ದೀರ್ಘಕಾಲದ ಗೆಳತಿ ಮೋನಿಕಾರನ್ನು ವರಿಸಿದ ಆಸ್ಟ್ರೇಲಿಯಾದ ಆಲ್‌ರೌಂಡರ್ ಆಶ್ಲೀ ಗಾರ್ಡ್ನರ್ | Ashleigh Gardner

Untitled design - 2025-04-06T162138.805
Published on

ಆಸ್ಟ್ರೇಲಿಯ: ಆಸ್ಟ್ರೇಲಿಯಾದ ಮಹಿಳಾ ಆಲ್‌ರೌಂಡರ್ ಆಶ್ಲೀ ಗಾರ್ಡ್ನರ್(Ashleigh Gardner) ಒಂದು ವರ್ಷದ ನಿಶ್ಚಿತಾರ್ಥದ ನಂತರ ತಮ್ಮ ಸಂಗಾತಿ ಮೋನಿಕಾ ಅವರನ್ನು ವಿವಾಹವಾಗಿದ್ದಾರೆ. ಅವರ ವಿವಾಹ ಸಮಾರಂಭದಲ್ಲಿ ಗಾರ್ಡ್ನರ್ ಅವರ ಕುಟುಂಬಸ್ಥರು ಮತ್ತು ಆಪ್ತ ಕ್ರಿಕೆಟ್ ಸ್ನೇಹಿತರಾದ ಅಲಿಸಾ ಹೀಲಿ, ಎಲಿಸ್ ಪೆರ್ರಿ, ಕಿಮ್ ಗಾರ್ತ್, ಎಲಿಸ್ ವಿಲ್ಲಾನಿ ಇತರರು ಭಾಗವಹಿಸಿದ್ದರು.

ಆಶ್ಲೇ ಗಾರ್ಡ್ನರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಮದುವೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜತೆಗೆ ಮೋನಿಕಾ ರೈಟ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಫೋಟೋ ಹಂಚಿಕೊಳ್ಳುವಾಗ ಶೀರ್ಷಿಕೆಯಲ್ಲಿ ಶ್ರೀಮತಿ ಮತ್ತು ಶ್ರೀಮತಿ ಗಾರ್ಡ್ನರ್ ಎಂದು ಬರೆದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

ಹಂಚಿಕೊಂಡಿರುವ ಚಿತ್ರಗಳಲ್ಲಿ ಇಬ್ಬರೂ ಆಟಗಾರರು ಬಿಳಿ ಬಣ್ಣದ ನಿಲುವಂಗಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಸರಳವಾದ ಗಂಭೀರ ನೋಟದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅಭಿಮಾನಿಗಳು ಕೂಡ ಅವರನ್ನು ತುಂಬಾ ಹೊಗಳುತ್ತಿದ್ದಾರೆ ಮತ್ತು ಅವರ ಜೀವನದ ಹೊಸ ಇನ್ನಿಂಗ್ಸ್‌ಗಾಗಿ ಅವರನ್ನು ಅಭಿನಂದಿಸುತ್ತಿದ್ದಾರೆ.

ಗಾರ್ಡ್ನರ್ ಆಸ್ಟ್ರೇಲಿಯಾಕ್ಕೆ ಬಹಳ ಮುಖ್ಯವಾದ ಆಟಗಾರ್ತಿ. ಇತ್ತೀಚೆಗೆ ಅವರು ಗಾಯಗೊಂಡಿದ್ದರಿಂದ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯನ್ನು ಅರ್ಧಕ್ಕೆ ಬಿಡಬೇಕಾಯಿತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net