ಈ 3 ರಾಶಿಯ ಮಹಿಳೆಯರು ತುಂಬಾ ಕ್ಯೂಟ್​ ಆಗಿರುತ್ತಾರಂತೆ! ನೀವು ಕೂಡ ಇದೇ ರಾಶಿಯವರ? Zodiac signs

ಸಾಂದರ್ಭಿಕ ಚಿತ್ರ ( Zodiac signs )
ಸಾಂದರ್ಭಿಕ ಚಿತ್ರ ( Zodiac signs )
Published on

ಪ್ರಮುಖ ಮುಖ್ಯಾಂಶಗಳು

  • ರಾಶಿಚಕ್ರ ಮತ್ತು ಮನುಷ್ಯನ ವ್ಯಕ್ತಿತ್ವದ ನಡುವಿನ ಸಂಬಂಧವು ಜ್ಯೋತಿಷ್ಯಶಾಸ್ತ್ರದ ಒಂದು ಪ್ರಮುಖ ಅಂಶವಾಗಿದೆ
  • ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯ ಹುಟ್ಟಿದ ಘಳಿಗೆ ಮತ್ತು ರಾಶಿ ಆತನ ಭವಿಷ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ
  • ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ
  • ವ್ಯಕ್ತಿಯ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆಯೂ ಜನ್ಮ ರಾಶಿ ಗಮನಾರ್ಹ ಪ್ರಭಾವ ಬೀರುತ್ತದೆ
Zodiac signs : ರಾಶಿಚಕ್ರ ಮತ್ತು ಮನುಷ್ಯನ ವ್ಯಕ್ತಿತ್ವದ ನಡುವಿನ ಸಂಬಂಧವು ಜ್ಯೋತಿಷ್ಯಶಾಸ್ತ್ರದ ಒಂದು ಪ್ರಮುಖ ಅಂಶವಾಗಿದೆ. ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯ ಜನ್ಮ ಸಮಯದಲ್ಲಿ ಗ್ರಹಗಳ ಸ್ಥಾನ ಮತ್ತು ರಾಶಿಚಕ್ರದ ಸ್ಥಾನವು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ವ್ಯಕ್ತಿತ್ವದ ಲಕ್ಷಣಗಳು ಮತ್ತು ಅವರ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಮಹಿಳೆಯರು ಇತರ ರಾಶಿಚಕ್ರ ಚಿಹ್ನೆಗಳ ಮಹಿಳೆಯರಿಗಿಂತ ಹೆಚ್ಚು ಸುಂದರವಾಗಿರುತ್ತಾರೆ ಮತ್ತು ತಮ್ಮ ಸಣ್ಣ ಕೆಲಸಗಳಿಂದಲೂ ಇತರರನ್ನು ಸುಲಭವಾಗಿ ಆಕರ್ಷಿಸುವ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರಂತೆ. ಹಾಗಾದರೆ, ಯಾವ ರಾಶಿಯ ಮಹಿಳೆಯರು ಕೇವಲ ಪುರುಷರನ್ನು ಮಾತ್ರವಲ್ಲದೆ ಮಹಿಳೆಯರನ್ನೂ ಬೆರಗುಗೊಳಿಸುವಷ್ಟು ಸೌಂದರ್ಯವನ್ನು ಹೊಂದಿರುತ್ತಾರೆ ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.

ಮಿಥುನ ರಾಶಿ

ಬುಧನ ಆಳ್ವಿಕೆಯ ಮಿಥುನ ರಾಶಿಯು ಅತ್ಯಂತ ಸುಂದರವಾದ ರಾಶಿಚಕ್ರ ಚಿಹ್ನೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ರಾಶಿಚಕ್ರ ಚಿಹ್ನೆಯ ಮಹಿಳೆಯರ ಪ್ರತಿಯೊಂದು ನಡವಳಿಕೆಯಲ್ಲೂ ಒಂದು ಮುದ್ದಾದತನ ಇದ್ದೇ ಇರುತ್ತದೆ. ಈ ರಾಶಿಯವರು ತಮ್ಮ ಚುರುಕಾದ ಬುದ್ಧಿ ಮತ್ತು ತಮಾಷೆಯ ವರ್ತನೆಗೆ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ಆಕರ್ಷಕ, ಸುಂದರವಾದ ಮುಖಗಳು ಮತ್ತು ಕಾಂತೀಯ ಕಣ್ಣುಗಳನ್ನು ಹೊಂದಿರುತ್ತಾರೆ. ಅವರು ಎಲ್ಲೇ ಇದ್ದರೂ, ಇತರರ ಗಮನವೆಲ್ಲ ಅವರ ಮೇಲೆಯೇ ಇರುತ್ತದೆ. ಅವರು ತಮ್ಮ ಕಾಂತೀಯ ವ್ಯಕ್ತಿತ್ವ ಮತ್ತು ಆಕರ್ಷಕ ನೋಟದಿಂದ ಇತರರನ್ನು ಆಕರ್ಷಿಸುತ್ತಾರೆ.

ತುಲಾ ರಾಶಿ

ಸೌಂದರ್ಯ, ಪ್ರೀತಿ ಮತ್ತು ಸಾಮರಸ್ಯದ ಗ್ರಹವಾದ ಶುಕ್ರನಿಂದ ಆಳಲ್ಪಡುವ ತುಲಾ ರಾಶಿಯ ಮಹಿಳೆಯರು ತಮ್ಮ ಸಣ್ಣ ಮುಖಭಾವಗಳಿಂದಲೂ ಇತರರಿಗೆ ತುಂಬಾ ಆಕರ್ಷಕವಾಗಿರಬಹುದು. ಈ ರಾಶಿಯವರು ತಮ್ಮ ಶಾಂತಿಯುತ ಮತ್ತು ಕರುಣಾಳು ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ತಮ್ಮ ನೈಸರ್ಗಿಕ ಸೌಂದರ್ಯ ಮತ್ತು ಸೊಗಸಾದ ನೋಟದಿಂದಾಗಿ ಅವರು ಬೇಗನೆ ಇತರರನ್ನು ಆಕರ್ಷಿಸುತ್ತಾರೆ. ಈ ರಾಶಿಚಕ್ರದ ಮಹಿಳೆಯರು ತಮ್ಮ ನೋಟದಿಂದ ಮಾತ್ರವಲ್ಲದೆ ತಮ್ಮ ಆಂತರಿಕ ವ್ಯಕ್ತಿತ್ವದಿಂದಲೂ ಸುಂದರವಾಗಿರುತ್ತಾರೆ.

ಧನುಸ್ಸು ರಾಶಿ

ಗುರುವಿನ ಆಳ್ವಿಕೆಯಲ್ಲಿರುವ ಧನುಸ್ಸು ರಾಶಿ ಮಹಿಳೆಯರು ತಮಾಷೆ ಸ್ವಭಾವದವರಾಗಿದ್ದು, ಅವರು ಎಲ್ಲೇ ಇದ್ದರೂ ಸಂಭ್ರಮವನ್ನು ಸೃಷ್ಟಿಸುತ್ತಾರೆ. ಇತರರು ಅವರನ್ನು ನೋಡಿದ ತಕ್ಷಣ ಅವರ ಮೇಲೆ ಪ್ರೀತಿಯಾಗುತ್ತದೆ. ಅವರ ಆಕರ್ಷಕ ಮುಖಗಳು, ಸೊಗಸಾದ ಉಡುಗೆ ತೊಡುಗೆ ಮತ್ತು ನಡವಳಿಕೆ ಎಲ್ಲವೂ ನೋಡುಗರನ್ನು ಆನಂದಪಡಿಸುತ್ತದೆ. ಅವರ ಸ್ವಾಭಾವಿಕ ಮತ್ತು ಸಾಹಸಮಯ ಸ್ವಭಾವವು ಯಾವಾಗಲೂ ಅವರ ಸುತ್ತಮುತ್ತಲಿನವರನ್ನು ಆಕರ್ಷಿಸುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net