ಮ್ಯಾಕ್ಸ್​ವೆಲ್​ ಸ್ಪೋಟಕ ಶತಕ; 3ನೇ ಟಿ-20ಯಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾಗೆ 5 ವಿಕೆಟ್​ಗಳ ಜಯ

maxwell
Published on

ಗುವಾಹಟಿ: ಇಲ್ಲಿನ ಬರ್ಸಾಪುರ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟಿ-20 ಪಂದ್ಯದಲ್ಲಿ ಮ್ಯಾಕ್ಸ್​ವೆಲ್​ ಶತಕದ ಫಲವಾಗಿ ಆಸೀಸ್​ಗೆ 5 ವಿಕೆಟ್​ಗಳ ಜಯ ದಕ್ಕಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ಆರಂಭಿಕ ಋತುರಾಜ್​ ಗಾಯಕ್ವಾಡ್ (123 ರನ್, 57 ಎಸೆತ, 13 ಬೌಂಡರಿ, 7 ಸಿಕ್ಸರ್) ಸ್ಪೋಟಕ ಶತಕದ ಫಲವಾಗಿ ಟೀಂ ಇಂಡಿಯಾ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 222 ರನ್​ ಗಳಿಸಿತ್ತು.

223 ರನ್​ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡವು ಗ್ಲೆನ್ ಮ್ಯಾಕ್ಸ್​ವೆಲ್ (104 ರನ್, 48 ಎಸೆತ, 8 ಬೌಂಡರಿ, 8 ಸಿಕ್ಸರ್) ಶತಕದ ಫಲವಾಗಿ 5 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ ರನ್​ ಚೇಸ್​ ಮಾಡಿ ಗೆಲುವಿನ ನಗೆ ಬೀರಿತ್ತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಜಯ ದಾಖಲಿಸಿದೆ.

ಭಾರತದ ಪರ ರವಿ ಬಿಷ್ನೋಯಿ (4-0-32-2), ಆವೇಶ್​ ಖಾನ್ (4-0-37-1), ಅಕ್ಷರ್​ ಪಟೇಲ್ (4-0-37-1), ಅರ್ಷ್​ದೀಪ್​ ಸಿಂಗ್ (4-0-44-1), ಪ್ರಸಿದ್ಧ್​​ ಕೃಷ್ಣ (4-0-68-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net