ಅಮೆರಿಕಾ: ( Bus Plunges Into Gorge ) ಕಂದಕಕ್ಕೆ ಬಸ್ ಉರುಳಿ ಬಿದ್ದು ಮಕ್ಕಳೂ ಸೇರಿದಂತೆ 55 ಮಂದಿ ಸಾವನ್ನೊಪ್ಪಿದ್ದಾರೆ. ಈ ಘಟನೆ ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಈ ಅಪಘಾತ ಸಂಭವಿಸಿದೆ.
ಗ್ವಾಟೆಮಾಲಾ ನಗರದ ಹೊರವಲಯದಲ್ಲಿರುವ ಸೇತುವೆಯಿಂದ ಬಸ್ ಜಾರಿ, ಕೊಳಚೆ ನೀರು ತುಂಬಿದ ಕಣಿವೆಗೆ ಬಿದ್ದಿದೆ. ಈ ಘಟನೆಯಲ್ಲಿ ಬಸ್‌ನಲ್ಲಿದ್ದ 55 ಜನರು ಸಾವನ್ನಪ್ಪಿದರು.
ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು ಮತ್ತು ಬಸ್ಸಿನಿಂದ 53 ಶವಗಳನ್ನು ಹೊರತೆಗೆಯಲಾಯಿತು. ಬಸ್‌ನಲ್ಲಿದ್ದ ಇತರ ಇಬ್ಬರು ಪ್ರಯಾಣಿಕರು ಸ್ಯಾನ್ ಜುವಾನ್ ಡಿ ಡಿಯೋಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರೊಗ್ರೆಸೊ ಗ್ರಾಮದಿಂದ ಗ್ವಾಟೆಮಾಲಾ ನಗರದ ಕಡೆಗೆ ಪ್ರಯಾಣಿಸುತ್ತಿದ್ದಾಗ ಬಸ್ ಅಪಘಾತ ಸಂಭವಿಸಿದೆ ಎಂದು ಕಂಡುಬಂದಿದೆ. ಸತ್ತವರಲ್ಲಿ ಮಕ್ಕಳು ಕೂಡ ಇದ್ದರು. ಘಟನಾ ಸ್ಥಳದಲ್ಲಿ ಬಲಿಪಶುಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಗ್ವಾಟೆಮಾಲಾದ ಅಧ್ಯಕ್ಷ ಬರ್ನಾರ್ಡೊ ಅರೆವಾಲೊ ಅಪಘಾತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಲಾಗಿದೆ. ಈ ಅಪಘಾತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ಘೋಷಿಸಿದ್ದಾರೆ.