More

    ಸಿಡ್ನಿಯಲ್ಲಿ ಸ್ಮಿತ್​ ಶತಕ, ಭಾರತಕ್ಕೆ ಮೇಲುಗೈ ತಂದುಕೊಟ್ಟ ಜಡೇಜಾ, ಗಿಲ್​

    ಸಿಡ್ನಿ: ಕೊನೆಗೂ ಫಾರ್ಮ್ ಕಂಡುಕೊಂಡ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ (131 ರನ್, 226 ಎಸೆತ, 16 ಬೌಂಡರಿ) ತಾಳ್ಮೆಯ ಶತಕ ಸಿಡಿಸಿದರೂ, ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಪ್ರವಾಸಿ ಭಾರತ ತಂಡದ ಮೇಲುಗೈ ಸ್ಪಷ್ಟವಾಗಿ ಕಾಣಿಸಿದೆ. ರವೀಂದ್ರ ಜಡೇಜಾ (62ಕ್ಕೆ 4) ಬೌಲಿಂಗ್-ಫೀಲ್ಡಿಂಗ್ ಮತ್ತು ಯುವ ಆರಂಭಿಕ ಶುಭಮಾನ್ ಗಿಲ್ (50 ರನ್, 101 ಎಸೆತ, 8 ಬೌಂಡರಿ) ಅವರ ಸೊಗಸಾದ ಅರ್ಧಶತಕ ಇದಕ್ಕೆ ಕಾರಣವಾಗಿದೆ. ಈ ಮೂಲಕ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಅಜಿಂಕ್ಯ ರಹಾನೆ ಬಳಗದ ಪ್ರಾಬಲ್ಯ ಮುಂದುವರಿದಿದೆ.

    ಎಸ್‌ಸಿಜಿ ಮೈದಾನದಲ್ಲಿ ಶುಕ್ರವಾರ 2 ವಿಕೆಟ್‌ಗೆ 166 ರನ್‌ಗಳಿಂದ 2ನೇ ದಿನದಾಟ ಮುಂದುವರಿಸಿದ ಆಸೀಸ್ ತಂಡ, ಚಹಾ ವಿರಾಮಕ್ಕೆ ಮುನ್ನ 338 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಭಾರತ ತಂಡ ರೋಹಿತ್ ಶರ್ಮ-ಶುಭಮಾನ್ ಗಿಲ್ ಜೋಡಿ ಒದಗಿಸಿಕೊಟ್ಟ ಉತ್ತಮ ಆರಂಭದಿಂದ ದಿನದಂತ್ಯಕ್ಕೆ 2 ವಿಕೆಟ್‌ಗೆ 96 ರನ್ ಪೇರಿಸಿದೆ. ಭಾರತ ಇನ್ನೂ 242 ರನ್ ಹಿನ್ನಡೆಯಲ್ಲಿದ್ದು, ಅನುಭವಿಗಳಾದ ಚೇತೇಶ್ವರ ಪೂಜಾರ (9) ಮತ್ತು ನಾಯಕ ಅಜಿಂಕ್ಯ ರಹಾನೆ (5) ಕ್ರೀಸ್‌ನಲ್ಲಿದ್ದಾರೆ. 3ನೇ ದಿನವೂ ದಿಟ್ಟ ಬ್ಯಾಟಿಂಗ್ ಮುಂದುವರಿಸಿ ಇನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಸಲವಾದರೆ, ಪಂದ್ಯದಲ್ಲಿ ಭಾರತದ ಮೇಲುಗೈ ಇನ್ನಷ್ಟು ಬಲಿಷ್ಠವಾಗಲಿದೆ.

    ಇದನ್ನೂ ಓದಿ:  VIDEO | ಸಿಡ್ನಿಯಲ್ಲಿ ಟೀಮ್​ ಇಂಡಿಯಾ ವೇಗಿ ಮೊಹಮದ್ ಸಿರಾಜ್ ಭಾವುಕರಾಗಿದ್ದು ಯಾಕೆ ಗೊತ್ತೇ?

    ಆಸ್ಟ್ರೇಲಿಯಾ: 105.4 ಓವರ್‌ಗಳಲ್ಲಿ 338 (ಲಬುಶೇನ್ 91, ಸ್ಮಿತ್ 131, ವೇಡ್ 13, ಗ್ರೀನ್ 0, ಪೇನ್ 1, ಸ್ಟಾರ್ಕ್ 24, ಜಡೇಜಾ 62ಕ್ಕೆ 4, ಬುಮ್ರಾ 66ಕ್ಕೆ 2, ಸೈನಿ 65ಕ್ಕೆ 2, ಸಿರಾಜ್ 67ಕ್ಕೆ 1). ಭಾರತ: 45 ಓವರ್‌ಗಳಲ್ಲಿ 2 ವಿಕೆಟ್‌ಗೆ 96 (ರೋಹಿತ್ ಶರ್ಮ 26, ಶುಭಮಾನ್ ಗಿಲ್ 50, ಪೂಜಾರ 9*, ರಹಾನೆ 5*, ಹ್ಯಾಸಲ್‌ವುಡ್ 23ಕ್ಕೆ 1, ಕಮ್ಮಿನ್ಸ್ 19ಕ್ಕೆ 1).

    ಕೊಹ್ಲಿ ಸರಿಗಟ್ಟಿದ ಸ್ಮಿತ್
    ಹಾಲಿ ಕ್ರಿಕೆಟಿಗರ ಪೈಕಿ ಅತ್ಯಧಿಕ 27 ಟೆಸ್ಟ್ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಸ್ಟೀವನ್ ಸ್ಮಿತ್ ಸರಿಗಟ್ಟಿದರು. ತಲಾ 24 ಶತಕ ಸಿಡಿಸಿರುವ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಮತ್ತು ಡೇವಿಡ್ ವಾರ್ನರ್ ಇವರ ಹಿಂದಿದ್ದಾರೆ. 2013ರ ಬಳಿಕ ಭಾರತ ವಿರುದ್ಧ ಅತ್ಯಧಿಕ 8 ಟೆಸ್ಟ್ ಶತಕ ಸಿಡಿಸಿದ ಸಾಧನೆಯನ್ನೂ ಸ್ಮಿತ್ ಮಾಡಿದ್ದಾರೆ.

    ಜನವರಿ 21ರೊಳಗೆ ರಿಟೇನ್‌ಗೆ ಗಡುವು, ಫೆಬ್ರವರಿ 11ರಂದು ಐಪಿಎಲ್ ಆಟಗಾರರ ಹರಾಜು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts