Zodiac Signs: ಈ ರಾಶಿಯವರು ಯಾರನ್ನೂ ನಂಬಲ್ಲ.. ಬರೀ ಅನುಮಾನ!

Untitled design (55)
Published on

Zodiac Signs: ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಈ ಕಾರಣಕ್ಕೆ ಹುಟ್ಟಿದ ತಕ್ಷಣ ಸಮಯವನ್ನು ನೋಡಲಾಗುತ್ತದೆ.

ಅದು ಸ್ನೇಹ, ಪ್ರೀತಿ ಅಥವಾ ಮದುವೆಯಾಗಿರಬಹುದು ಯಾವುದೇ ಸಂಬಂಧ ಬಲವಾಗಿರಲು ಇಬ್ಬರ ನಡವೆ ನಂಬಿಕೆ ಇರಬೇಕು. ನಂಬಿಕೆ ಇಲ್ಲದೆ ಯಾವುದೇ ಸಂಬಂಧ ಉಳಿಯಲು ಸಾಧ್ಯವಿಲ್ಲ. ಆದರೆ, ಕೆಲವರು ಎಲ್ಲರನ್ನೂ ಅಷ್ಟು ಸುಲಭವಾಗಿ ನಂಬುವುದಿಲ್ಲ. ಅವರು ಎಲ್ಲರನ್ನೂ ಅನುಮಾನದಿಂದ ನೋಡುತ್ತಾರೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರದವರು ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಹಾಗಾದ್ರೆ ಆ ರಾಶಿ ಚಕ್ರದ ಚಿಹ್ನೆಗಳು ಯಾವುವು ತಿಳಿಯೋಣ.

1.ವೃಶ್ಚಿಕ

ವೃಶ್ಚಿಕ ರಾಶಿಯವರು ತುಂಬಾ ಭಾವುಕರು. ಅವರು ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಅವರಿಗೆ ಹೆಚ್ಚಿನ ಅಂತಃಪ್ರಜ್ಞೆ ಇರುತ್ತದೆ. ಇತರರು ಮಾಡುವ ಎಲ್ಲದರ ಬಗ್ಗೆಯೂ ಅವರು ತುಂಬಾ ಅನುಮಾನಾಸ್ಪದರು. ಈ ರಾಶಿಚಕ್ರ ಚಿಹ್ನೆಗಳು ಪ್ರೇಮ ಸಂಬಂಧಗಳಲ್ಲಿ ವಿಶೇಷವಾಗಿ ಅನುಮಾನಾಸ್ಪದರು.

2. ಮಕರ

ಮಕರ ರಾಶಿಯವರು ತುಂಬಾ ಕಠಿಣ ಹೃದಯದವರು. ಎಲ್ಲವನ್ನೂ ವಿಶ್ಲೇಷಿಸಿದ ನಂತರವಷ್ಟೇ ಅವರು ಯಾರನ್ನಾದರೂ ನಂಬುತ್ತಾರೆ. ಈ ರಾಶಿಯವರನ್ನು ಯಾರದಾರೂ ವಂಚಿಸಿದ್ರೆ ಅವರನ್ನ ಜೀವನದುದ್ದಕ್ಕೂ ನೆನಪಿನಲ್ಲಿಟ್ಟುಕೊಳ್ತಾರೆ.

3.ಕನ್ಯಾ

ಕನ್ಯಾ ರಾಶಿಯವರು ಪ್ರತಿಯೊಂದು ಸಣ್ಣಪುಟ್ಟ ವಿಚಾರಕ್ಕೂ ತುಂಬಾ ಚಿಂತೆ ಮಾಡ್ತಾರೆ. ಅವರು ಎಲ್ಲರನ್ನೂ ದೋಷಪೂರಿತವಾಗಿಯೇ ನೋಡುತ್ತಾರೆ.ಅವರು ಸಣ್ಣ ವಿಷಯವನ್ನು ಸಹ ನಂಬುವುದಿಲ್ಲ. ಎಲ್ಲರೂ ಎಲ್ಲದರಲ್ಲೂ ಪರಿಪೂರ್ಣರಾಗಿರಬೇಕು ಎಂದು ಅವರು ನಿರೀಕ್ಷಿಸುತ್ತಾರೆ. ನಂಬದ ಯಾರನ್ನೂ ಅವರು ನಂಬಲು ಸಾಧ್ಯವಿಲ್ಲ. ಅವರ ವಿಶ್ವಾಸ ಗಳಿಸುವುದು ಸುಲಭವಲ್ಲ.

4.ಮೇಷ

ಮೇಷ ರಾಶಿಯವರು ತುಂಬಾ ಭಾವನಾತ್ಮಕ ಜನರು. ಅವರು ಬಹಳ ಬೇಗ ಕೋಪಗೊಳ್ಳುತ್ತಾರೆ. ಆದರೆ, ಅವರು ಅಷ್ಟೇ ಬೇಗ ಕ್ಷಮೆಯಾಚಿಸುತ್ತಾರೆ. ಆದರೆ. ಯಾರಾದರೂ ಅವರಿಗೆ ಮೋಸ ಮಾಡಿದರೆ ಜೀವನದಲ್ಲಿ ಯಾರೂ ಅವರನ್ನು ನಂಬುವುದಿಲ್ಲ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net