Zodiac Signs : ಜೀವನವು ಯಾವಾಗಲೂ ಸುಗಮವಾಗಿ ಸಾಗುವುದಿಲ್ಲ. ಜೀವನ ಅಂದರೆ ಅಲ್ಲಿ ಏರಿಳಿತ, ಏಳು-ಬೀಳು ಇರುವುದು ಸಹಜ. ನಾವು ಎಂದಿಗೂ ಊಹಿಸದ ಅನೇಕ ಸವಾಲುಗಳು ಮತ್ತು ಅಡೆತಡೆಗಳನ್ನು ಜೀವನದುದ್ದಕ್ಕೂ ನಿರಂತರವಾಗಿ ಎದುರಿಸುತ್ತೇವೆ. ಆದರೆ, ಇದ್ಯಾವುದಕ್ಕೂ ಧೃತಿಗೆಡಬಾರದು. ಏಕೆಂದರೆ, ಯಾವ ಸಮಸ್ಯೆಗಳೂ ಶಾಶ್ವತವಲ್ಲ ಮತ್ತು ಪರಿಹರಿಸಲು ಸಾಧ್ಯಾವೇ ಇಲ್ಲ ಅಂತೇನಿಲ್ಲ. ಜೀವನವನ್ನು ಎದುರಿಸುವ ಛಲ ನಿಮ್ಮಲ್ಲಿದ್ದರೆ ಯಾವ ಸಮಸ್ಯೆಯೂ ನಿಮಗೆ ದೊಡ್ಡದಾಗುವುದಿಲ್ಲ.