ಶಾಲೆಯಲ್ಲಿ 12 ಜನರಿಗೆ ಕ್ವಾರಂಟೈನ್

corona new
Published on

ಕೊಕಟನೂರ: ಅಥಣಿ ತಾಲೂಕಿನ ಕೊಕಟನೂರ ಮತ್ತು ನಂದಗಾಂವ ಗ್ರಾಮದಲ್ಲಿ ಮುಂಬೈನಿಂದ ಬಂದ 12 ಜನರನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಯಿತು.

ಕೊಕಟನೂರ ಗ್ರಾಮದ ಸರ್ಕಾರಿ ಕನ್ನಡ ಶಾಲೆಯಲ್ಲಿ 5 ಜನರನ್ನು ಹಾಗೂ ನಂದಗಾಂವ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ 7 ಜನರನ್ನು ಇಡಲಾಯಿತು. ಗ್ರಾಮ ಲೆಕ್ಕಾಧಿಕಾರಿಗಳಾದ ಕಲ್ಮೇಶ ಕಲಮಡಿ ಹಾಗೂ ವಿಷ್ಣು ಪೂಜಾರಿ ಮಾತನಾಡಿ, ಶಾಲೆ ಆವರಣದಿಂದ ಯಾರೂ ಹೊರಗೆ ಬರಬಾರದು, ಪರಸ್ಪರ ಅಂತರ ಕಾಯ್ದುಕೊಳ್ಳುವುದರ ಜತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ತಕ್ಷಣ ಮಾಹಿತಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಪಿಡಿಒ ವಿನೋದ ಪಾಯಕ, ಕಾರ್ಯದರ್ಶಿ ಪುಷ್ಪಾ ಒಡೆಯರ, ಹನುಮಂತ ಮಾದರ, ಶಿವರಾಮ ಹೊನಕಾಂಬಳೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net