

ಚಿಕ್ಕಬಳ್ಳಾಪುರ: ತಂದೆಯನ್ನು ಅವರ ಮನೆಯಿಂದಲೇ ಹೊರ ಹಾಕಿದ್ದ ಮಗಳಿಗೆ ಇಲ್ಲಿ ಅಧಿಕಾರಿಗಳು ತಕ್ಕ ಪಾಠ ಕಲಿಸಿದ್ದಾರೆ.
ಹೌದು! ಚಿಕ್ಕ ವಯಸ್ಸಿನಿಂದ ಸಾಕಿ ಸಲುಹಿದ್ದ ವೃದ್ಧ ತಂದೆಯನ್ನು ಅಂಗನವಾಡಿ ಶಿಕ್ಷಕಿಯಾಗಿರುವ ಮಗಳು ಬೀದಿಗೆ ತಳ್ಳಿದ್ದಳು. ಇದರ ಬಗ್ಗೆ ಅಳಲು ತೋಡಿಕೊಂಡ ಸಂತ್ರಸ್ಥನಿಗೆ ತಹಸೀಲ್ದಾರ್ ಅನಿಲ್ ನಿಯಮಾನುಸಾರ ನ್ಯಾಯ ಕೊಡಿಸಿದ್ದಾರೆ.
ಇಲ್ಲಿನ ಶಾಂತಿನಗರದ ವೆಂಕಟರೋಣಪ್ಪ (72) ಕೊನೆಗೆ ಮನೆಯನ್ನು ದಕ್ಕಿಸಿಕೊಂಡ ತಂದೆ. ಅಂಗನವಾಡಿ ಶಿಕ್ಷಕಿ ಸುಬ್ಬಲಕ್ಷಿ$್ಮ ತಂದೆಯ ಆಸ್ತಿಯನ್ನು ಕೊಟ್ಟು ಬೇರೆ ಮನೆ ನೋಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದ್ದಾಳೆ.
*ಪ್ರಕರಣದ ಹಿನ್ನೆಲೆ
ತಂದೆ ವೆಂಕಟ್ರೋಣಪ್ಪರೊಂದಿಗೆ ಸುಬ್ಬಲಕ್ಷಿ$್ಮಯು ಗಂಡ, ಮಕ್ಕಳ ಜತೆ ನೆಲೆಸಿದ್ದಳು. ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ಬರು ಬರುತ್ತ ತಂದೆಯ ಕಡೆಗಣನೆ, ತೆಗಳುವಿಕೆಯು ಹೆಚ್ಚಾಗಿದೆ. ಸರಿಯಾಗಿ ಊಟವನ್ನು ಹಾಕುತ್ತಿರಲಿಲ್ಲ. ಜತೆಗೆ ಅಪ್ಪನನ್ನು ಮನೆಯಿಂದ ಹೊರಗೆ ಹೋಗುವಂತೆ ಗದರುತ್ತಿದ್ದಳು. ಇದರಿಂದ ಮನನೊಂದ ಆಶ್ರಯವಿಲ್ಲದಿರುವುದು, ಮನೆಯನ್ನು ಮಗಳು ಪಡೆದುಕೊಂಡಿರುವುದರ ಬಗ್ಗೆ ವೃದ್ಧ ಹಿರಿಯ ನಾಗರಿಕರ ಪೋಷಣೆ ಮತ್ತು ಶ್ರೇಯೊಭಿವೃದ್ಧಿ ಹಾಗೂ ಸಂರಕ್ಷಣಾ ಕಾಯ್ದೆ 2007ರಡಿ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ದಾಖಲೆಗಳ ಪ್ರಕಾರ ಮನೆಯನ್ನು ವೆಂಕಟರೋಣಪ್ಪಗೆ ಬಿಟ್ಟು ಕೊಡಬೇಕು. ಹಾಗೆಯೇ ಪ್ರತಿ ತಿಂಗಳ ಐದು ಸಾವಿರ ರೂಪಾಯಿ ಹಣ ನೀಡಬೇಕು ಎಂದು ಆದೇಶ ನೀಡಿದ್ದಾರೆ. ಇದರಂತೆ ತಹಸೀಲ್ದಾರ್ ಅನಿಲ್ ಪೊಲೀಸರೊಂದಿಗೆ ಬಂದು ಮಗಳಿಂದ ವೃದ್ಧನಿಗೆ ಮನೆ ಕೊಡಿಸುವ ಕೆಲಸ ಮಾಡಿದ್ದಾರೆ.
*ಮಗಳ ಹೈ ಡ್ರಾಮಾ
ದಾಖಲೆಗಳೊಂದಿಗೆ ಅಧಿಕಾರಿಗಳು ಮನೆಯ ಬಳಿಗೆ ಬರುತ್ತಿದ್ದಂತೆ ಮಗಳು ಹೈ ಡ್ರಾಮಾ ಮಾಡಿದ್ದಾಳೆ. ಅಪ್ಪ, ನೀನು ಮಾಡಿದ್ದು ಸರೀನಾ?, ಮಗಳು ಎನ್ನುವ ಪ್ರೀತಿ ಇಲ್ಲವೇ? ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಪ್ರತಿಯಾಗಿ ನೀನು ನನ್ನನ್ನು ಹೇಗೆ ನೋಡಿಕೊಂಡೆ, ನಾನು ಹೇಗೆ ಬದುಕಲಿ ಎಂದು ವೆಂಕಟ್ರೋಣಪ್ಪ ಅಳಲು ತೋಡಿಕೊಂಡಿದ್ದಾರೆ. ಇದು ಒಂದು ಹಂತದಲ್ಲಿ ಮಾತಿನ ಜಟಾಪಟಿಗೆ ತಿರುಗಿತು. ಮನೆಗೆ ಬಂಡವಾಳ ಹೂಡಲಾಗಿದೆ. ಈಗ ಮನೆಯಿಂದ ಹೊರಗೆ ಹೋದರೆ ಹಣ ಯಾರು ಕೊಡುತ್ತಾರೆ?. ಎಲ್ಲವನ್ನೂ ನಮ್ಮ ಮೇಲೆ ಹಾಕಿ, ಟೀಕಿಸಲಾಗುತ್ತಿದೆ. ನಮಗೂ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪದ ಅಧಿಕಾರಿಗಳು, ನಿಯಮಾನುಸಾರ ತಂದೆಯ ಆಸ್ತಿಯನ್ನು ಅವರಿಗೆ ಬಿಟ್ಟು ಕೊಟ್ಟು ಹೋಗಬೇಕು. ಇಲ್ಲದಿದ್ದಲ್ಲಿ ಕಾನೂನಿನ ಪ್ರಕಾರ ನಿರ್ದಾಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.