ನಕ್ಷತ್ರ ಬದಲಿಸಿದ ಗುರು ಗ್ರಹ: ಆಗಸ್ಟ್ 18ರವರೆಗೆ ಈ ರಾಶಿಯವರಿಗೆ ರಾಜಯೋಗ, ಕೈ ಇಟ್ಟಲ್ಲೆಲ್ಲಾ ಯಶಸ್ಸು! Astrology

Astrology ಸಾಂದರ್ಭಿಕ ಚಿತ್ರ
Astrology ಸಾಂದರ್ಭಿಕ ಚಿತ್ರ
Published on
Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದೇ ಕರೆಯಲ್ಪಡುವ ದೇವಗುರು ಬೃಹಸ್ಪತಿಯ ನಡೆಗೆ ವಿಶೇಷ ಪ್ರಾಮುಖ್ಯತೆ ಇದೆ. ಇದೀಗ ಜೂನ್ 21 ರಂದು ಗುರು ಗ್ರಹವು ನಕ್ಷತ್ರಗಳ ರಾಜ ಎಂದೇ ಖ್ಯಾತಿಯಾಗಿರುವ 'ಪುಷ್ಯ ನಕ್ಷತ್ರ'ಕ್ಕೆ ಪಾದಾರ್ಪಣೆ ಮಾಡಿದೆ. ಆಗಸ್ಟ್ 18 ರವರೆಗೆ ಗುರುವು ಇದೇ ನಕ್ಷತ್ರದಲ್ಲಿ ಸಂಚರಿಸಲಿದ್ದು, ಮುಂದಿನ 61 ದಿನಗಳ ಕಾಲ ಬ್ರಹ್ಮಾಂಡದಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಅಪರೂಪದ ಶುಭ ಯೋಗವೊಂದು ಸೃಷ್ಟಿಯಾಗಲಿದೆ.
ಸಾಮಾನ್ಯವಾಗಿ ಗುರು ಗ್ರಹದ ರಾಶಿ ಪರಿವರ್ತನೆಗಿಂತ ನಕ್ಷತ್ರ ಬದಲಾವಣೆಯು ಮಾನವ ಜೀವನದ ಮೇಲೆ ತೀವ್ರವಾದ ಪ್ರಭಾವ ಬೀರುತ್ತದೆ. ಗುರು ಮತ್ತು ಪುಷ್ಯ ನಕ್ಷತ್ರದ ಈ ಅಪರೂಪದ ಮಹಾಮಿಲನವು ಜ್ಞಾನ, ಸಂಪತ್ತು, ಸಂತಾನ, ಉದ್ಯೋಗ ಮತ್ತು ಅದೃಷ್ಟದ ಮೇಲೆ ಅಭೂತಪೂರ್ವ ಧನಾತ್ಮಕ ಬದಲಾವಣೆಗಳನ್ನು ತರಲಿದೆ ಎಂದು ಜ್ಯೋತಿಷ್ಯರು ಅಭಿಪ್ರಾಯಪಟ್ಟಿದ್ದಾರೆ. ಹಾಗಿದ್ದರೆ, ಗ್ರಹದ ಸಂಚಾರದಿಂದ ಯಾವ ರಾಶಿಯವರಿಗೆ ಶುಭ ಎಂದು ನೋಡೋಣ ಬನ್ನಿ....

ಮೇಷ ರಾಶಿ

ಈ ರಾಶಿಯವರಿಗೆ ಈ ಸಂದರ್ಭದಲ್ಲಿ ಧೈರ್ಯ ಹೆಚ್ಚಾಗಲಿದೆ. ಕೆಲಸದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಸಿಗುತ್ತದೆ ಮತ್ತು ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಈ ದಿನಗಳಲ್ಲಿ ಬಹಳ ದಿನಗಳಿಂದ ಸಿಲುಕಿಕೊಂಡಿದ್ದ ಹಣವನ್ನು ಮರಳಿ ಪಡೆಯುವ ಸಾಧ್ಯತೆಯಿದೆ. ವ್ಯವಹಾರದಲ್ಲಿ ಹೊಸ ಹೂಡಿಕೆಗಳು ಅಧಿಕ ಲಾಭ ದೊರೆಯಲಿದ್ದು, ಉದ್ಯೋಗಿಗಳಿಗೆ ಸಂಬಳ, ಬಡ್ತಿ ಹೆಚ್ಚಾಗಲಿದೆ.

ಕರ್ಕಾಟಕ ರಾಶಿ

ಈ ರಾಶಿಯವರಿಗೆ ಅದೃಷ್ಟದ ಚಕ್ರ ತಿರುಗುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆಯಲಿದ್ದೀರಿ. ಹೊಸ ಉದ್ಯೋಗವಕಾಶಗಳು ಹುಡುಕಿಕೊಂಡು ನಿಮ್ಮ ಬಳಿ ಬರಲಿವೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಒಳ್ಳೆಯ ಸಿಗುತ್ತದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.

ತುಲಾ ರಾಶಿ

ತುಲಾ ರಾಶಿಯವರಿಗೆ ಆರ್ಥಿಕ ಸಮೃದ್ಧಿ ಮತ್ತು ಯಶಸ್ಸನ್ನು ತರಲಿದೆ. ಈ ಜನರು ವ್ಯವಹಾರದಲ್ಲಿ ದೊಡ್ಡ ಒಪ್ಪಂದಗಳನ್ನು ಮಾಡಿಕೊಳ್ಳಲಿದ್ದೀರಿ. ದೀರ್ಘ ಕಾಲದ ಆಸೆಗಳು ಈಡೇರುವಂತಹ ಸಮಯ ಇದಾಗಿದೆ. ವೃತ್ತಿ ಜೀವನಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಕುಟುಂಬದವರ ಸಹಾಯದಿಂದ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net