

ಕಾಸರಗೋಡು: ಮನೆ ಸನಿಹ ಮಾದಕ ಪದಾರ್ಥ ಸೇವಿಸುತ್ತಿರುವುದನ್ನು ಪ್ರಶ್ನಿಸಿದ ದ್ವೇಷದಿಂದ ತಂಡವೊಂದು ಥಳಿಸಿದ ಪರಿಣಾಮ ಆಟೋ ಚಾಲಕ, ನೀರ್ಚಾಲು ನಿವಾಸಿ ಫಾರೂಕ್ ಎಂಬುವರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸಾನು ಎಂಬಾತನ ವಿರುದ್ಧ ಪೊಲಿಸರು ಕೇಸು ದಾಖಲಿಸಿಕೊಂಡಿದ್ದಾರೆ. ಮನೆ ಸಮೀಪ ತಂಡವೊಂದು ಮಾದಕ ಪದಾರ್ಥ ಸೇವಿಸುತ್ತಿರುವುದನ್ನು ವಿರೋಧಿಸಿ ಫಾರೂಕ್ ಅವರಿಗೆ ಅಲ್ಲಿಂದ ಹಿಂತೆರಳುವಂತೆ ಸೂಚಿಸಿದ್ದರು. ಇದರಿಂದ ಕುಪಿತರಾದ ತಂಡ ಫಾರೂಕ್ ಮೇಲೆ ಹಲ್ಲೆ ನಡೆಸಿದ್ದು, ಗಾಯಾಳು ಕಾಸರಗೋಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.