

ಪಡುಬಿದ್ರಿ: ಭಾರತದ ಪ್ರವಾಸದ ವೇಳೆ ಉಡುಪಿಗೆ ಬಂದಿರುವುದು ಖುಷಿ ಕೊಟ್ಟಿದೆ. ಉಡುಪಿ ಕೃಷ್ಣ ಮಠ ದರ್ಶನದ ಬಳಿಕ ಮಾರಿಯಮ್ಮ ದೇವಿ ದರ್ಶನ ಪಡೆದಿದ್ದು, ಇಲ್ಲಿನ ಜೀರ್ಣೋದ್ಧಾರ ಮತ್ತು ನವ ನಿರ್ಮಾಣ ಯೋಜನೆ ಅದ್ಭುತವಾಗಿದೆ ಎಂದು ಆಸ್ಟ್ರೇಲಿಯಾ ವಿಕ್ಟೋರಿಯಾ ಸಂಸದ ಜಾನ್ ಮುಲ್ಲೈ ಆಶಯ ವ್ಯಕ್ತಪಡಿಸಿದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ, ಮಾರಿಯಮ್ಮ ದೇವಿಯ ದರ್ಶನ ಪಡೆದು, ನಿರ್ಮಾಣಗೊಳ್ಳುತ್ತಿರುವ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹಮ್ಮಿಕೊಡ ನವದುರ್ಗಾ ಲೇಖನ ಯಜ್ಞದ ಬಗ್ಗೆ ಮಾಹಿತಿ ಪಡೆದು ಜಾನ್ ಮುಲ್ಲೈ, ತಾನು ಕೂಡ ನವದುರ್ಗಾ ಲೇಖನ ಬರೆಯುವುದಾಗಿ ತಿಳಿಸಿದರು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಅವರು ಸಂಸದರಾದ ಜಾನ್ ಮುಲ್ಲೈ ಅವರು ಮುಂದೆ ಮಂತ್ರಿಯಾಗಿ ಪದೋನ್ನತಿ ಹೊಂದಿ ಬರುವಂತಾಗಲಿ ಎಂದು ಪ್ರಾರ್ಥಿಸಿದರು.
ಶಾಸಕ ಗುರ್ಮೆ ಸುರೇಶ್ ಪಿ.ಶೆಟ್ಟಿ, ಹೊಸ ಮಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಮನೋಹರ ಶೆಟ್ಟಿ, ಮಾಧವ ಆರ್.ಪಾಲನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಪು ದಿವಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ಸಾಲ್ಯಾನ್, ಮನೋಹರ ರಾವ್ ಕಲ್ಯ, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್.ಶೆಟ್ಟಿ, ಚರಿತಾ ದೇವಾಡಿಗ, ಪ್ರಮುಖರಾದ ಸಂತೋಷ್ ಪಿ.ಶೆಟ್ಟಿ ತೆಂಕರಗುತ್ತು, ಶ್ರೀಕರ ಶೆಟ್ಟಿ ಕಲ್ಯ, ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್, ಭಗವಾನ್‌ದಾಸ್ ಶೆಟ್ಟಿಗಾರ್, ಶಿಲ್ಪಾ ಜಿ.ಸುವರ್ಣ, ಗೀತಾಂಜಲಿ ಎಂ.ಸುವರ್ಣ, ಸಾವಿತ್ರಿ ಗಣೇಶ್, ಮೋಹನ್ ಬಂಗೇರ, ರಘರಾಮ ಶೆಟ್ಟಿ, ಮಧುಕರ ಸುವರ್ಣ, ಜಯರಾಮ ಆಚಾರ್ಯ ಉಪಸ್ಥಿತರಿದ್ದರು.