ಕಾರ್ಮಿಕರ ಕಾರ್ಡ್‌ ನವೀಕರಣಕ್ಕೆ ಹಾಜರಾತಿ ಪಟ್ಟಿ ಕಡ್ಡಾಯ ಬೇಡ

Building-workers-strike.
Published on

ಕಾರವಾರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸದಸ್ಯರು ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಯ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ಬರ್ ಹಬೀಬ್‌ಸಾಬ್ ಮುಲ್ಲಾ ಅವರಿಗೆ ತಮ್ಮ ಬೇಡಿಕೆಗಳ ಪ್ರತಿಯನ್ನು ಸಲ್ಲಿಸಿದರು.

2021-22 ನೇ ಸಲಿನಿಂದ ಬಾಕಿ ಇರುವ ಅರ್ಜಿಗಳಿಗೆ ಕೂಡಲೇ ಹಣ ವರ್ಗಾವಣೆ ಮಾಡಬೇಕು. ಕಾರ್ಡ್ ನವೀಕರಣಕ್ಕೆ ವೇತನ ಚೀಟಿ ಹಾಗೂ ಹಾಜರಾತಿ ಪಟ್ಟಿ ಕಡ್ಡಾಯ ಆದೇಶವನ್ನು ವಾಪಸ್ ಪಡೆಯಬೇಕು.

ಬೋಗಸ್ ಕಾರ್ಡ್ ನಿಯಂತ್ರಿಸಿ ನೈಜ ಕಾರ್ಮಿಕರನ್ನು ಮಾತ್ರ ನೋಂದಣಿ ಹಾಗೂ ನಿಯಂತ್ರಣ ಮಾಡಬೇಕು. ರಾಜ್ಯ ಸರ್ಕಾರದ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕಟ್ಟಡ ಕಾರ್ಮಿಕರಿಗೂ ಅನ್ವಯ ಮಾಡಬೇಕು ಎಂದು ಒತ್ತಾಯಿಸಿದರು.
ಹೊಸ ತಂತ್ರಾಂಶವನ್ನು ಕೂಡಲೇ ಆರಂಭಿಸಬೇಕು. ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ನೀಡಬೇಕು. ಗ್ರಾಮ ಒನ್, ಸೇವಾ ಸಿಂಧು ಕೇಂದ್ರಗಳಲ್ಲಿ ವ್ಯಾಪಕವಾಗಿ ನಕಲಿ ಕಾರ್ಡ್ ಮಾಡುತ್ತಿದೆ.

ಹಾಗಾಗಿ ಅಲ್ಲಿ ಕಾರ್ಡ್‌ಗಳ ನವೀಕರಣ, ಹೊಸ ನೋಂದಣಿ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಜೀವಿತಾವಧಿ ಪ್ರಮಾಣಪತ್ರವನ್ನು ಕಂದಾಯ ಇಲಾಖೆಯ ಬದಲು ಕಾರ್ಮಿಕ ಇಲಾಖೆಯೇ ನೀಡಬೇಕು.

ಅರ್ಜಿಗಳ ವಿಲೇವಾರಿ ವಿಳಂಬವನ್ನು ತಡೆಗಟ್ಟಬೇಕು. ಮಂಡಳಿಗಳಿಯಿಂದ ಆರಂಭಿಸಲಾದ ಶಿಶು ವಿಹಾರ, ಮೊಬೈಲ್ ಕ್ಲಿನಿಕ್, ಬಸ್ ಪಾಸ್, ವಿವಿಧ ಕಿಟ್‌ಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಪ್ರಮುಖರಾದ ಯಮುನಾ ಗಾಂವಕರ್, ತಿಕಲ್ ಗೌಡ, ಶ್ಯಾಮನಾಥ ನಾಯ್ಕ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಂಘಟನೆಯ ತಿಮ್ಮಪ್ಪ ಗೌಡ, ಜ್ಯೋತಿ ನಾರ್ವೇಕರ್, ಮಂಜುನಾಥ ಗೌಡ, ಕೃಷ್ಣ ಭಟ್, ತುಕಾರಾಮ ನಾಗೇಕರ್, ಚಂದ್ರಶೇಖರ ನಾಯ್ಕ, ಸುನೀಲ ನಾಯರ್, ಹನುಮಂತ ಸಿಂದೋಗಿ, ಶಶಿಕಲಾ ಬನ್ನಿಕೊಪ್ಪ, ಪುಂಡಲೀಕ ಭಟ್ಕಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net