ನಿಮ್ಮ ಜನ್ಮ ದಿನಾಂಕದಲ್ಲೇ ನಿಮ್ಮ ಭವಿಷ್ಯದ ವೃತ್ತಿ ಅಡಗಿದೆ! ಇಲ್ಲಿದೆ ವಿಶೇಷ ಮಾಹಿತಿ | Numerology
Numerology
Published on:
Copied
Follow Us
Numerology: ಜನ್ಮ ಸಂಖ್ಯೆಯು ನಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹ ಅವು ಸಹಾಯಕವಾಗಿವೆ. ಆದ್ದರಿಂದ ಸಂಖ್ಯಾಶಾಸ್ತ್ರದ (Numerology) ಪ್ರಕಾರ ನಿಮಗೆ ಯಾವ ವೃತ್ತಿಜೀವನವು ಉತ್ತಮವಾಗಿದೆ ಎನ್ನುವುದನ್ನು ಇಲ್ಲಿ ತಿಳಿಯೋಣ.
ಜನ್ಮ ದಿನಾಂಕವನ್ನು ಜನ್ಮ ಸಂಖ್ಯೆ ಎಂದು ಕರೆಯಲಾಗುತ್ತದೆ. ವೃತ್ತಿಜೀವನವನ್ನು ಜನ್ಮ ಸಂಖ್ಯೆಯ ಅನುಗುಣವಾಗಿ ಆಯ್ಕೆ ಮಾಡಿದರೆ, ಆಗ ಯಶಸ್ಸನ್ನು ಪಡೆಯುವುದು ಸುಲಭವಾಗುತ್ತದೆ. ಜನ್ಮ ಸಂಖ್ಯೆಯನ್ನು ಕಂಡುಹಿಡಿಯಲು ಹುಟ್ಟಿದ ದಿನಾಂಕವನ್ನು ಏಕ ಅಂಕಿಗಳಾಗಿ ಮಾಡಿ. ಉದಾಹರಣೆಗೆ: 27ನೇ ದಿನಾಕದಂದು ಜನಿಸಿದರೆ, ಆಗ 2 + 7 = 9, ಇದರಲ್ಲಿ ಬರುವ ಕೊನೆಯ ಸಂಖ್ಯೆಯೇ ಜನ್ಮ ಸಂಖ್ಯೆ. ಜನ್ಮ ಸಂಖ್ಯೆಯ ಆಧಾರದೊಂದಿಗೆ ವೃತ್ತಿ ಜೀವನದ ಆಯ್ಕೆ ಈ ರೀತಿಯಲ್ಲಿದೆ.
ಸಂಖ್ಯೆ 1
ನಿಮ್ಮ ಜನ್ಮ ದಿನಾಂಕ 1, 10, 19 ಅಥವಾ 28 ಆಗಿದ್ದರೆ, ಜನ್ಮ ಸಂಖ್ಯೆ 1 ಆಗಿರುತ್ತದೆ. ಆಗ ನೀವು ಸರ್ಕಾರಿ ಕೆಲಸ, ವೈದ್ಯಕೀಯ ಮತ್ತು ರಾಜಕೀಯ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳಬಹುದು. ಸೂರ್ಯನನ್ನು ಪೂಜಿಸುವ ಮೂಲಕ, ವೃತ್ತಿಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಬಹುದು.
ಸಂಖ್ಯೆ 2
ನಿಮ್ಮ ಜನ್ಮ ಸಂಖ್ಯೆ 2 ಆಗಿದ್ದರೆ. ಅಂದರೆ 2, 11, 20 ಅಥವಾ 29 ರಂದು ಅವರ ಜನ್ಮದಿನವಿದ್ದರೆ ಕಲೆ, ಚಲನಚಿತ್ರ, ವೈದ್ಯಕೀಯ, ನೌಕಾಪಡೆ, ಶಿಕ್ಷಕ ಅಥವಾ ಹೋಟೆಲ್ ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರೆ ಯಶಸ್ಸನ್ನು ಪಡೆಯುತ್ತಾರೆ. ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸಿಗಾಗಿ ನೀವು ಶಿವನನ್ನು ಪೂಜೆ ಮಾಡುವುದು ಉತ್ತಮ.
ಸಂಖ್ಯೆ 3
ನಿಮ್ಮ ಜನ್ಮ ಸಂಖ್ಯೆ 3 ಆಗಿದ್ದರೆ, ಜನ್ಮದಿನವು ತಿಂಗಳ 3, 12, 21 ಅಥವಾ 30 ರಂದು ಇರಬೇಕು. ಅಂತಹ ಸಂದರ್ಭದಲ್ಲಿ, ನೀವು ಕಾನೂನು ಅಂದರೆ ವಕೀಲರು ಅಥವಾ ನ್ಯಾಯಾಧೀಶರಾಗಿ ವೃತ್ತಿ ಜೀವನದ ಆಯ್ಕೆ ಮಾಡಿಕೊಂಡರೆ ಯಶಸ್ಸನ್ನು ಪಡೆಯುತ್ತಿರಿ. ನಿಮ್ಮ ವೃತ್ತಿಜೀವನದ ಯಶಸ್ಸಿಗಾಗಿ ಶ್ರೀ ಹರಿ ವಿಷ್ಣುಯನ್ನು ಪೂಜಿಸುವುದು ಒಳ್ಳೆಯದು.
