More

    ಆತಿಥೇಯ ಜಪಾನ್‌ನಲ್ಲಿ ಕರೊನಾ ಕೇಸ್ ಏರಿಕೆ, ಟೋಕಿಯೊ ಒಲಿಂಪಿಕ್ಸ್‌ಗೆ ಮತ್ತೆ ಆತಂಕ

    ಟೋಕಿಯೊ/ಲಂಡನ್: ಕರೊನಾ ಹಾವಳಿಯಿಂದಾಗಿ ಒಂದು ವರ್ಷದ ಮಟ್ಟಿಗೆ ಮುಂದೂಡಲ್ಪಟ್ಟಿರುವ ಟೋಕಿಯೊ ಒಲಿಂಪಿಕ್ಸ್‌ಗೆ ವೈರಸ್ ಆತಂಕ ಈ ವರ್ಷವೂ ಮುಂದುವರಿದಿದೆ. ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಇನ್ನು 200ಕ್ಕೂ ಕಡಿಮೆ ದಿನಗಳು ಬಾಕಿ ಉಳಿದಿವೆ. ಆದರೆ ವೈರಸ್ ಮಾತ್ರ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಅಲ್ಲದೆ ಕೆಲ ದೇಶಗಳಲ್ಲಿ ಮತ್ತೆ ಲಾಕ್‌ಡೌನ್ ಘೋಷಣೆಯಾಗಿದೆ. ಜತೆಗೆ ಆತಿಥೇಯ ಜಪಾನ್‌ನಲ್ಲೂ ಈ ತಿಂಗಳು ಕರೊನಾ ಪ್ರಕರಣಗಳು ದುಪ್ಪಟ್ಟು ಏರಿಕೆ ಕಂಡಿದ್ದು, ಶುಕ್ರವಾರದಿಂದ ಒಂದು ತಿಂಗಳ ಕಾಲ ತುರ್ತು ಆರೋಗ್ಯ ಸ್ಥಿತಿಯೂ ಘೋಷಣೆಯಾಗಿದೆ. ಇದರಿಂದ ಈ ವರ್ಷವೂ ಸುರಕ್ಷಿತವಾಗಿ ಕ್ರೀಡಾಕೂಟ ಆಯೋಜನೆ ಸವಾಲೆನಿಸಿದೆ.

    ಹಾಲಿ ವೇಳಾಪಟ್ಟಿಯ ಪ್ರಕಾರ ಜುಲೈ 23ರಿಂದ ಆಗಸ್ಟ್ 8ರವರೆಗೆ ಜಪಾನ್ ರಾಜಧಾನಿಯಲ್ಲಿ ಒಲಿಂಪಿಕ್ಸ್ ನಡೆಯಬೇಕಿದೆ. ಕಳೆದ ವರ್ಷ ಅದೇ ಸಮಯದಲ್ಲಿ ನಡೆಯಬೇಕಿದ್ದ ಕ್ರೀಡಾಕೂಟವನ್ನು ಕರೊನಾ ಭೀತಿಯಿಂದಾಗಿ ಮುಂದೂಡಲಾಗಿತ್ತು.

    ಇದನ್ನೂ ಓದಿ: ಸಿಡ್ನಿಯಲ್ಲಿ ಸ್ಮಿತ್​ ಶತಕ, ಭಾರತಕ್ಕೆ ಮೇಲುಗೈ ತಂದುಕೊಟ್ಟ ಜಡೇಜಾ, ಗಿಲ್​

    ಕಳೆದ ವರ್ಷ ಮಾರ್ಚ್‌ನಲ್ಲೇ ಒಲಿಂಪಿಕ್ಸ್ ಮುಂದೂಡಿಕೆಯ ಬಗ್ಗೆ ಮುನ್ಸೂಚನೆ ನೀಡಿದ್ದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಹಿರಿಯ ಸದಸ್ಯ ಡಿಕ್ ಪೌಂಡ್ ಅವರೇ ಈ ವರ್ಷವೂ ಕ್ರೀಡಾಕೂಟ ಅನಿಶ್ಚಿತವೆನಿಸಿದೆ ಎಂದು ಶುಕ್ರವಾರ ನುಡಿದಿದ್ದಾರೆ.

