

ಹುಬ್ಬಳ್ಳಿ: ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-೨ ಕನ್ನಡ ಚಲನಚಿತ್ರ ಆಗಸ್ಟ್ ೧೨ ರಂದು ಬಿಡುಗಡೆಯಾಗಲಿದೆ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ಹಾಗೂ ಮಡೆನೂರು ಮನು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯೋಗರಾಜ ಭಟ್ ಅವರ ಅಭಿಮಾನಿಗಳು. ಅವರ ಚಿತ್ರದ ಪ್ರಚಾರಕ್ಕೆ ಓಡಾಡುತ್ತಿದ್ದೇವೆ. ಸುಮಾರು ೨೫೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಗಾಳಿಪಟ - ೧ ಕ್ಕಿಂತ ಹೆಚ್ಚು ಮನರಂಜನೆ ನೀಡುವ ಚಿತ್ರ ಇದಾಗಿದೆ. ಮೂವರು ಗೆಳೆಯರ ಪ್ರೇಮ ಕತೆಯೇ ಚಿತ್ರದ ಕಥಾ ವಸ್ತುವಾಗಿದೆ. ರೋಚಕ ತಿರುವುಗಳ ನಡುವೆ ನಗೆ ಉಕ್ಕಿಸುವ ಪ್ರಸಂಗಗಳಿವೆ ಎಂದರು.