

ಹೆಬ್ರಿ: ರಿಕ್ಷಾ ಚಾಲಕರು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಸರ್ಕಾರದ ಸವಲತ್ತನ್ನು ವೇಗವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ಮುನಿಯಾಲು ಆಟೋ ರಿಕ್ಷಾ ಚಾಲಕ ಮತ್ತು ಮಾಲೀಕ ಸಂಘ ಗೌರವಾಧ್ಯಕ್ಷ ದಿನೇಶ್ ಪೈ ಮುನಿಯಾಲು ಹೇಳಿದರು.
ಮುನಿಯಾಲು ಶ್ರೀಗುರು ನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಭಾನುವಾರ ಆಟೋ ರಿಕ್ಷಾ ಚಾಲಕ ಮತ್ತು ಮಾಲೀಕರ ಸಂಘ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಹೆಬ್ರಿ ತಾಲೂಕು ಆಟೋ ರಿಕ್ಷಾ ಚಾಲಕ ಮತ್ತು ಮಾಲೀಕ ಸಂಘ ಗೌರವಾಧ್ಯಕ್ಷ, ಉದ್ಯಮಿ ಲಕ್ಷ್ಮೀನಾರಾಯಣ ನಾಯಕ್ ಕನ್ಯಾನ, ಕಾನೂನು ಸಲಹೆಗಾರ ಭರತ್ ಕುಮಾರ್ ಶೆಟ್ಟಿ ಪುರ ಮೆರವಣಿಗೆಗೆ ಚಾಲನೆ ನೀಡಿದರು. ರಿಕ್ಷಾ ನಿಲ್ದಾಣವನ್ನು ವರಂಗ ಗ್ರಾಪಂ ಅಧ್ಯಕ್ಷ ಸಂತೋಷ ಅಮೀನ್ ಉದ್ಘಾಟಿಸಿದರು. ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ತಾಲೂಕು ಆಟೋ ರಿಕ್ಷಾ ಚಾಲಕ ಮತ್ತು ಮಾಲೀಕ ಸಂಘ ಗೌರವಾಧ್ಯಕ್ಷ, ಉದ್ಯಮಿ ಲಕ್ಷ್ಮೀನಾರಾಯಣ ನಾಯಕ್ ಕನ್ಯಾನ, ಹೆಬ್ರಿ ತಾಲೂಕು ಆಟೋ ರಿಕ್ಷಾ ಚಾಲಕ ಮತ್ತು ಮಾಲೀಕ ಸಂಘ ಅಧ್ಯಕ್ಷ ಪ್ರಭಾಕರ ಪೂಜಾರಿ ಕುಚ್ಚೂರು, ಹೆಬ್ರಿ ತಾಲೂಕು ಆಟೋ ರಿಕ್ಷಾ ಚಾಲಕ ಮತ್ತು ಮಾಲೀಕ ಸಂಘದ ಕಾನೂನು ಸಲಹೆಗಾರ ಭರತ್ ಕುಮಾರ್ ಶೆಟ್ಟಿ, ಮುನಿಯಾಲು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಟಿ. ಮಂಜುನಾಥ ಪೂಜಾರಿ, ಹಿಂದು ಹೆಲ್ಪ್‌ಲೈನ್ ಜನ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ.ಸುದರ್ಶನ್ ಹೆಬ್ಬಾರ್ ಮುನಿಯಾಲು, ವರಂಗ ಗ್ರಾಪಂ ಅಧ್ಯಕ್ಷ ಸಂತೋಷ ಅಮೀನ್, ಪ್ರಧಾನ ಕಾರ್ಯದರ್ಶಿಗಳಾದ ಹೆಬ್ರಿಯ ಶ್ರೀನಾಥ್ ಶೆಟ್ಟಿಗಾರ್ ಬೆಳಗುಂಡಿ, ಮುನಿಯಾಲಿನ ಸಂತೋಷ ನಾಯ್ಕ, ಕೋಶಾಧಿಕಾರಿ ದಿನೇಶ್ ನಾಯ್ಕ ಉಪಸ್ಥಿತರಿದ್ದರು.
ಹಿರಿಯ ರಿಕ್ಷಾ ಚಾಲಕರಾದ ಶಿವ ನಾಯ್ಕ, ಭೋಜನಾಯ್ಕ, ಚಿನ್ನವನ್ನು ವಾರಿಸುದಾರರಿಗೆ ಮುಟ್ಟಿಸಿದ ಪ್ರಾಮಾಣಿಕ ರಿಕ್ಷಾ ಚಾಲಕರಾದ ರತ್ನಾಕರ ನಾಯ್ಕ ಖಜಾನೆ, ಸುಂದರ ಕುಲಾಲ್ ಸೋಮೇಶ್ವರ, ಆರ್‌ಟಿಓ ಕ್ಯಾಂಪ್ ಹೆಬ್ರಿ ಯಲ್ಲಿ ಆರಂಭವಾಗಲು ಪ್ರಮುಖರಾದ ಪ್ರಭಾಕರ ಪೂಜಾರಿ ಕುಚ್ಚೂರು ದಂಪತಿಯನ್ನು ಸನ್ಮಾನಿಸಲಾಯಿತು.