3 ಎಕರೆಯಲ್ಲಿದ್ದ ಕಲ್ಲಂಗಡಿ ತಿಂದು ಹಾಕಿವೆ ಕರಡಿ: ರೈತರಲ್ಲಿ ಹೆಚ್ಚಿದೆ ಆತಂಕ

Bearattack
Published on

ಕೊಪ್ಪಳ: ಕಲ್ಲಂಗಡಿ ಹೊಲಕ್ಕೆ ನುಗ್ಗಿದ ಕರಡಿಗಳು ಫಸಲಿಗೆ ಬಂದಿದ್ದ ಅಷ್ಟೂ ಕಲ್ಲಂಗಡಿಗಳನ್ನು ತಿಂದು ಹಾಕಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕು ಅಡವಿಬಾವಿ ಗ್ರಾಮದಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬತೆ ರೈತರೀಗ ಫಸಲಿಗೆ ಬಂದಿದ್ದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ.

ದೇವಪ್ಪ ತಳವಾರ ಎಂಬುವರ ಹೊಲಕ್ಕೆ ನುಗ್ಗಿರೋ ಕರಡಿ 3 ಎಕರೆಯಲ್ಲಿ ಬೀಜೋತ್ಪಾದನೆಗೆ ಬೆಳೆದಿದ್ದ ಕಲ್ಲಂಗಡಿ ಬೆಳೆಯನ್ನು ತಿಂದುಹಾಕಿದೆ. ಇದರಿಂದ ಕಲ್ಲಂಗಡಿ ಬೆಳೆಯುತ್ತಿರೋ ನೆರೆಯ ರೈತರಲ್ಲಿ ಆತಂಕ ಹೆಚ್ಚಾಗಿದ್ದು, ಕರಡಿ ಸೆರೆ ಹಿಡಿಯಬೇಕೆಂದು ಅರಣ್ಯ ಇಲಾಖೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net