    ಟೋಕಿಯೊದಲ್ಲಿ ಗುರುವಾರ ದಾಖಲೆಯ 2,447 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ. ಜಪಾನ್‌ನಲ್ಲಿ ಫೆಬ್ರವರಿ ತನಕ ಲಸಿಕೆ ಲಭ್ಯವಾಗುವುದು ಕೂಡ ಅನುಮಾನವೆನಿಸಿದೆ. ಇದರ ನಡುವೆಯೂ ನಿಗದಿಯಂತೆ ಕೂಟ ಆಯೋಜನೆ ಬಗ್ಗೆ ಜಪಾನ್ ಪ್ರಧಾನಿ ಯೊಶಿಹಿದ್ ಸುಗಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: VIDEO | ಸ್ಟೀವನ್ ಸ್ಮಿತ್‌ರನ್ನು ರವೀಂದ್ರ ಜಡೇಜಾ ರನೌಟ್ ಮಾಡಿದ ರೀತಿಗೆ ಕ್ರಿಕೆಟ್​ ಪ್ರೇಮಿಗಳು ಫಿದಾ!

    ಈ ವರ್ಷ ಸುರಕ್ಷಿತ ಒಲಿಂಪಿಕ್ಸ್ ಆಯೋಜನೆ ಸಾಧ್ಯವಾಗದಿದ್ದರೆ, ಮುಂದೂಡಲ್ಪಡುವುದಿಲ್ಲ. ಅದಕ್ಕೆ ಬದಲಾಗಿ ರದ್ದುಗೊಳ್ಳಲಿದೆ ಎನ್ನಲಾಗಿದೆ. ಒಲಿಂಪಿಕ್ಸ್ ಮುಂದೂಡಿಕೆಯಿಂದ ಜಪಾನ್‌ಗೆ 20.5 ಸಾವಿರ ಕೋಟಿ ರೂ. ಹೆಚ್ಚುವರಿ ವೆಚ್ಚ ಎದುರಾಗಿದ್ದು, ಒಟ್ಟು ವೆಚ್ಚ 1.12 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಹೀಗಾಗಿ ಕೂಟ ರದ್ದುಗೊಂಡರೆ ಜಪಾನ್‌ಗೆ ಬಹುದೊಡ್ಡ ಆರ್ಥಿಕ ಸಂಕಷ್ಟ ಎದುರಾಗಲಿದೆ.

    ಕ್ರೀಡಾಪಟುಗಳಿಗೆ ಲಸಿಕೆ ಗೊಂದಲ
    ಕರೊನಾ ಲಸಿಕೆ ನೀಡುವುದರಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆಯೂ ಗೊಂದಲಗಳು ಮೂಡಿವೆ. ಕೆಲವೆಡೆ ಇಂಥ ನಡೆಗೆ ವಿರೋಧವೂ ವ್ಯಕ್ತವಾಗಿದೆ. ಲಸಿಕೆ ನೀಡುವುದರಲ್ಲಿ ವೈದ್ಯಕೀಯ ಸಿಬ್ಬಂದಿಗೆ ಮೊದಲ ಆದ್ಯತೆ ನೀಡಬೇಕೆಂದು ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಅವರೂ ಹೇಳಿದ್ದಾರೆ. ಇನ್ನು ಕೆಲ ದೇಶಗಳಲ್ಲಿ ಮೇ ತನಕ ಲಸಿಕೆ ಲಭ್ಯವಾಗುವುದು ಕೂಡ ಅನುಮಾನವೆನಿಸಿದೆ.

    VIDEO | ಸೀರೆಯುಟ್ಟು ಪಲ್ಟಿ ಹೊಡೆದ ಮಹಿಳಾ ಜಿಮ್ನಾಸ್ಟ್, ವಿಡಿಯೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts