ಕೊನೆಗೂ ನಾವಿಬ್ಬರು ಪ್ರೇಮಪಕ್ಷಿಗಳೆಂದು ಹೇಳಿಕೊಂಡ ಕ್ರಿಕೆಟಿಗ ಕೆ.ಎಲ್​ ರಾಹುಲ್​- ನಟಿ ಆಥಿಯಾ ಶೆಟ್ಟಿ

atiyyy
Published on

ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್​ ರಾಹುಲ್​ ನಡುವಿನ ಪ್ರೀತಿ ಪ್ರೇಮದ ವಿಚಾರ ಇದೀಗ ಬಹಿರಂಗವಾಗಿದೆ. ಇಷ್ಟು ದಿನ ಇಬ್ಬರು ಪ್ರೇಮಿಗಳು ಎಂದಷ್ಟೇ ಬೇರೆ ಬೇರೆ ಮೂಲಗಳಿಂದ ಗೊತ್ತಾಗುತ್ತಿದ್ದ ವಿಚಾರವನ್ನು ಸ್ವತಃ ಆಥಿಯಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಇಂದು ಕೆ.ಎಲ್​ ರಾಹುಲ್​ ಜನ್ಮದಿನ. ಆ ಒಂದು ಕಾರಣಕ್ಕೆ ‘ಹ್ಯಾಪಿ ಬರ್ತಡೇ ಮೈ ಪರ್ಸನ್’ ಎಂದು ಬರೆದುಕೊಂಡು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕೆ.ಎಲ್​ ರಾಹುಲ್​ ಸಹ ಲವ್​ ಸಿಂಬಲ್​ ಹಾಕಿ ಪ್ರತಿಕ್ರಿಯಿಸಿದ್ದಾರೆ. ಇನ್ನುಳಿದಂತೆ ಪ್ರಿಯಾಂಕ ಚೋಪ್ರಾ, ಸಾನಿಯಾ ಮಿರ್ಜಾ, ಮೃಣಾಲ್​ ಠಾಕೂರ್​ ಸಹ ಇಬ್ಬರಿಗೂ ಶುಭ ಕೋರಿದ್ದಾರೆ.
ಅಂದಹಾಗೆ, 2019ರ ಫೆಬ್ರವರಿಯಲ್ಲಿಯೇ ಈ ಜೋಡಿ ಡೇಟಿಂಗ್​ನಲ್ಲಿದೆ ಎಂಬ ಸುದ್ದಿ ಬಾಲಿವುಡ್​ನಲ್ಲಿ ಹರಿದಾಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಇಬ್ಬರು ಅಧಿಕೃತ ಘೋಷಣೆ ಮಾಡಿರಲಿಲ್ಲ. ಇದೀಗ ಲಾಕ್​ಡೌನ್​ ಹೊತ್ತಲ್ಲಿಯೇ ಇಬ್ಬರ ಹೇಳಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿಕೊಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net