ಆಸ್ಟ್ರೇಲಿಯನ್ನರು ದ್ವೇಷಿಸುವ ಬ್ಯಾಟ್ಸ್​​ಮನ್​ ಚೇತೇಶ್ವರ್​​ ಪೂಜಾರ! ಕಾರಣ ಬಿಚ್ಚಿಟ್ಟ ಆಸ್ಟ್ರೇಲಿಯಾ ವೇಗಿ

New Project (13)
Published on

ಬೆಂಗಳೂರು: ಟೆಸ್ಟ್​ ಪಂದ್ಯಗಳಲ್ಲಿ ಭಾರತೀಯ ಬ್ಯಾಟ್ಸ್​​​ಮ್ಯಾನ್​ ಚೇತೇಶ್ವರ್​​ ಪೂಜಾರ ಅವರಿಗೆ ಬೌಲಿಂಗ್​​​ ಮಾಡುವುದು ಕಷ್ಟಕರ ಮತ್ತು ಅವರನ್ನು ಔಟ್​ ಮಾಡುವುದೇ ಒಂದು ದೊಡ್ಡ ಥ್ರಿಲ್​ ಎಂದು ಆಸ್ಟ್ರೇಲಿಯಾದ ವೇಗದ ಬೌಲರ್​ ಜೋಶ್​ ಹೇಜಲ್​ವುಡ್​ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ RCB ಪಾಡ್​ಕ್ಯಾಸ್ಟ್​ನಲ್ಲಿ ಮಾತನಾಡಿದ ಆಸ್ಟ್ರೇಲಿಯಾ ವೇಗಿ ಜೋಶ್​ ಹೇಜಲ್​ವುಡ್​ ಟೆಸ್ಟ್​ ಪಂದ್ಯದ ವೇಳೆ ಬೌಲರ್​ಗಳಿಗೆ ಪೂಜಾರ ಅವರನ್ನು ಔಟ್​ ಮಾಡುವುದು ಬಹಳ ರೋಮಾಂಚನಕಾರಿಯಾಗಿ ಇರುತ್ತದೆ. ಇದರರ್ಥ ಅವರನ್ನು ಔಟ್​ ಮಾಡಲು ಸಾಕಷ್ಟು ಶ್ರಮ ಹಾಕಿರುತ್ತೇವೆ. ಅವರಿಗೆ(ಚೇತೇಶ್ವರ್​​ ಪೂಜಾರ) ಈಗಾಗಲೇ ಸಾಕಷ್ಟು ಬೌಲ್​ ಮಾಡಿರುತ್ತೇವೆ. ಅಂತಿಮವಾಗಿ ಪೂಜಾರ ಅವರ ವಿಕೆಟ್​ ಕಬಳಿಸುವುದು ಬೌಲರ್​ಗೆ ಹೆಚ್ಚು ಗೌರವ ತಂದುಕೊಡುತ್ತದೆ ಎಂದು ಹೇಳಿದ್ಧಾರೆ.

ಆಸ್ಟ್ರೇಲಿಯಾದಲ್ಲಿ ಟೆಸ್ಟ್​ ಸರಣಿ ನಡೆಯುವ ವೇಳೆ ಚೇತೇಶ್ವರ್​​ ಪೂಜಾರ ಅವರೊಂದಿಗೆ ಸಾಕಷ್ಟು ಜಗಳ ಆಡಿದ್ಧೇನೆ. ಆಸ್ಟ್ರೇಲಿಯನ್ನರು ಹೆಚ್ಚು ದ್ವೇಷಿಸಲು ಇಷ್ಟ ಪಡುವ ಬ್ಯಾಟ್ಸ್​​ಮ್ಯಾನ್ ಪೂಜಾರ​​. ಇದನ್ನೆಲ್ಲಾ ಹೊರತುಪಡಿಸಿದರೆ ಅವರೊಬ್ಬ ಉತ್ತಮ ಆಟಗಾರ ಎಂದು RCB ಪಾಡ್​ಕ್ಯಾಸ್ಟ್​ನಲ್ಲಿ ಜೋಶ್​ ಹೇಜಲ್​ವುಡ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net