ಕಾಂಗ್ರೆಸ್​​ ಸಿಡಿ, ಬ್ಲ್ಯಾಕ್​ ಮೇಲ್ ಪಾರ್ಟಿಯಾಗಿದೆ; ಅಶ್ವಥ್ ನಾರಾಯಣ

AshwathNarayan
Published on

ಕೋಲಾರ : ಕಾಂಗ್ರೆಸ್​​ ಪಾರ್ಟಿ ಸಿಡಿ ಪಾರ್ಟಿ, ಬ್ಲ್ಯಾಕ್​ ಮೇಲ್ ಪಾರ್ಟಿಯಾಗಿದೆ. ಜಾರಕಿಹೊಳಿ ಅವರಿಗೆ ಸಾಕಷ್ಟು ಕಿರುಕುಳ ಕೊಟ್ಟಿದ್ದಾರೆಂದು ಕಾಂಗ್ರೆಸ್​​ ವಿರುದ್ಧವಾಗಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಕಿಡಿಕಾರಿದ್ದಾರೆ.

ಕಾಂಗ್ರೆಸ್,​ ಬಿಜೆಪಿ ಸಚಿವರಿಗೆ ಸಿಡಿ ಧಮ್ಕಿ ಪ್ರಕರಣವಾಗಿ ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಅಧಿಕಾರವನ್ನೇ ಹಿಂದೆ ಪಡೆದವರು ಕಾಂಗ್ರೆಸ್​​. ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡು, ಭ್ರಷ್ಟಾಚಾರವನ್ನ ಪೋಷಣೆ ಮಾಡಿದವರು ಕಾಂಗ್ರೆಸ್​​ ಪಕ್ಷವಾಗಿದೆ. ಇದನ್ನು​​ ಸಂಪೂರ್ಣವಾಗಿ ತಡೆಯುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಹೆದ್ದಾರಿ ಉದ್ಘಾಟನೆ ಕುರಿತು ಕುಮಾರಸ್ವಾಮಿ ಟ್ವೀಟ್​ಗೆ ಉತ್ತರಿಸಿ, ಹೆದ್ದಾರಿ ನಿರ್ಮಾಣ ಸಮಗ್ರ ಅಬಿವೃದ್ಧಿ, ಪ್ರಗತಿಯ ಹೆಬ್ಬಾಗಿಲನ್ನ ತೆರೆದಂತಾಗಿದೆ. ಕುಮಾರಸ್ವಾಮಿ ಎಲ್ಲದರಲ್ಲೂ ರಾಜಕೀಯ ಮಾಡಲು ಹೊರಟಿದ್ದಾರೆ. ಯಾವುದೇ ಆಧಾರ ಇಲ್ಲದೆ ಮಾತನಾಡುತ್ತಾರೆ. ಜೆಡಿಎಸ್​, ಕಾಂಗ್ರೆಸ್​​ ಪಕ್ಷ ನಿರಾಧಾರವಾಗಿ, ಆರೋಪ ಮಾಡುತ್ತಾ ಮೈ ಪರಚಿಕೊಳ್ಳುವಂತಹ ಕೆಲಸ ಮಾಡುತ್ತಿದ್ದಾರೆಂದು ವಾಗ್ದಾಳಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲೂ ಬಿಜೆಪಿಗೆ ಆಶೀರ್ವಾದ ಮಾಡುತ್ತಿದ್ದಾರೆ. ಇನ್ನೂ ಒಂದು ಸಾವಿರ ಕೋಟಿ ಕೊಟ್ಟು ಇನ್ನೂ ಉತ್ತಮವಾಗಿ ಜನ ಸ್ನೇಹಿಯಾಗಿ ಹೆದ್ದಾರಿ ಮಾಡಲಾಗುವುದು. ಅಭಿವೃದ್ದಿ ಅನ್ನೋ ಪದವೇ ಕುಮಾರಸ್ವಾಮಿ ಅವರಿಗೆ ಗೊತ್ತಿಲ್ಲ, ರಾಜಕೀಯ ಪ್ರೇರಿತವಾಗಿ ಇದ್ದಾರೆಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರ ಹೇಳಿಕೆಗಳು ಸಮರ್ಥವಾಗಿಲ್ಲ. ಸ್ವಾರ್ಥಕ್ಕಾಗಿ ಸಮಾಜವನ್ನ ಬಲಿ ಕೊಡುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ವರುಣ ಕ್ಷೇತ್ರ ಮಗನಿಗೆ ಆಸ್ತಿ ಕೊಡುವ ಹಾಗೆ ಕೊಟ್ಟಿದ್ದಾರೆ. ಎಲ್ಲಾ ಊರುಗಳ ರೌಂಡ್ ಹೊಡೆದುಕೊಂಡು ಕೋಲಾರಕ್ಕೆ ಬರ್ತಿದ್ದಾರೆ. ಅದರೆ ಕೋಲಾರದಿಂದ ಸಮಾಪ್ತಿಯಾಗಬೇಕು. ಹತ್ತು ವರ್ಷದ ಹಿಂದೆಯೇ ರಾಜಕೀಯ ನಿವೃತ್ತಿ ಎಂದಿದ್ದರು, ಆದರೆ ರಾಜಕೀಯ ದಾಹ ಅವರನ್ನ ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧವಾಗಿ ಆಕ್ರೋಶ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net