ಲಾರಿ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನ, ಆರೋಪಿ ಸೆರೆ

Arrest Kaidhi
Published on

ಕಾಸರಗೋಡು: ಎಡನೀರು ಚಾಪಾಡಿ ನಿವಾಸಿ ಅಬ್ದುಲ್ ರಹಮಾನ್ ಎಂಬುವವರ ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆಸಿ ಅವರ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಚಾಪಾಡಿ ನಿವಾಸಿ ಅಬ್ದುಲ್ಲಕುಞಿ ಎಂಬಾತನನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೇಲಿನ ಎಡನೀರಿನಲ್ಲಿ ಅಬ್ದುಲ್ಲಕುಞಿ ತಾನು ಚಲಾಯಿಸುತ್ತಿದ್ದ ಲಾರಿಯನ್ನು ಸ್ಕೂಟರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಸ್ಕೂಟರ್ ಸವಾರ ಅಬ್ದುಲ್ ರಹಮಾನ್ ಗಾಯಗೊಂಡಿದ್ದರು. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೂಟರ್‌ಗೆ ಡಿಕ್ಕಿ ಹೊಡೆಸಿ ಹಿಂದಕ್ಕೆ ತೆಗೆಯುವ ಭರದಲ್ಲಿ ಲಾರಿ ಧರೆಗೆ ಡಿಕ್ಕಿಯಾಗಿ ಮಹಮ್ಮದ್‌ಕುಞಿ ಎಂಬುವವರ ಆವರಣಗೋಡೆಯೂ ಕುಸಿದು ಬಿದ್ದಿದೆ. ಅಲ್ಲಿಂದ ಲಾರಿಯೊಂದಿಗೆ ಉಡುಪಿ ಭಾಗಕ್ಕೆ ಪರಾರಿಯಾಗಲೆತ್ನಿಸಿದ ಅಬ್ದುಲ್ಲಕುಞಿಯನ್ನು ಸುರತ್ಕಲ್‌ನಲ್ಲಿ ಬಂಧಿಸಲಾಗಿದ್ದು, ಲಾರಿಯನ್ನ್ನು ವಶಕ್ಕೆ ತೆಗೆಯಲಾಗಿದೆ. ಅಬ್ದುಲ್ಲಕುಞಿ ಹಾಗೂ ಅಬ್ದುಲ್ ರಹಮಾನ್ ನಡುವಿನ ಆಸ್ತಿ ತರ್ಕ ಹಾಗೂ ದಾರಿ ವಿವಾದ ಹಲ್ಲೆಗೆ ಕಾರಣವೆನ್ನಲಾಗಿದೆ. ವಿದ್ಯಾನಗರ ಠಾಣೆ ಇನ್ಸ್‌ಪೆಕ್ಟರ್ ಯು.ಪಿ.ವಿಪಿನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಅಬ್ದುಲ್ಲಕುಞಿ ವಿರುದ್ಧ ಆದೂರು ಠಾಣೆಯಲ್ಲಿಯೂ ಮೂರು ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net