಿರುವ ಈತ ಭಾನುವಾರ ಮಧ್ಯರಾತ್ರಿ ಮೀರಾ ರೋಡ್ ರೈಲ್ವೇ ನಿಲ್ದಾಣದ ಪೂರ್ವದ ನಾಲ್ಕನೇ ಪ್ಲ್ಯಾಟ್​ಫಾರ್ಮ್‌ಗೆ ರ‍್ಯಾಂಪ್‌ನ ಮೂಲಕ ಪ್ರವೇಶಿ, ರಿಕ್ಷಾವನ್ನು ಅಲ್ಲಿಯೇ ನಿಲ್ಲಿಸಿದ್ದನು.

  ರಿಕ್ಷಾ ಬೆಳಗಿನ ಜಾವದವರೆಗೂ ಅಲ್ಲೇ ನಿಂತಿದ್ದರಿಂದ ಇದು ಕೆಲಕಾಲ ಸಂಚಲನವನ್ನು ಮೂಡಿಸಿತ್ತು. ಅಲ್ಲದೇ ರಿಕ್ಷಾ ಚಾಲಕ ಚೌಹಾಣ್ ಪಾನಮತ್ತನಾಗಿದ್ದ ಎಂದು ವರದಿಯಾಗಿದ್ದು, ಈ ಹಿಂದೆಯೂ ಇಂತಹ ಕೆಲಸ ಮಾಡಿದ್ದರು ಎಂದು ಅಲ್ಲಿದ್ದವರು ಆರೋಪಿಸಿದ್ದಾರೆ.(ಏಜೆನ್ಸೀಸ್)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts