ಈ ರಾಶಿಯವರು ಪ್ರೀತಿಗಾಗಿ ತಮ್ಮ ಪ್ರಾಣವನ್ನೇ ಕೊಡಲು ಸಿದ್ಧರಾಗಿರುತ್ತಾರಂತೆ! Astrology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Astrology : ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ರಾಶಿಚಕ್ರವು ವಿಭಿನ್ನ ಗುಣಗಳನ್ನು ಹೊಂದಿರುತ್ತದೆ. ಪ್ರತಿಯೊಂದು ರಾಶಿಚಿಹ್ನೆಗೆ ಅವರ ಜೀವನವನ್ನು ಊಹಿಸಲಾಗುತ್ತದೆ. ಅಲ್ಲದೇ, ಅವರ ಕೆಲಸ, ವೃತ್ತಿ ಮತ್ತು ಜೀವನ ಸಂಗಾತಿ ಹೇಗಿರುತ್ತಾರೆ ಎಂದು ಜ್ಯೋತಿಷ್ಯವು ತಿಳಿಸುತ್ತದೆ. ಆದಾಗ್ಯೂ, ಕೆಲವೊಂದಿ ರಾಶಿಯವರು ತಮ್ಮ ಸಂಗಾತಿಗಾಗಿ ಜೀವವನ್ನೇ ಕೊಡುತ್ತಾರಂತೆ! ಹಾಗಾದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ...

ವೃಷಭ ರಾಶಿ

ವೃಷಭ ರಾಶಿಯಲ್ಲಿ ಜನಿಸಿದ ಮಹಿಳೆಯನ್ನು ಶುಕ್ರನು ಆಳುತ್ತಾನೆ. ಹಾಗಾಗಿ ಅವರ ಪ್ರೀತಿ ಕೊನೆಯವರೆಗೂ ಇರುತ್ತದೆ. ಈ ಜನರು ಯಾವುದೇ ಸಂದರ್ಭದಲ್ಲಿಯೂ ಪ್ರೀತಿಯನ್ನು ಮುರಿದುಕೊಳ್ಳುವುದಿಲ್ಲ. ಪ್ರೀತಿಯ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಇದ್ದರೂ ಅವುಗಳನ್ನು ಪರಿಹರಿಸಿಕೊಳ್ಳುತ್ತಾರಂತೆ. ಈ ರಾಶಿಯವರು ಪ್ರೀತಿಯಲ್ಲಿ ತುಂಬಾ ಪ್ರಾಮಾಣಿಕರಾಗಿರುತ್ತಾರೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯಲ್ಲಿ ಜನಿಸಿದ ಜನರು ಭಾವನೆಗಳಿಗೆ ಹೆಸರುವಾಸಿಯಾಗಿರುತ್ತಾರೆ. ಇವರು ಪ್ರೀತಿಯ ವಿಷಯಕ್ಕೆ ಬಂದರೆ ತುಂಬಾ ಶ್ರದ್ಧೆಯುಳ್ಳವರು ಹಾಗೇ ತಮಮ್ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಅವರು ತಮ್ಮ ಪ್ರೀತಿಪಾತ್ರರನ್ನು ತುಂಬಾ ಪ್ರೀತಿಸುತ್ತಾರೆ. ಈ ಯವರು ತುಂಬಾ ಕರುಣಾಳುಗಳು. ಆದ್ದರಿಂದ, ತಮ್ಮ ಸಂಗಾತಿ ಸ್ವಲ್ಪ ದಣಿದಿದ್ದರೂ ಸಹ, ಅವರು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ. ಹಾಗೆಯೇ ಎಂತಹ ಕಷ್ಟ ಬಂದರೂ ಅವರ ಜೊತೆ ನಿಲ್ಲುತ್ತಾರೆ.

ತುಲಾ ರಾಶಿ

ತುಲಾ ರಾಶಿಯವರು ಪ್ರೀತಿಯಲ್ಲಿ ಸಂಪೂರ್ಣವಾಗಿ ಮುಳುಗಿರುತ್ತಾರೆ. ಅವರು ತಮ್ಮ ಸಂಗಾತಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಪ್ರೀತಿಸಿದವರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಇವರು ಪ್ರೀತಿಯಲ್ಲಿ ಬಲಶಾಲಿಗಳಾಗಿದ್ದು, ಯಾವುದೇ ಸಮಸ್ಯೆಗಳು ಬಂದರೂ ಪ್ರೀತಿಯನ್ನು ಬಿಟ್ಟುಕೊಡುವುದಿಲ್ಲ. ತಮ್ಮ ಪ್ರೇಮಿಯೊಂದಿಗೆ ನಿರಂತರವಾಗಿ ಪ್ರೀತಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net