ಈ ರಾಶಿಯವರು ಅತಿ ಹೆಚ್ಚು ರೋಮ್ಯಾಂಟಿಕ್ ಆಕರ್ಷಣೆ ಹೊಂದಿರುತ್ತಾರಂತೆ! ನೀವು ಕೂಡ ಇದೇ ರಾಶಿನಾ? Zodiac Signs

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ
  • ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯ
  • ಒಬ್ಬ ವ್ಯಕ್ತಿಯ ರಾಶಿಚಕ್ರ ಆತನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ
  • ವ್ಯಕ್ತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆಯೂ ಜ್ಯೋತಿಷ್ಯ ಪ್ರಭಾವ ಬೀರುತ್ತದೆ
Zodiac Signs : ಯಾವುದೇ ವ್ಯಕ್ತಿಯ ಜನ್ಮ ದಿನಾಂಕ ಮತ್ತು ಹುಟ್ಟಿದ ಗಳಿಗೆಯು ಆತನ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತದೆ ಎಂದು ಹಿಂದು ಧರ್ಮದಲ್ಲಿ ನಂಬಲಾಗಿದೆ. ಹುಟ್ಟಿದ ದಿನ ಮತ್ತು ಗಳಿಗೆಯ ಆಧಾರದ ಮೇಲೆ ವ್ಯಕ್ತಿಯ ರಾಶಿ ಮತ್ತು ನಕ್ಷತ್ರಗಳನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿ ಮತ್ತು ನಕ್ಷತ್ರವು ಆತನ ಭವಿಷ್ಯ ಜೀವನ, ವ್ಯಕ್ತಿತ್ವ, ಗುಣಗಳು ಹಾಗೂ ಹಣಕಾಸಿನ ಸ್ಥಿತಿಯ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ, ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಹೆಚ್ಚಾಗಿ ಪ್ರೀತಿಯ ಆಕರ್ಷಣೆ ಹೊಂದಿರುತ್ತಾರಂತೆ. ನಿಮಗೆ ಗೊತ್ತಿದೆ, ಪ್ರೀತಿ ಯಾವಾಗ ಮತ್ತು ಹೇಗೆ ಬರುತ್ತದೆ ಎಂದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ನಾವು ಯಾರೊಂದಿಗೆ ಪ್ರೀತಿಯಲ್ಲಿ ಬೀಳುತ್ತೇವೆ ಎಂದು ಭಾವಿಸುತ್ತೇವೆಯೋ ಅವರೇ ಮೊದಲು ಪ್ರೀತಿಯಲ್ಲಿ ಬಿದ್ದಿರುತ್ತಾರೆ. ಪ್ರೀತಿಯಲ್ಲಿ ಸಾಕಷ್ಟು ತಿರುವುಗಳಿರುತ್ತವೆ. ಅದನ್ನು ಪಡೆಯುವುದು ತುಂಬಾ ಕಷ್ಟ ಎಂದು ಹೇಳಬಹುದು. ಆದರೆ, ಕೆಲವು ರಾಶಿಯವರು ಪ್ರೀತಿಯನ್ನು ಹೆಚ್ಚು ಆಕರ್ಷಿಸುತ್ತಾರಂತೆ. ಅವರ ಗುಣಗಳು ಹಾಗೂ ನೈಸರ್ಗಿಕ ಆಕರ್ಷಣೆಯಿಂದಾಗಿ ಅವರಿಗೆ ಮನಸೋಲುತ್ತಾರಂತೆ. ಹಾಗಾದರೆ, ಯಾವ ರಾಶಿಯವರು ಪ್ರೀತಿಯನ್ನು ಆಕರ್ಷಿಸುತ್ತಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ವೃಷಭ ರಾಶಿ

ವೃಷಭ ರಾಶಿಯಲ್ಲಿ ಜನಿಸಿದ ಜನರು ತುಂಬಾ ಶಾಂತ, ವಿಶ್ವಾಸಾರ್ಹ ಮತ್ತು ಭಾವನಾತ್ಮಕರು. ಅವರ ಈ ಗುಣ ಮತ್ತು ವಾತ್ಸಲ್ಯವು ಇತರರನ್ನು ಸುಲಭವಾಗಿ ಆಕರ್ಷಿಸುತ್ತದೆ. ಅವರ ಬೆಂಬಲದ ನಡವಳಿಕೆಯಿಂದಾಗಿ ಅನೇಕ ಜನರು ಸ್ವಾಭಾವಿಕವಾಗಿಯೇ ಅವರತ್ತ ಆಕರ್ಷಿತರಾಗುತ್ತಾರೆ. ವೃಷಭ ರಾಶಿಯಲ್ಲಿರುವ ಒಳ್ಳೆಯ ಗುಣಗಳು ಅವರ ಮೇಲೆ ಪ್ರೀತಿ ಹುಟ್ಟುವಂತೆ ಮಾಡುತ್ತದೆ.

ಮಿಥುನ ರಾಶಿ

ಮಿಥುನ ರಾಶಿಯವರು ಸಾಮಾಜಿಕವಾಗಿ ಬೆರೆಯುವ ಮತ್ತು ಮುಕ್ತವಾಗಿ ಮಾತನಾಡುವ ಸ್ವಭಾವದವರು. ಅವರ ಹಾಸ್ಯ, ಬುದ್ಧಿವಂತಿಕೆ ಮತ್ತು ಸಂಭಾಷಣೆಯ ಕೌಶಲ್ಯದಿಂದಾಗಿ ಜನರು ಅವರೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಇದರಿಂದಾಗಿ, ಅನೇಕ ಜನರು ಅವರತ್ತ ಸುಲಭವಾಗಿ ಆಕರ್ಷಿತರಾಗುತ್ತಾರೆ. ಈ ಉತ್ಸಾಹದಿಂದಾಗಿ, ಇತರರು ಅವರನ್ನು ಯಾವಾಗಲೂ ಆಕರ್ಷಕ ಮತ್ತು ಪ್ರೀತಿಯಿಂದ ನೋಡುತ್ತಾರೆ. ಅದಕ್ಕಾಗಿಯೇ ಮಿಥುನ ರಾಶಿಯವರಿಗೆ ಪ್ರೀತಿ ಸುಲಭವಾಗಿ ಹುಟ್ಟುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯವರು ತಮ್ಮ ನಾಯಕತ್ವ ಗುಣ ಮತ್ತು ಆತ್ಮವಿಶ್ವಾಸದಿಂದ ಅನೇಕರಿಂದ ಪ್ರೀತಿಸಲ್ಪಡುತ್ತಾರೆ. ಅವರ ದಯೆ, ಧೈರ್ಯ ಮತ್ತು ಸಹಾಯಕಾರಿ ಮನೋಭಾವವು ಇತರರನ್ನು ಸುಲಭವಾಗಿ ಆಕರ್ಷಿಸುತ್ತದೆ. ಅವರ ಶಕ್ತಿ ಮತ್ತು ಸಕಾರಾತ್ಮಕ ಆಲೋಚನೆಗಳಿಂದಾಗಿ ಅವರು ಯಾವಾಗಲೂ ಇತರರಿಂದ ಗಮನಿಸಲ್ಪಡುತ್ತಾರೆ ಎಂದು ಹೇಳಲಾಗುತ್ತದೆ.

ತುಲಾ ರಾಶಿ

ತುಲಾ ರಾಶಿಯವರು ನ್ಯಾಯಯುತ ಮತ್ತು ಸಮತೋಲನ ಹೊಂದಿರುತ್ತಾರೆ. ಅವರ ಸ್ನೇಹಪರತೆ, ಸಭ್ಯತೆ ಮತ್ತು ಆಕರ್ಷಕ ವ್ಯಕ್ತಿತ್ವದಿಂದಾಗಿ ಅನೇಕ ಜನರು ಅವರತ್ತ ಆಕರ್ಷಿತರಾಗುತ್ತಾರೆ. ಅವರು ಯಾವಾಗಲೂ ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರನ್ನು ಪ್ರೀತಿಯಿಂದ ನಡೆಸಿಕೊಳ್ಳುತ್ತಾರೆ. ಇದು ಪ್ರೀತಿಯ ಪ್ರಮುಖ ಲಕ್ಷಣವಾಗಿದೆ. ಅದಕ್ಕಾಗಿಯೇ ಹೆಚ್ಚಿನ ಜನರು ಅವರನ್ನು ಪ್ರೀತಿಸುತ್ತಾರೆ ಎಂದು ಹೇಳಲಾಗುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ತುಂಬಾ ರಹಸ್ಯ ಸ್ವಭಾವದವರು ಮತ್ತು ಉತ್ತಮ ಗುಣವುಳ್ಳವರು. ಇತರರು ಅವರ ಆಳವಾದ ಭಾವನೆಗಳು ಮತ್ತು ನಿಷ್ಠೆಯ ಕಾರಣದಿಂದಾಗಿ ಅವರತ್ತ ಆಕರ್ಷಿತರಾಗುತ್ತಾರೆ. ಅವರ ಆಕರ್ಷಕ ನೋಟ ಮತ್ತು ಭಾವನಾತ್ಮಕ ಸ್ವಭಾವದಿಂದಾಗಿ ಅನೇಕ ಜನರು ಅವರಿಗೆ ಹತ್ತಿರವಾಗಲು ಬಯಸುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net