More

    ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸವಾಲಿನ ಗುರಿ ನೀಡಿದ ಆಸೀಸ್

    ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ತಂಡ 2ನೇ ಇನಿಂಗ್ಸ್‌ನಲ್ಲೂ ದಿಟ್ಟ ಬ್ಯಾಟಿಂಗ್ ನಿರ್ವಹಣೆ ತೋರುವುದರೊಂದಿಗೆ ಭಾರತ ತಂಡಕ್ಕೆ 3ನೇ ಟೆಸ್ಟ್ ಪಂದ್ಯದಲ್ಲಿ ಸವಾಲಿನ ಗುರಿ ಎದುರಾಗಿದೆ. ಆರಂಭಿಕ ರೋಹಿತ್ ಶರ್ಮ (52 ರನ್, 98 ಎಸೆತ, 5 ಬೌಂಡರಿ, 1 ಸಿಕ್ಸರ್) ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರೂ, ಅಂತಿಮ ದಿನದಾಟದಲ್ಲೂ 300ಕ್ಕಿಂತ ಹೆಚ್ಚಿನ ರನ್ ಸೇರಿಸಿ ಐತಿಹಾಸಿಕ ಸಾಧನೆ ತೋರಬೇಕಾದ ಕಠಿಣ ಸವಾಲು ಅಜಿಂಕ್ಯ ರಹಾನೆ ಬಳಗದ ಮುಂದಿದೆ. ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಗಾಯಗೊಂಡಿರುವುದರಿಂದ ಭಾರತೀಯ ಬ್ಯಾಟಿಂಗ್ ವಿಭಾಗ ಇನ್ನಷ್ಟು ಇಕ್ಕಟ್ಟಿನಲ್ಲಿ ಸಿಲುಕಿದೆ.

    ಎಸ್‌ಸಿಜಿ ಮೈದಾನದಲ್ಲಿ ಭಾನುವಾರ 2 ವಿಕೆಟ್‌ಗೆ 103 ರನ್‌ಗಳಿಂದ 4ನೇ ದಿನದಾಟ ಮುಂದುವರಿಸಿದ ಆಸೀಸ್, 6 ವಿಕೆಟ್‌ಗೆ 312 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರಿಂದ ಭಾರತಕ್ಕೆ 407 ರನ್ ಸವಾಲು ಎದುರಾಗಿದ್ದು, ದಿನದಂತ್ಯಕ್ಕೆ 2 ವಿಕೆಟ್‌ಗೆ 98 ರನ್ ಪೇರಿಸಿದೆ. ಅನುಭವಿ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ ಪೂಜಾರ (9*) ಮತ್ತು ನಾಯಕ ಅಜಿಂಕ್ಯ ರಹಾನೆ (4*) ಮುರಿಯದ 3ನೇ ವಿಕೆಟ್‌ಗೆ 6 ರನ್ ಸೇರಿಸಿ ಕ್ರೀಸ್‌ನಲ್ಲಿದ್ದು, ಅಂತಿಮ ದಿನ ಭಾರತ ಗೆಲುವಿಗಾಗಿ ಇನ್ನೂ 309 ರನ್ ಗಳಿಸಬೇಕಾಗಿದೆ.

    ಇದನ್ನೂ ಓದಿ: ಪ್ರೇಕ್ಷಕನಿಂದ ಬುಮ್ರಾ, ಸಿರಾಜ್‌ಗೆ ಜನಾಂಗೀಯ ನಿಂದನೆ, ಭಾರತ ತಂಡ ದೂರು

    ಮೂರೂ ಫಲಿತಾಂಶದ ಸಾಧ್ಯತೆ
    ಸಿಡ್ನಿ ಟೆಸ್ಟ್ ಪಂದ್ಯದ ಅಂತಿಮ ದಿನ ಭಾರತ ತಂಡ ಎಲ್ಲ ಮೂರು ರೀತಿಯ ಫಲಿತಾಂಶವನ್ನು ಕಾಣುವ ಸಾಧ್ಯತೆಗಳಿವೆ. ಭಾರತ ದಿನದಾಟದಲ್ಲಿ 309 ರನ್ ಬೆನ್ನಟ್ಟಿದರೆ ಗೆಲ್ಲಬಹುದಾಗಿದ್ದು, ಉಳಿದ 8 ವಿಕೆಟ್ ಕಳೆದುಕೊಂಡರೆ ಸೋಲು ಕಾಣಲಿದೆ. ಇನ್ನು ದಿನದ 90 ಓವರ್‌ಗಳನ್ನು ದಿಟ್ಟವಾಗಿ ಎದುರಿಸಿ ನಿಂತರೆ ಡ್ರಾ ಸಾಧಿಸಲಿದೆ.

    ಆಸ್ಟ್ರೇಲಿಯಾ: 338 ಮತ್ತು 87 ಓವರ್‌ಗಳಲ್ಲಿ 6 ವಿಕೆಟ್‌ಗೆ 312 ಡಿಕ್ಲೇರ್ (ಲಬುಶೇನ್ 73, ಸ್ಟೀವನ್ ಸ್ಮಿತ್ 81, ವೇಡ್ 4, ಗ್ರೀನ್ 84, ಪೇನ್ 39*, ಅಶ್ವಿನ್ 95ಕ್ಕೆ 2, ಸೈನಿ 54ಕ್ಕೆ 2, ಸಿರಾಜ್ 90ಕ್ಕೆ 1, ಬುಮ್ರಾ 68ಕ್ಕೆ 1). ಭಾರತ: 244 ಮತ್ತು 34 ಓವರ್‌ಗಳಲ್ಲಿ 2 ವಿಕೆಟ್‌ಗೆ 98 (ರೋಹಿತ್ ಶರ್ಮ 52, ಗಿಲ್ 31, ಪೂಜಾರ 9*, ರಹಾನೆ 4*, ಹ್ಯಾಸಲ್‌ವುಡ್ 11ಕ್ಕೆ 1, ಕಮ್ಮಿನ್ಸ್ 25ಕ್ಕೆ 1).

    ಇಂದಿನಿಂದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಟಿ20 ಟೂರ್ನಿ

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!

    ಆತಿಥೇಯ ಜಪಾನ್‌ನಲ್ಲಿ ಕರೊನಾ ಕೇಸ್ ಏರಿಕೆ, ಟೋಕಿಯೊ ಒಲಿಂಪಿಕ್ಸ್‌ಗೆ ಮತ್ತೆ ಆತಂಕ

    VIDEO | ಸೀರೆಯುಟ್ಟು ಪಲ್ಟಿ ಹೊಡೆದ ಮಹಿಳಾ ಜಿಮ್ನಾಸ್ಟ್, ವಿಡಿಯೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts