ವಿದೇಶಕ್ಕೆ ಪರಾರಿ ಯತ್ನ, ಆರೋಪಿ ಬಂಧನ

arrested
Published on

ಕಾಸರಗೋಡು: ಪೋಕ್ಸೋ ಪ್ರಕರಣದ ಆರೋಪಿಯೊಬ್ಬನನ್ನು ವಿದೇಶಕ್ಕೆ ಪರಾರಿಯಾಗುವ ಯತ್ನದ ಮಧ್ಯೆ ಮೇಲ್ಪರಂಬ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚೆಮ್ನಾಡ್ ಪಂಚಾಯಿತಿ ಪೆರುಂಬಳ ನಿವಾಸಿ ಅಬ್ದುಲ್ ಹ್ಯಾರಿಸ್(41) ಬಂಧಿತ. ಆರೋಪಿ ಜೂನ್ 28ರಂದು ಪಂಚಾಯಿತಿ ವ್ಯಾಪ್ತಿಯ ಹನ್ನೊಂದರ ಹರೆಯದ ಬಾಲಕನಿಗೆ ಸಲಿಂಗ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಈ ಮಧ್ಯೆ ಆರೋಪಿ ಮುಂಬೈಗೆ ತೆರಳಿರುವ ಬಗ್ಗೆ ಮಾಹಿತಿ ಪಡೆದು, ಈತ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಅರಿತ ಪೊಲೀಸರು ಈತನ ವಿರುದ್ಧ ಲುಕೌಟ್ ನೋಟಿಸ್ ಜಾರಿಗೊಳಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಆರೋಪಿ ನೇಪಾಳದ ಮೂಲಕ ವಿದೇಶಕ್ಕೆ ಪರಾರಿಯಾಗುವ ಯತ್ನದ ಮಧ್ಯೆ ನೇಪಾಳದ ಗಡ ಭದ್ರತಾ ಪಡೆ ಈತನನ್ನು ವಶಕ್ಕೆ ತೆಗೆದುಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net