ಮಹಾರಾಷ್ಟ್ರದಲ್ಲಿ ತಾರಕಕ್ಕೇರಿದ ರಾಜಕೀಯ ಸಂಘರ್ಷ..ಠಾಕ್ರೆ ಕಾರ್​ಗಳ ಮೇಲೆ ಟೊಮ್ಯಾಟೋ, ಸಗಣಿ ಎಸೆತ..!

car attack
Published on

ಮುಂಬೈ: ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಕೆಸರೆರೆಚಾಟ ಮಿತಿ ಮೀರಿದೆ. ನಾಯಕರ ಕಾರುಗಳ ಮೇಲೆ ಟೊಮ್ಯಾಟೊ, ಸಗಣಿ ಎಸೆತದಂತಹ ಕೃತ್ಯಗಳು ನಡೆಯುತ್ತಿದ್ದು, ಸಂಘರ್ಕ್ಷಕ್ಕೆ ಕಾರಣವಾಗುತ್ತಿದೆ.

ಮುಖ್ಯವಾಗಿ ಮಾರಾಠರಿಗೆ ಮೀಸಲಾತಿ ಕಲ್ಪಿಸುವಂತೆ ಹೋರಾಟ ನಡೆಸುತ್ತಿರುವ ಮೀಸಲಾತಿ ಹೋರಾಟ ಸಮಿತಿ ಪ್ರಮುಖ ಪಕ್ಷಗಳನ್ನು ಉಸಿರುಗಟ್ಟಿಸುತ್ತಿದೆ. ಶಿವಸೇನೆ (ಯುಬಿಟಿ) ಮತ್ತು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ನಡುವೆ ಇದೇ ಕಾರಣಕ್ಕೆ ಸಂಘರ್ಷ ಏರ್ಪಟ್ಟಿತ್ತು.

ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಮ್ಮೆನ್ನೆಸ್ ) ಮುಖ್ಯಸ್ಥ ರಾಜ್ ಠಾಕ್ರೆ ಶುಕ್ರವಾರ ಮಧ್ಯ ಮರಾಠವಾಡಕ್ಕೆ ಭೇಟಿ ನೀಡಿದ್ದರು. ಕೆಲವರು ರಾಜ್ ಠಾಕ್ರೆ ಅವರ ಕಾರಿನ ಮೇಲೆ ಟೊಮೇಟೊ ದಾಳಿ ನಡೆಸಿದರು. ಇದಕ್ಕೆ ಎಮ್ಮೆನ್ನೆಸ್ ಕಾರ್ಯಕರ್ತರು ಕುಪಿತರಾಗಿ ಮರುದಿನ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಕಾರಿನ ಮೇಲೆ ಥಾಣೆಯಲ್ಲಿ ತೆಂಗಿನಕಾಯಿ ಮತ್ತು ಸಗಣಿ ಎಸೆದಿದ್ದಾರೆ.

ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 20 ಜನರನ್ನು ಬಂಧಿಸಿದ್ದಾರೆ. ರಾಜ್ ಠಾಕ್ರೆ ಅವರು ಉದ್ಧವ್ ಠಾಕ್ರೆ ಸೋದರ ಸಂಬಂಧಿಯಾಗಿದ್ದು, ಉದ್ಧವ್ ಅವರ ತಂದೆ ಬಾಳ್ ಠಾಕ್ರೆ ಬದುಕಿದ್ದಾಗ ರಾಜ್ ಠಾಕ್ರೆ ಎಮ್ಮೆನ್ನೆಸ್ ಪಕ್ಷವನ್ನು ಸ್ಥಾಪಿಸಿದ್ದರು.

ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಮಾರಟ ಮೀಸಲಾತಿ ಹೆಸರಿನಲ್ಲಿ ಗಲಭೆ ಸೃಷ್ಟಿಸಲು ನೋಡುತ್ತಿದ್ದಾರೆ. ಇದರಲ್ಲಿ ಮೀಸಲಾತಿಗೆ ಹೋರಾಟ ನಡೆಸುತ್ತಿರುವ ಮನೋಜ್ ಜಾರಂಗೆಯನ್ನು ಪಾನ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಇದನ್ನು ಜನರು ಗಮನಿಸಬೇಕು ಎಂದು ರಾಜ್ ಠಾಕ್ರೆ ಮನವಿಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಮುಗಿಯುವುದರ ಒಳಗೆ ಮಹಾರಾಷ್ಟ್ರದಲ್ಲಿ ಮತ್ತಿನ್ಯಾವ ರಾಜಕೀಯ ತಿರುವು ಪಡೆದುಕೊಳ್ಳುತ್ತದೋ ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net