ಸಂಖ್ಯೆ 4
ಜನ್ಮ ಸಂಖ್ಯೆ 4 ಆಗಿದ್ದರೆ, 4, 13, 22 ಅಥವಾ 31 ರಂದು ಜನಿಸಿರಬೇಕು. ಆಗ ನೀವುಗ ಕಂಪ್ಯೂಟರ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಜ್ಯೋತಿಷ್ಯ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ನಿಂರತರವಾದ ಶಿವನ ಪೂಜೆ ಅಧಿಕ ಲಾಭವನ್ನು ತರುತ್ತದೆ.
ಸಂಖ್ಯೆ 5
ಜನ್ಮ ಸಂಖ್ಯೆ 5 ಆಗಿದ್ದರೆ, ಆತನ ಹುಟ್ಟುಹಬ್ಬ 5, 14 ಅಥವಾ 23 ರಂದು ಬರುತ್ತವೆ. ಅಂತವರು ಬ್ಯಾಂಕಿಂಗ್, ಹಣಕಾಸು, ಮಾರ್ಕೆಟಿಂಗ್ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ತಮ್ಮ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಪ್ರಗತಿಯನ್ನು ಹೊಂದುತ್ತಾರೆ. ಆದರೆ ನೀವು ಗಣಪತಿಯನ್ನು ಮಾಡಿದರೆ ಉತ್ತಮ.
ಸಂಖ್ಯೆ 6
ನಿಮ್ಮ ಜನ್ಮ ಸಂಖ್ಯೆ 6 ಆಗಿದ್ದರೆ, ಅಂದರೆ 6, 15 ಅಥವಾ 24 ರಂದು ಹುಟ್ಟುಹಬ್ಬವಿದ್ದರೆ, ಚಲನಚಿತ್ರ, ಮಾಧ್ಯಮ, ವೈದ್ಯಕೀಯ, ಆಭರಣ, ಸೌಂದರ್ಯ, ಸೌಂದರ್ಯದಂತಹ ಕ್ಷೇತ್ರಗಳಲ್ಲಿ ಉತ್ತಮ ವೃತ್ತಿಜೀವನವನ್ನು ಆಯ್ಕೆ ಮಾಡಬಹುದು. ವೃತ್ತಿಜೀವನದ ಯಶಸ್ಸಿಗಾಗಿ ನೀವು ಲಕ್ಷ್ಮಿಯನ್ನು ಪೂಜಿಸಬೇಕು.
ಸಂಖ್ಯೆ 7
ಜನ್ಮ ಸಂಖ್ಯೆ 7 ಆಗಿದ್ದರೆ, ಅಂದರೆ, ಹುಟ್ಟುಹಬ್ಬದ ದಿನಾಂಕ 7, 16 ಅಥವಾ 25ರಂದು ಬರುತ್ತವೆ. ಅವರು ಎಂಜಿನಿಯರಿಂಗ್, ತಂತ್ರಜ್ಞಾನ, ಮ್ಯಾನೇಜ್ಮೆಂಟ್ ಅಥವಾ ಪ್ರಯಾಣದಂತಹ ಕ್ಷೇತ್ರಗಳಲ್ಲಿ ಉತ್ತಮ ವೃತ್ತಿಜೀವನಕಾಗಿ ಪ್ರಯತ್ನ ಮಾಡಬಹುದು. ಶಿವನ ಪೂಜೆ ನಿಮಗೆ ಹೆಚ್ಚಿನ ಯಶಸ್ಸನ್ನು ದೊರೆಯುವಂತೆ ಮಾಡುತ್ತದೆ.
ಸಂಖ್ಯೆ 8
ಜನ್ಮ ಸಂಖ್ಯೆ 8 ಆಗಿದ್ದರೆ, ಜನ್ಮದಿನವು 8, 17 ಅಥವಾ 26 ರಂದು ಆಗಿರಬೇಕು. ಇವರು ಕಾರ್ಖಾನೆ, ಕೈಗಾರಿಕೆ, ಕಬ್ಬಿಣ, ಕಲ್ಲಿದ್ದಲು, ಶಿಕ್ಷಣ ಅಥವಾ ಕಾನೂನಿನಲ್ಲಿ ವೃತ್ತಿಜೀವನವನ್ನು ಮಾಡಬೇಕು. ಆಗ ಅವರು ಯಶಸ್ಸನ್ನು ಕಾಣುವರು. ಶನಿ ದೇವರನ್ನು ಪೂಜಿಸಿದರೆ ವೃತ್ತಿ ಜೀವನ ಶುಭಕರವಾಗಿರುತ್ತದೆ.
ಸಂಖ್ಯೆ 9
ಜನ್ಮ ಸಂಖ್ಯೆ 9 ಆಗಿರುವವರ ಬಗ್ಗೆ ಹೇಳುವುದಾದರೆ, ನಿಮ್ಮ ಜನ್ಮ ದಿನಾಂಕ 9, 18 ಅಥವಾ 27 ಆಗಿರುತ್ತದೆ. ಅವರುಗಳು ಸೈನ್ಯ, ಪೊಲೀಸ್, ಕಾರ್ಖಾನೆ, ಭೂಮಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ತಮ್ಮ ಕಠಿಣ ಪರಿಶ್ರಮದಿಂದ ಉತ್ತಮ ಕೆಲಸ ಮಾಡಬಹುದು. ಹನುಮಂತ ಪೂಜೆ ನಿಮ್ಮನ್ನು ಉತ್ತುಂಗಕ್ಕೆ ಕರೆದೊಯ್ಯುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.