ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ, ಆರೋಪಿ ಬಂಧನ; ಸೂಲೂರು, ನಾಗಲಾಪುರ ಪ್ರದೇಶದಲ್ಲಿ ಟನೆ

ಅರಣ್ಯ ಒತ್ತುವರಿಯನ್ನು ತೆರವುಗೊಳಿಸುವ ವೇಳೆ ಅರಣ್ಯ ಸಿಬ್ಬಂದಿ ಮತ್ತು ಒತ್ತುವರಿದಾರರ ಮದ್ಯ ತಳ್ಳಾಟ&ನೂಕಾಟ ಪೊಲೀಸರು ಬಂದೋಬಸ್ತ್​ನಲ್ಲಿ ಒತ್ತುವರಿ ತೆರವುಗೊಳಿಸಲಾಯಿತು.
ಅರಣ್ಯ ಒತ್ತುವರಿಯನ್ನು ತೆರವುಗೊಳಿಸುವ ವೇಳೆ ಅರಣ್ಯ ಸಿಬ್ಬಂದಿ ಮತ್ತು ಒತ್ತುವರಿದಾರರ ಮದ್ಯ ತಳ್ಳಾಟ&ನೂಕಾಟ ಪೊಲೀಸರು ಬಂದೋಬಸ್ತ್​ನಲ್ಲಿ ಒತ್ತುವರಿ ತೆರವುಗೊಳಿಸಲಾಯಿತು.
Published on

Attack on Forest Guard, Accused Arrested

ಕೋಲಾರ: ತಾಲೂಕಿನ ಸೂಲೂರು, ನಾಗಲಾಪುರ ಅರಣ್ಯ ಪ್ರದೇಶದಲ್ಲಿ ಬುಧವಾರ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲು ಮುಂದಾದ ಸಿಬ್ಬಂದಿ ಮೇಲೆ ಒತ್ತುವರಿದಾರರು ಹಲ್ಲೆಗೆ ಮುಂದಾಗಿದ್ದು, ಈ ವೇಳೆ ನಡೆದ ತಳ್ಳಾಟ&ನೂಕಾಟದಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಹಲ್ಲೆಕೋರರನ್ನು ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಸೂಲೂರು ಹಾಗೂ ನಾಗಲಾಪುರದ ಬಳಿಯ ರಾಜ್ಯ ಅರಣ್ಯವನ್ನು 50 ವರ್ಷಗಳ ಹಿಂದೆಯೇ ಇಲಾಖೆ ವಶಕ್ಕೆ ಜಿಲ್ಲಾಡಳಿತ ನೀಡಿತ್ತು. ಈ ಪ್ರದೇಶದಲ್ಲಿ ಗಿಡ&ಮರಗಳನ್ನು ಬೆಳೆಸಲಾಗಿತ್ತು. ಆದರೆ, ಕೆಲ ವರ್ಷಗಳಿಂದ ಅರಣ್ಯ ಇಲಾಖೆಯ ವಶದಲ್ಲಿರುವ ಭೂಮಿಯ ಮೇಲೆ ಕೆಲ ಬಲಾಢ್ಯರ ಕಣ್ಣು ಬಿದ್ದು, ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹಲವು ಬಾರಿ ಎಚ್ಚರಿಕೆ ಹಾಗೂ ನೋಟೀಸ್​ ಕೊಟ್ಟಿದ್ದರೂ ರ್ನಿಲಸಿದ್ದರು.

ಇತ್ತೀಚೆಗೆ ತಾಲೂಕಿನ ಸೂಲೂರಿನ ಸರ್ವೇ ನಂಬರ್​ 143 ಹಾಗೂ ನಾಗಲಾಪುರದ ಸರ್ವೇ ನಂ. 55 ರಲ್ಲಿ ಅರಣ್ಯ ಭೂಮಿಯನ್ನು ನಾಗಲಾಪುರದ ನಾಗರಾಜಪ್ಪ ಹಾಗೂ ಶಿವಕುಮಾರ್​ ಹಾಗೂ ಇತರರು 12 ಎಕರೆಯಷ್ಟು ಭೂಮಿ ಒತ್ತುವರಿ ಮಾಡಿಕೊಂಡು, ಇಲಾಖೆಯವರು ಬೆಳೆಸಿದ್ದ ಲಾಂತರ ರೂಪಾಯಿ ಮೌಲ್ಯದ ಗಿಡ ಮರಗಳನ್ನು ಕಟಾವು ಮಾಡಿದ್ದರು. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ನಾಗರಾಜಪ್ಪ ಮತ್ತು ಶಿವಕುಮಾರ್​ ಮೇಲೆ ಪ್ರಕರಣ ದಾಖಲಿಸಿ ಒತ್ತುವರಿ ತೆರವುಗೊಳಿಸುವಂತೆ ಎಚ್ಚರಿಕೆ ನೀಡಿದ್ದರು.

ಆದರೆ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ರ್ನಿಲಕ್ಷದಿಂದ ನಾಗರಾಜಪ್ಪ ಮತ್ತು ಶಿವಕುಮಾರ್​ ಒತ್ತುವರಿ ತೆರವುಗೊಳಿಸದೆ ರ್ನಿಲಕ್ಷ$್ಯ ವಹಿಸಿದ್ದರು. ಕೆಳ ಹಂತದ ಸಿಬ್ಬಂದಿ ಪೊಲೀಸರ ಬಂದೋಬಸ್ತ್​ ತೆಗೆದುಕೊಂಡು ರಾಜ್ಯ ಅರಣ್ಯ ಭೂಮಿಯ ಗಡಿ ಗುರುತಿಸಿ ಕಲ್ಲು ಕೂಚುಗಳನ್ನು ನೆಟ್ಟು ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾದರು. ಈ ವೇಳೆ ಒತ್ತುವರಿದಾರರಾದ ನಾಗರಾಜಪ್ಪ ಮತ್ತು ಶಿವಕುಮಾರ್​ ಕುಟುಂಬದವರು ಒತ್ತುವರಿ ತೆರವುಗೊಳಿಸಲು ಯತ್ನಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ದ ದಬ್ಬಾಳಿಕೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ಕಾಂಪೌಂಡ್​ ನಿರ್ಮಿಸಲು ತಂದಿದ್ದ ಸಿಮೆಂಟ್​ ಬ್ಲಾಕ್​ಗಳನ್ನು ಕಿತ್ತೆಸೆದು ಗಲಾಟೆ ಮಾಡಲು ಮುಂದಾದ ಒತ್ತುವರಿದಾರರು, ಅರಣ್ಯ ಭೂಮಿ ವಶಪಡಿಸಿಕೊಳ್ಳಲು ಮುಂದಾದ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದರು. ಪೊಲೀಸರ ಬಿಗಿ ಬಂದೋಬಸ್ತ್​ ನಲ್ಲಿ ಒತ್ತುವರಿ ತೆರವು ನಡೆಯುತ್ತಿದ್ದರೂ, ಒತ್ತುವರಿದಾರರ ಕುಟುಂಬದ ಗುಂಪು ಏಕಾಏಕಿ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಮುಗಿಬಿದ್ದರು. ಎರಡೂ ಗುಂಪುಗಳ ನಡುವೆ ತಳ್ಳಾಟ-ನೂಕಾಟ ನಡೆಯಿತು. ಅರಣ್ಯ ಇಲಾಖೆಯ ಮೂವರು ಸಿಬ್ಬಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಕೂಡಲೇ ಪೊಲೀಸರು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ನಾಗರಾಜಪ್ಪ ಹಾಗೂ ಶಿವಕುಮಾರ್​ ಅವರನ್ನು ವಶಕ್ಕೆ ಪಡೆದು ಪೊಲೀಸ್​ ಠಾಣೆಗೆ ಕರೆದೊಯ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರ ಬಂದೋಬಸ್ತ್​ ್ತನಲ್ಲಿ ಕಾಂಪೌಂಡ್​ ನಿರ್ಮಿಸಿ ಅರಣ್ಯ ಭೂಮಿ ವಶಕ್ಕೆ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net